‘ಹಿಂದೂಗಳನ್ನು ಮರಳಿ ತನ್ನಿ’ ಎಂದ ರಾಹುಲ್ ಗಾಂಧಿ ಭಾಷಣ ವಿರುದ್ಧ ಒವೈಸಿ ವಾಗ್ದಾಳಿ
Asaduddin Owaisi "ರಾಹುಲ್ ಮತ್ತು ಕಾಂಗ್ರೆಸ್ ಹಿಂದುತ್ವದ ನೆಲಕ್ಕೆ ಗೊಬ್ಬರ ಹಾಕಿದರು. ಈಗ ಅವರು ಬಹುಮತವನ್ನು ಕೊಯ್ಲು ಮಾಡಲು ಪ್ರಯತ್ನಿಸುತ್ತಿದ್ದಾರೆ. 2021 ರಲ್ಲಿ ಹಿಂದೂಗಳನ್ನು ಅಧಿಕಾರಕ್ಕೆ ತರುವುದು ಜಾತ್ಯತೀತ ಅಜೆಂಡಾ. ವಾಹ್
ದೆಹಲಿ: ಹಿಂದೂಗಳನ್ನು ವೈಭವಕ್ಕೆ ಮರಳಿ ತರುವುದು ಹೇಗೆ ಎಂಬುದು 2021ರ ಜಾತ್ಯತೀತ ಅಜೆಂಡಾ ಆಗುತ್ತದೆ ಎಂದು ಪ್ರಶ್ನಿಸಿರುವ ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin owaisi) ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಜೈಪುರ ಭಾಷಣವನ್ನು ತರಾಟೆಗೆ ತೆಗೆದುಕೊಂಡರು. ಇದರಲ್ಲಿ ಗಾಂಧಿ ಭಾರತ ಹಿಂದೂಗಳ ದೇಶ, ಹಿಂದುತ್ವವಾದಿಗಳದಲ್ಲ ಎಂದು ಹೇಳಿದ್ದರು. “ರಾಹುಲ್ ಮತ್ತು ಕಾಂಗ್ರೆಸ್ ಹಿಂದುತ್ವದ ನೆಲಕ್ಕೆ ಗೊಬ್ಬರ ಹಾಕಿದರು. ಈಗ ಅವರು ಬಹುಮತವನ್ನು ಕೊಯ್ಲು ಮಾಡಲು ಪ್ರಯತ್ನಿಸುತ್ತಿದ್ದಾರೆ. 2021 ರಲ್ಲಿ ಹಿಂದೂಗಳನ್ನು ಅಧಿಕಾರಕ್ಕೆ ತರುವುದು ಜಾತ್ಯತೀತ ಅಜೆಂಡಾ. ವಾಹ್! ಭಾರತವು ಎಲ್ಲಾ ಭಾರತೀಯರಿಗೆ ಸೇರಿದೆ. ಹಿಂದೂಗಳಿಗೆ ಮಾತ್ರವಲ್ಲ. ಭಾರತವು ಎಲ್ಲಾ ನಂಬಿಕೆಯ ಜನರಿಗೆ ಮತ್ತು ನಂಬಿಕೆ ಇಲ್ಲದವರಿಗೆ ಸೇರಿದೆ’ ಎಂದು ಒವೈಸಿ ಟ್ವೀಟ್ ಮಾಡಿದ್ದಾರೆ. ಸಲ್ಮಾನ್ ಖುರ್ಷಿದ್ ಅವರು ಅಯೋಧ್ಯೆ ತೀರ್ಪಿನ ಹೊಸ ಪುಸ್ತಕದಲ್ಲಿ ಹಿಂದುತ್ವದ ಬಗ್ಗೆ ಮಾಡಿದ ಕಾಮೆಂಟ್‌ಗೆ ಕಾಂಗ್ರೆಸ್ ಟೀಕೆಗೆ ಗುರಿಯಾಗುತ್ತು. ಇದು ಪಕ್ಷದ ಹಿರಿಯ ನಾಯಕರಲ್ಲಿ ಭಿನ್ನಾಭಿಪ್ರಾಯವನ್ನೂ ಸೃಷ್ಟಿಸಿದೆ. ಹಿಂದು ಮತ್ತು ಹಿಂದುತ್ವದ ನಡುವೆ ಪ್ರತ್ಯೇಕ ಗೆರೆ ಎಳೆದಿರುವ ರಾಹುಲ್ ಗಾಂಧಿ, ಎಲ್ಲ ಧರ್ಮಗಳನ್ನು ಗೌರವಿಸುವ, ಎಲ್ಲರನ್ನು ಅಪ್ಪಿಕೊಳ್ಳುವ ಮತ್ತು ಯಾವುದಕ್ಕೂ ಭಯಪಡದವನೇ ಹಿಂದೂ ಎಂದು ಹೇಳಿದ್ದಾರೆ. “ಯಾವುದೇ ಗ್ರಂಥವನ್ನು ಓದಿ ಗೀತೆ, ಉಪನಿಷತ್ತು, ರಾಮಾಯಣ, ಮಹಾಭಾರತಗಳಲ್ಲಿ ಇರಲಿ. ಬಡವರು ಮತ್ತು ದುರ್ಬಲರು ತುಳಿತಕ್ಕೊಳಗಾಗಬೇಕು ಎಂದು ಎಲ್ಲಿ ಬರೆಯಲಾಗಿದೆ? ಎದು ರಾಹುಲ್ ಭಾಷಣದಲ್ಲಿ ಪ್ರಶ್ನಿಸಿದ್ದರು.
Rahul & INC fertilised the ground for Hindutva. Now they’re trying to harvest majoritarianism. Bringing “Hindus to power” is a “secular” agenda in 2021. Wah!
India belongs to all Bharatiyas. Not Hindus alone. India belongs to people of all faiths & also those who have no faith pic.twitter.com/9EfpynChqU
— Asaduddin Owaisi (@asadowaisi) December 12, 2021
“ದೇಶದಲ್ಲಿ ಹಣದುಬ್ಬರವಿದ್ದರೆ ಮತ್ತು ನರಳುತ್ತಿದ್ದರೆ, ಇದನ್ನು ಹಿಂದುತ್ವವಾದಿಗಳು ಮಾಡಿದ್ದಾರೆ, ಹಿಂದುತ್ವವಾದಿಗಳು ಯಾವುದೇ ಬೆಲೆಗೆ ಅಧಿಕಾರವನ್ನು ಬಯಸುತ್ತಾರೆ” ಎಂದು ರಾಹುಲ್ ಹೇಳಿದರು. ಮಹಾತ್ಮ ಗಾಂಧಿ ಹಿಂದೂ ಮತ್ತು ಗೋಡ್ಸೆ ಹಿಂದುತ್ವವಾದಿ, ಒಬ್ಬ ಹಿಂದೂ ನಿರಂತರವಾಗಿ ಸತ್ಯವನ್ನು ಹುಡುಕುತ್ತಾನೆ ಮತ್ತು ಮಹಾತ್ಮ ಗಾಂಧಿಯಂತೆ ತನ್ನ ಇಡೀ ಜೀವನವನ್ನು ಹುಡುಕಾಟಕ್ಕಾಗಿ ವಿನಿಯೋಗಿಸುತ್ತಾನೆ ಮತ್ತು ಹಿಂದುತ್ವವಾದಿ ತನ್ನ ಇಡೀ ಜೀವನವನ್ನು ಅಧಿಕಾರಕ್ಕಾಗಿ ಕಳೆಯುತ್ತಾನೆ ಎಂದು ವಿವರಿಸಿದರು. ಹಿಂದುತ್ವವಾದಿಯ ಮಾರ್ಗ ‘ಸತ್ತಾ’ಗ್ರಹವೇ ಹೊರತು ಸತ್ಯಾಗ್ರಹವಲ್ಲ. ನಾನು ಹಿಂದುವೇ ಹೊರತು ಹಿಂದುತ್ವವಾದಿಯಲ್ಲ ಎಂದು ಅವರು ಹೇಳಿದರು.
ಶ್ರೀಕೃಷ್ಣನು ಅರ್ಜುನನಿಗೆ ಅಧಿಕಾರಕ್ಕಾಗಿ ಸಹೋದರರನ್ನು ಕೊಲ್ಲಲು ಹೇಳಲಿಲ್ಲ. ಸಾಯಬೇಕಾದರೂ ಸತ್ಯಕ್ಕಾಗಿ ಹೋರಾಡಿ ಎಂದು ಗೀತೆಯಲ್ಲಿ ಬರೆಯಲಾಗಿದೆ ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ: ನಾನು ಹಿಂದೂ, ಹಿಂದುತ್ವವಾದಿ ಅಲ್ಲ: ಜೈಪುರದಲ್ಲಿ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ