ದೆಹಲಿ: ಕಾಂಗ್ರೆಸ್ನಲ್ಲಿ ಭವಿಷ್ಯದ ಸಿಎಂ ಅಭ್ಯರ್ಥಿ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ MLC ಸಿ.ಎಂ.ಇಬ್ರಾಹಿಂ ಹೇಳಿಕೆ ಗಮನಿಸಿದ್ದೇನೆ. ಇಬ್ರಾಹಿಂ ಸಿಎಂ ಆಗಬೇಕು ಎಂಬ ಹೇಳಿಕೆಯಲ್ಲಿ ನ್ಯಾಯ ಇದೆ. ನನ್ನ ಬೆಂಬಲ ಸಿ.ಎಂ.ಇಬ್ರಾಹಿಂಗೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಬಿಜೆಪಿಗೆ ಬಹುಮತವಿದೆ, ಯಡಿಯೂರಪ್ಪ ಸಿಎಂ ಆಗಿದ್ದಾರೆ. ಕಾಂಗ್ರೆಸ್‌ನವರು ಬಹುಮತ ಇಲ್ಲದಿದ್ರೂ ಹಲವರು ಸಿಎಂ ಆಗಲು ಕನಸು ಕಾಣುತ್ತಿದ್ದಾರೆ. ಹನುಮಂತನ ಬಾಲದ ರೀತಿಯಲ್ಲಿ ಪಟ್ಟಿ ಬೆಳೆಯುತ್ತಿದೆ. ಕಾಂಗ್ರೆಸ್ MLC ಸಿ.ಎಂ.ಇಬ್ರಾಹಿಂ ಹೇಳಿಕೆ ಗಮನಿಸಿದ್ದೇನೆ. ಇಬ್ರಾಹಿಂ ಸಿಎಂ ಆಗಬೇಕು, ಹೇಳಿಕೆಯಲ್ಲಿ ನ್ಯಾಯ ಇದೆ. ನನ್ನ ಬೆಂಬಲ ಸಿ.ಎಂ.ಇಬ್ರಾಹಿಂಗೆ ಇದೆ ಎಂದರು.
ಅವರ ಹೆಸರಿನಲ್ಲೇ ಸಿ.ಎಂ. ಇದೆ, ಅದನ್ನು ಅಧಿಕೃತ ಮಾಡಿ. ಇಬ್ರಾಹಿಂ ಅನೇಕ ಜನರಿಗೆ ಪೌರೋಹಿತ್ಯ ವಹಿಸಿದ್ದಾರೆ. ಪೌರೋಹಿತ್ಯ ವಹಿಸಿದವರಿಗೆ ತಾನು ಮದುವೆಯಾಗಬೇಕು ಎಂದು ಆಸೆ ಇರುತ್ತದೆ. ಕಾಂಗ್ರೆಸ್ಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ರೆ ಮಾಡಲಿ. ಅಲ್ಪಸಂಖ್ಯಾತರ ಮೊಣಕೈಗೆ ತುಪ್ಪ ಸವರಬೇಡಿ. ದಲಿತರಿಗೆ ಮೋಸ ಮಾಡಿದ್ರಿ, ಅಲ್ಪಸಂಖ್ಯಾತರಿಗೆ ಮಾಡಬೇಡಿ. ಜಮೀರ್, ತನ್ವೀರ್, ಇಬ್ರಾಹಿಂ ಯಾರನ್ನಾದ್ರೂ ಮಾಡಿ ಆದ್ರೆ ಇಬ್ರಾಹಿಂ ಅವರನ್ನು ಸಿಎಂ ಮಾಡಲು ನನ್ನ ಬೆಂಬಲ ಇದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ರು.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ನಲ್ಲಿ ತಾರಕಕ್ಕೇರಿದ ಸಿಎಂ ಗಲಾಟೆ; ಖಡಕ್ ಸೂಚನೆ ನೀಡಲು ರಾಹುಲ್ಗೆ ಹಿರಿಯ ನಾಯಕರ ಒತ್ತಾಯ