ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ ಧ್ಯಾನಾಸಕ್ತ ಪ್ರಧಾನಿ ಮೋದಿಯಿಂದ ಶನಿವಾರ ಸೂರ್ಯೋದಯ ವೀಕ್ಷಣೆ

ಆಧ್ಯಾತ್ಮಿಕ, ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ನಂತರ ಪ್ರಧಾನಿ ಮೋದಿ ರಾಕ್ ಮೆಮೋರಿಯಲ್ ಮೆಟ್ಟಿಲುಗಳ ಮೇಲೆ ಕುಳಿತುಕೊಂಡರು. ಪ್ರಧಾನಿಯವರ ಧ್ಯಾನ ಇವತ್ತು ಮಧ್ಯಾಹ್ನ ಕೊನೆಗೊಳ್ಳಲಿದ್ದು ಅಲ್ಲಿಂದ ತೆರಳಿ ಅವರು ಕನ್ಯಾಕುಮಾರಿಯಲ್ಲೇ ಇರುವ 133 ಅಡಿ ಎತ್ತರದ ತಿರುವಲ್ಲುವರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ ಧ್ಯಾನಾಸಕ್ತ ಪ್ರಧಾನಿ ಮೋದಿಯಿಂದ ಶನಿವಾರ ಸೂರ್ಯೋದಯ ವೀಕ್ಷಣೆ
|

Updated on: Jun 01, 2024 | 11:07 AM

ಕನ್ಯಾಕುಮಾರಿ (ತಮಿಳುನಾಡು): ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ (Vivekananda Rock Memorial) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಧ್ಯಾನ, ಮೌನವ್ರತ, ಪೂಜೆ ಮತ್ತು ಯೋಗ ಮೂರನೇ ಮತ್ತು ಕೊನೆಯ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಬೆಳಗಿನ ಜಾವವೇ ಎದ್ದ ಪ್ರಧಾನಿ ಮೋದಿ ಭಕ್ತಿಯ ಪ್ರತೀಕವಾಗಿರುವ ಕಾವಿ ಉಡುಗೆ ತೊಟ್ಟು ಹಣೆಗೆ ವಿಭೂತಿ (holy ash) ಮತ್ತು ತಿಲಕವನ್ನಿಟ್ಟು ಕೈಯಲ್ಲಿ ಜಪಮಣಿಯೊಂದಿಗೆ ಮಂತ್ರ ಪಠಿಸುತ್ತಾ ಸೂರ್ಯೋದಯ ವೀಕ್ಷಿಸಿದರು ಮತ್ತು ಸೂರ್ಯದೇವನಿಗೆ ವಂದನೆ ಸಲ್ಲಿಸಿದರು. ಅದಾದ ಮೇಲೆ ಅವರು ವಿವೇಕಾನಂದ ಧ್ಯಾನ ಕೇಂದ್ರದಲ್ಲಿ ಧ್ಯಾನಾಸಕ್ತರಾದರು. ವಿವೇಕಾನಂದ ಪ್ರತಿಮೆಗೆ ಪೂಜೆ ಸಲ್ಲಿಸಿದ ಮೇಲೆ ಅವರು ಸ್ವಲ್ಪ ಹೊತ್ತು ಪ್ರಾಣಯಾಮ ಮಾಡುವುದನ್ನು ನೋಡಬಹುದು. ಆಧ್ಯಾತ್ಮಿಕ, ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ನಂತರ ಅವರು ರಾಕ್ ಮೆಮೋರಿಯಲ್ ಮೆಟ್ಟಿಲುಗಳ ಮೇಲೆ ಕುಳಿತುಕೊಂಡರು. ಪ್ರಧಾನಿ ಮೋದಿಯವರ ಧ್ಯಾನ ಇವತ್ತು ಮಧ್ಯಾಹ್ನ ಕೊನೆಗೊಳ್ಳಲಿದ್ದು ಅಲ್ಲಿಂದ ತೆರಳಿ ಅವರು ಕನ್ಯಾಕುಮಾರಿಯಲ್ಲೇ ಇರುವ 133 ಅಡಿ ಎತ್ತರದ ತಿರುವಲ್ಲುವರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Modi in Kanniyakumari: ಧ್ಯಾನಕ್ಕೂ ಮುನ್ನ ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

Follow us