ಹಿಜಾಬ್ ಧರಿಸಿದ ಮಹಿಳೆ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾಳೆ; ಅಸಾದುದ್ದೀನ್ ಓವೈಸಿ ಭವಿಷ್ಯ

| Updated By: ಸುಷ್ಮಾ ಚಕ್ರೆ

Updated on: Oct 26, 2022 | 2:24 PM

ಮುಂದೊಂದು ದಿನ ಹಿಜಾಬ್ ಧರಿಸಿರುವ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 

ಹಿಜಾಬ್ ಧರಿಸಿದ ಮಹಿಳೆ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾಳೆ; ಅಸಾದುದ್ದೀನ್ ಓವೈಸಿ ಭವಿಷ್ಯ
ಅಸಾದುದ್ದೀನ್ ಓವೈಸಿ
Follow us on

ನವದೆಹಲಿ: ಬ್ರಿಟನ್‌ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಪ್ರಧಾನಿಯಾಗುತ್ತಾರೆ ಎಂಬ ಮಾತುಗಳು ನಡೆಯುತ್ತಿದ್ದರೆ, ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಅವರು ಹಿಜಾಬ್ (Hijab) ಹೊಂದಿರುವ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಟ್ವೀಟ್‌ಗೆ ಓವೈಸಿ ಪ್ರತಿಕ್ರಿಯಿಸಿದ್ದು, ಬ್ರಿಟನ್ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ಪ್ರಧಾನಿಯಾಗಲು ಅವಕಾಶ ನೀಡಿದೆ. ಇದು ಭಾರತದಲ್ಲಿ ಆಗಲು ಸಾಧ್ಯವೇ? ಎಂದಿದ್ದಾರೆ.

ಮುಂದೊಂದು ದಿನ ಹಿಜಾಬ್ ಧರಿಸಿರುವ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಬ್ರಿಟನ್​ನಲ್ಲಿ ರಿಷಿ ಸುನಕ್ ಪ್ರಧಾನಿಯಾಗಿರುವ ಕುರಿತು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಇನ್ಶಾ ಅಲ್ಲಾಹ್ ಹಿಜಾಬ್ ಧರಿಸಿದ ಹುಡುಗಿ ಭಾರತದ ಪ್ರಧಾನಿಯಾಗುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಶಾಸಕ ಯತ್ನಾಳ್​ಗೆ​ ಪ್ರೀತಿ ಇದೆ, ಅದಕ್ಕೇ ಪದೇ ಪದೇ ಹೇಳುತ್ತಾರೆ: ಅಸಾದುದ್ದೀನ್ ಓವೈಸಿ

ಓವೈಸಿ ಈ ರೀತಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ವಿವಾದದ ಸಂದರ್ಭದಲ್ಲಿ ಈ ವಿಷಯಗಳನ್ನು ಹೇಳಲಾಗಿತ್ತು. ನನ್ನ ಜೀವನದಲ್ಲಿ ಅಥವಾ ನನ್ನ ಜೀವನದ ನಂತರ ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುತ್ತಾಳೆ ಎಂದು ಓವೈಸಿ ಹೇಳಿದ್ದರು.

ಮುಸ್ಲಿಮರನ್ನು ದೇಶದಿಂದ ತೊಲಗಿಸುವುದು ಬಿಜೆಪಿಯ ಗುರಿ:
ಬಿಜೆಪಿ ಮುಸ್ಲಿಮರ ವಿರುದ್ಧವಾಗಿದೆ. ಮುಸ್ಲಿಮರನ್ನು ದೇಶದಿಂದ ತೊಲಗಿಸುವುದು ಅದರ ನಿಜವಾದ ಉದ್ದೇಶವಾಗಿದೆ ಎಂದು ಎಐಎಂಐಎಂ ಅಧ್ಯಕ್ಷ ಓವೈಸಿ ಹೇಳಿದ್ದಾರೆ. ಹಲಾಲ್ ಮಾಂಸ ದೇಶಕ್ಕೆ ಅಪಾಯಕಾರಿಯಾಗಿದೆ, ಮುಸಲ್ಮಾನನ ಗಡ್ಡ ಅಪಾಯಕಾರಿಯಾಗಿದೆ, ಮುಸಲ್ಮಾನನ ಟೋಪಿ, ಮುಸಲ್ಮಾನನ ಆಹಾರ, ಪಾನೀಯ, ಬಟ್ಟೆ, ಚಿನ್ನ ಎಲ್ಲವೂ ಅಪಾಯಕಾರಿ ಎಂದು ಸುದ್ದಿ ಹರಡುವುದು ಬಿಜೆಪಿಯ ಅಜೆಂಡಾ ಎಂದು ಓವೈಸಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ