ಅನೈತಿಕ ಸಂಬಂಧ ಹೊಂದಿದ್ದಕ್ಕೆ ಕೊಲೆ? ದೇವಸ್ಥಾನದ ಮಾಳಿಗೆಯಲ್ಲಿ ಒಂದು ವರ್ಷದ ನಂತರ ಸಿಕ್ತು ಶವ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 12, 2021 | 10:14 PM

ಕೋಣೆ ಒಳಗೆ ಇದ್ದ ಪೆಟ್ಟಿಗೆ ಒಂದನ್ನು ತೆಗೆದಾಗ ಒಂದು ಅಸ್ಥಿಪಂಜರ ಕಂಡಿತ್ತು. ದೇವಾಲಯ ಆಡಳಿತ ಮಂಡಳಿಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅನೈತಿಕ ಸಂಬಂಧ ಹೊಂದಿದ್ದಕ್ಕೆ ಕೊಲೆ? ದೇವಸ್ಥಾನದ ಮಾಳಿಗೆಯಲ್ಲಿ ಒಂದು ವರ್ಷದ ನಂತರ ಸಿಕ್ತು ಶವ!
ಪೆಟ್ಟಿಗೆಯಲ್ಲಿ ಸಿಕ್ಕ ಅಸ್ಥಿಪಂಜರ
Follow us on

ಹೈದರಾಬಾದ್​: ಇಲ್ಲಿನ ಎಸ್.‌ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನದ ನೆಲಮಾಳಿಗೆಯ ಕೊಠಡಿಯೊಂದರ ಕಬ್ಬಿಣ ಪೆಟ್ಟಿಗೆಯಲ್ಲಿ ಬುಧವಾರ ಅಸ್ಥಿಪಂಜರ ಒಂದು ಪತ್ತೆ ಆಗಿತ್ತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಆದರೆ, ಇದು ಯಾರ ಶವ, ಇಲ್ಲಿಗೆ ಹೇಗೆ ಬಂದಿತ್ತು ಎನ್ನುವ ವಿಚಾರ ಪೊಲೀಸರಿಗೆ ಯಕ್ಷ ಪ್ರಶ್ನೆ ಆಗಿತ್ತು. ಈಗ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಒಂದು ವರ್ಷದ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಕೊಲೆ ಪ್ರಕರಣ ಈಗ ಬೆಳಕಿಗೆ ಬಂದಿದೆ. ಎಸ್.‌ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೊರಬೊಂಡಾದಲ್ಲಿ ಈ ಘಟನೆ ನಡೆದಿದೆ. ಇಂದಿರಾನಗರದ ಸಾಯಿಬಾಬಾ ಗುಡಿ ದೇವಾಲಯದ ನೆಲಮಾಳಿಗೆಯಲ್ಲಿ ಒಂದು ಕೋಣೆ ಇತ್ತು. ಈ ಕೊಠಡಿಯನ್ನು 2017 ರಲ್ಲಿ ಉತ್ತರ ಪ್ರದೇಶದ ಪಲಾಶ್​ ಪಾಲ್ ಎಂಬಾತ ಬಾಡಿಗೆಗೆ ಪಡೆದಿದ್ದ. ವೃತ್ತಿಯಲ್ಲಿ ಬಡಗಿ ಆಗಿರುವ ಪಾಲ್​, ತನ್ನ ವಸ್ತುಗಳನ್ನು ಸಂಗ್ರಹಿಸಲು ಈ ಕೊಠಡಿಯನ್ನು ಬಳಸುತ್ತಿದ್ದ. ಪ್ರತಿ ತಿಂಗಳು ಇದಕ್ಕೆ ಆತ ಬಾಡಿಗೆ ತುಂಬುತ್ತಿದ್ದ. ದೇವಾಲಯದ ಆಡಳಿತ ಮಂಡಳಿ ಈ ಹಣವನ್ನು ಅರ್ಚಕರಿಗೆ ಪಾವತಿಸುತ್ತಿತ್ತು.

ಈ ಪ್ರಕ್ರಿಯೆ ನಡೆದೇ ಇತ್ತು. ಆದರೆ, ಕರೋನಾ ಸಂದರ್ಭದಲ್ಲಿ ಪಾಲ್ ಉತ್ತರ ಪ್ರದೇಶಕ್ಕೆ ತೆರಳಿದ್ದ. ಆತ ಫೋನ್‌ನಲ್ಲಿ ಸಂಪರ್ಕದಲ್ಲಿ ಕೂಡ ಇದ್ದರು. ಆದರೆ, ಪಾಲ್​ ಬಾಡಿಗೆ ಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದ. ಹೀಗಾಗಿ, ಈ ಕೋಣೆಯನ್ನು ಬೇರೊಬ್ಬರಿಗೆ ಬಾಡಿಗೆಗೆ ನೀಡಲು ಆಡಳಿತ ಮಂಡಳಿ ಮುಂದಾಗಿತ್ತು. ಕೋಣೆಯನ್ನು ಖಾಲಿ ಮಾಡಲು ಹೋಗಿತ್ತು.

ಕೋಣೆ ಒಳಗೆ ಇದ್ದ ಪೆಟ್ಟಿಗೆ ಒಂದನ್ನು ತೆಗೆದಾಗ ಒಂದು ಅಸ್ಥಿಪಂಜರ ಕಂಡಿತ್ತು. ದೇವಾಲಯ ಆಡಳಿತ ಮಂಡಳಿಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶವವನ್ನು ಕೊಲೆ ಮಾಡಿ ಪೆಟ್ಟಿಗೆಯಲ್ಲಿ ಇಡಲಾಗಿದೆ ಎಂಬ ಪ್ರಾಥಮಿಕ ತೀರ್ಮಾನಕ್ಕೆ ಪೊಲೀಸರು ಬಂದರು. ಬಡಗಿ ಪಾಲ್​ ಉತ್ತರ ಪ್ರದೇಶಕ್ಕೆ ತೆರಳೇ ಇಲ್ಲ. ಹೈದರಾಬಾದ್​ನಲ್ಲೇ ಇದ್ದರು ಎನ್ನುವ ವಿಚಾರ ಪೊಲೀರಿಗೆ ಗೊತ್ತಾಗಿತ್ತು. ನಂತರ ಆತನನ್ನು ಬಂಧಿಸಲಾಗಿದೆ.

ಪೆಟ್ಟಿಗೆಯಲ್ಲಿ ಇದ್ದಿದ್ದು ಕಮಲ್ ಮೈತಿ ಎಂಬಾತನ ಶವ ಎಂದು ಗುರುತಿಸಲಾಗಿದೆ. ಕಮಲ್, ಪಾಲ್​ ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕನಾಗಿದ್ದ. ಅನೈತಿಕ ಸಂಬಂಧದ ವಿಚಾರಕ್ಕೆ ಸಂಬಂಧಿಸಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ: ದೇವದುರ್ಗದಲ್ಲಿ ಯುವಕನ ರುಂಡವಿಲ್ಲದ ಮೃತದೇಹ ಪತ್ತೆ