ದೆಹಲಿ, ಜೂ.1: ಸಿಂಗಲ್ಸ್ ಹುಡುಗರ ಸಂಖ್ಯೆ ಹೆಚ್ಚಾಗಿದೆ. ಇವರದ್ದು ದಿನಕ್ಕೊಂದು ಗೋಳು, ಇಲ್ಲೊಬ್ಬ ವ್ಯಕ್ತಿ ತನಗೊಂದು ಗೆಳತಿಯನ್ನು ಹುಡುಕಲು ಸಹಾಯ ಮಾಡುವಂತೆ ದೆಹಲಿ ಪೊಲೀಸರಿಗೆ ಕೇಳಿಕೊಂಡಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರು ತಮಾಷೆಯಾಗಿ ಎಕ್ಸ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ದೆಹಲಿ ಪೊಲೀಸರು ವಿಶ್ವ ತಂಬಾಕು ರಹಿತ ದಿನದ ಸಂದರ್ಭದಲ್ಲಿ ಈ ಬಗ್ಗೆ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಎಕ್ಸ್ನಲ್ಲಿ ಭಾರೀ ವೈರಲ್ ಆಗಿದೆ. ಎಲ್ಲರೂ ಕೂಡ ಈ ಬಗ್ಗೆ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಈ ಪೋಸ್ಟ್ನಲ್ಲಿ ನನಗೆ ಒಂದು ಗೆಳತಿಯನ್ನು ಹುಡುಕಲು ಸಹಾಯ ಮಾಡುವಂತೆ ದೆಹಲಿ ಪೊಲೀಸರನ್ನು ಕೇಳಿಕೊಂಡಿದ್ದಾನೆ. ಇನ್ನು ಈ ಪೋಸ್ಟ್ನಲ್ಲಿ ಯುವಕ ಸಿಂಗಲ್ ಎಂದು ಬರೆಯುವ ಬದಲು ಸಿಗ್ನಲ್ ಎಂದು ಬರೆದುಕೊಂಡಿದ್ದಾನೆ. ಇದನ್ನು ಪೊಲೀಸರು ತುಂಬಾ ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಜತೆಗೆ ಆ ಯುವಕ ಇದು ನ್ಯಾಯವಲ್ಲ ನನಗೆ ಗೆಳತಿಯನ್ನು ಹುಡುಕಲು ನೀವು ನನಗೆ ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾನೆ.
Sir, we can help you find her (only if she ever goes missing).
Tip: If you are a ‘signal’, we hope you stay green, not red. https://t.co/3wHDwGxlEl
— Delhi Police (@DelhiPolice) May 31, 2024
ಇತನ ಮನವಿಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, ಸರ್, ಆಕೆಯನ್ನು ಹುಡುಕಲು ನಾವು ನಿಮಗೆ ಸಹಾಯ ಮಾಡಬಹುದು ಅದು ಯಾವಾಗ ಆಕೆ ಕಾಣೆಯಾದಾಗ, ನೀವು ಸಿಗ್ನಲ್ ಆಗಿದ್ದರೆ, ನೀವು ಹಸಿರು ಬಣ್ಣದಲ್ಲಿರುತ್ತೀರಿ, ಕೆಂಪು ಬಣ್ಣ ಅಲ್ಲ ಎಂದು ಹೇಳಿದ್ದಾರೆ. (ನೀವು ಗಲ್ಫ್ರೆಂಡ್ ಇಲ್ಲದೆ ಸೇಫ್ ಆಗಿದ್ದಾರೆ. ಕೆಂಪು ಬಣ್ಣದ ಡೇಂಜರ್ನಲ್ಲಿ ಇಲ್ಲ ಎಂದು)
ವಿಶ್ವ ತಂಬಾಕು ರಹಿತ ದಿನದ ಸಂದರ್ಭದಲ್ಲಿ ಎಕ್ಸ್ನಲ್ಲಿ ದೆಹಲಿ ಪೊಲೀಸರು ಆ ಯುವಕನ ಫೋಸ್ಟ್ ಜತೆಗೆ ಎರಡು ನಗುತ್ತಿರುವ ಎಮೋಟಿಕಾನ್ ಜತೆಗೆ ನೀವು ತಂಬಾಕು ಸೇವಿಸಿದಾಗ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರ “ತಂಬಾಕು ನಿಮ್ಮನ್ನು ಕೊಲ್ಲುವುದು ಮಾತ್ರವಲ್ಲ, ನಿಮ್ಮ ನಗುವನ್ನೂ ಸಹ ಕೊಲ್ಲುತ್ತದೆ ಎಂಬ ಅರ್ಥದಲ್ಲಿ ದೆಹಲಿ ಪೊಲೀಸರು ನೀಡಿದ್ದಾರೆ.
ಇದನ್ನೂ ಓದಿ: ಗುದನಾಳದಲ್ಲಿ 1 ಕೆಜಿ ಚಿನ್ನ ಸ್ಮಗ್ಲಿಂಗ್; ಕೇರಳದಲ್ಲಿ ಏರ್ ಇಂಡಿಯಾ ಗಗನಸಖಿ ಬಂಧನ
ಇದರ ಜತೆಗೆ ಪೊಲೀಸರು ತನ್ನ ಎಕ್ಸ್ ಖಾತೆಯಲ್ಲಿ ಅಮೆಜಾನ್ ಪ್ರೈಮ್ ವೀಡಿಯೊ ಸರಣಿಯ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂಬುದನ್ನು ಈ ವಿಡಿಯೋ ಹೇಳುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ