Zero Shadow Day: ಹೈದರಾಬಾದ್​​ನಲ್ಲಿಂದು ಶೂನ್ಯ ನೆರಳಿನ ದಿನ; ಈ ಖಗೋಳ ವಿಸ್ಮಯ ಹೇಗಿರುತ್ತದೆ?

|

Updated on: Aug 03, 2023 | 1:04 PM

ಈ ವಿದ್ಯಮಾನವು ಅಪರೂಪವಾಗಿದ್ದು ಒಂದೊಂದು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಗೋಚರವಾಗುತ್ತದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಏಪ್ರಿಲ್‌ನಲ್ಲಿ ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ವಿದ್ಯಮಾನವನ್ನು ಗುರುತಿಸಿತ್ತು.

Zero Shadow Day: ಹೈದರಾಬಾದ್​​ನಲ್ಲಿಂದು ಶೂನ್ಯ ನೆರಳಿನ ದಿನ; ಈ ಖಗೋಳ ವಿಸ್ಮಯ ಹೇಗಿರುತ್ತದೆ?
ಶೂನ್ಯ ನೆರಳಿನ ದಿನ
Follow us on

ಹೈದರಾಬಾದ್ ಆಗಸ್ಟ್ 03: ಹೈದರಬಾದ್​​ನಲ್ಲಿ (Hyderabad) ಆಗಸ್ಟ್ 3( ಗುರುವಾರ) ಮಧ್ಯಾಹ್ನ 12.23 ಕ್ಕೆ ‘ಶೂನ್ಯ ನೆರಳು ದಿನ’ (Zero Shadow Day)ಎಂಬ ಅಪರೂಪದ ಆಕಾಶ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಈ ವರ್ಷ ಮೇ 9 ರಂದು ಕೂಡಾ ಇದೇ ಖಗೋಳ ವಿಸ್ಮಯ ಸಂಭವಿಸಿತ್ತು. ತೆಲಂಗಾಣ ಟುಡೇ ಪ್ರಕಟಿಸಿದ ವರದಿಯ ಪ್ರಕಾರ ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ. ಇದು ಸಮಭಾಜಕ ಸಮೀಪವಿರುವ ಪ್ರದೇಶಗಳಲ್ಲಿ ನಡೆಯುತ್ತದೆ. ಅಂದರೆ, ಮಕರ ಸಂಕ್ರಾಂತಿ ಮತ್ತು ಕರ್ಕಾಟಕ ಸಂಕ್ರಾಂತಿಯ ನಡುವೆ ಇದು ಸಂಭವಿಸುತ್ತದೆ. ಶೂನ್ಯ ನೆರಳು ದಿನ ಅಂದರೆ ಆ ದಿನ ಸೂರ್ಯನು ಭೂಮಿಯ ಸಮಭಾಜಕ ರೇಖೆಯ ಮೇಲೆ (equator) ನೇರವಾಗಿ ಬಂದಾಗ ಯಾವುದೇ ವಸ್ತು ಅಥವಾ ಜೀವಿಯ ನೆರಳು ಬೀಳುವುದಿಲ್ಲ ಎಂದು ಎಎನ್ಐ ವರದಿ ಮಾಡಿದೆ.

ಹೈದರಾಬಾದ್‌ನಲ್ಲಿ ಶೂನ್ಯ ನೆರಳು ದಿನವನ್ನು ತೆರೆದ ಜಾಗದಲ್ಲಿ ಅನುಭವಿಸಬಹುದು. ಸೂರ್ಯನು ನೇರವಾಗಿ ಮೇಲಿರುವ ತೆರೆದ ಪ್ರದೇಶದಲ್ಲಿ ನಿಂತು ಇದನ್ನು ನೋಡಬಹುದು. ಇಂದು ಮಧ್ಯಾಹ್ನ 12.22ಕ್ಕೆ ಇದು ಸಂಭವಿಸಿದ್ದು, ಯಾವುದೇ ಲಂಬ ವಸ್ತುವಿನ ನೆರಳು ಕಣ್ಮರೆಯಾಗುತ್ತದೆ.

ಇಂದು ಶೂನ್ಯ ನೆರಳು ದಿನವನ್ನು ಆಚರಿಸಲು ಬಯಸುವ ಉತ್ಸಾಹಿಗಳಿಗೆ ಹೈದರಾಬಾದ್‌ನಲ್ಲಿರುವ ಬಿರ್ಲಾ ತಾರಾಲಯವು ಸೂಕ್ತ ಸ್ಥಳವಾಗಿದೆ ಎಂದು ಕೆಲವು ಮಾಧ್ಯಮ ವರದಿಗಳು ಸೂಚಿಸಿವೆ.

ಈ ವರ್ಷದ ಮೇ ತಿಂಗಳಲ್ಲಿ, ಬಿರ್ಲಾ ತಾರಾಲಯವು ಈ ವಿದ್ಯಮಾನವನ್ನು ಪ್ರದರ್ಶಿಸಲು ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಲ್ಲಿ ಅವರು ವರ್ಣಮಾಲೆಗಳನ್ನು ಹೊಂದಿರುವ ಫಲಕವನ್ನು ಇರಿಸಿದರು. ಸೂರ್ಯನು ಅದರ ಉತ್ತುಂಗದಿಂದ ದೂರ ಸರಿಯುತ್ತಿದ್ದಂತೆ, ವರ್ಣಮಾಲೆಯು ಮಸುಕಾಗಲು ಪ್ರಾರಂಭಿಸಿತು.

ಹೈದರಾಬಾದ್ ಹೊರತುಪಡಿಸಿ, ಬೆಂಗಳೂರು ಕೂಡ ಈ ವರ್ಷದ ಏಪ್ರಿಲ್‌ನಲ್ಲಿ ಶೂನ್ಯ ನೆರಳು ದಿನವನ್ನು ಕಂಡಿತ್ತು. ಎಪ್ರಿಲ್ 25ರಂದು ಮಧ್ಯಾಹ್ನ 12.17ಕ್ಕೆ ನಗರದಲ್ಲಿನ ಎಲ್ಲಾ ಲಂಬ ವಸ್ತುಗಳು ಅಲ್ಪಾವಧಿಗೆ ನೆರಳಿಲ್ಲದಂತಾದವು.

ಇದನ್ನೂ ಓದಿ: ವಿಮಾನದಲ್ಲಿ ಸುಟ್ಟ ವಾಸನೆ, ಕೊಚ್ಚಿ ನಿಲ್ದಾಣಕ್ಕೆ ಹಿಂದಿರುಗಿದ ಏರ್​ ಇಂಡಿಯಾ ಎಕ್ಸ್​ಪ್ರೆಸ್​

ಈ ವಿದ್ಯಮಾನವು ಅಪರೂಪವಾಗಿದ್ದು ಒಂದೊಂದು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಗೋಚರವಾಗುತ್ತದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಏಪ್ರಿಲ್‌ನಲ್ಲಿ ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ವಿದ್ಯಮಾನವನ್ನು ಗುರುತಿಸಿತ್ತು.

ಕಳೆದ ವರ್ಷ, ಕೋಲ್ಕತ್ತಾ ತನ್ನ ಶೂನ್ಯ ನೆರಳು ಕ್ಷಣವನ್ನು ಜೂನ್ 5 ರಂದು ವೀಕ್ಷಿಸಿತು. ನಗರವು 2022 ರಲ್ಲಿ ಜುಲೈ 7 ರಂದು ತನ್ನ ಎರಡನೇ ಶೂನ್ಯ ನೆರಳು ದಿನವನ್ನು ಕಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ