ಪಾಕಿಸ್ತಾನದ ಮೇಲೆ ಶಾಸಕ ಯತ್ನಾಳ್​ಗೆ​ ಪ್ರೀತಿ ಇದೆ, ಅದಕ್ಕೇ ಪದೇ ಪದೇ ಹೇಳುತ್ತಾರೆ: ಅಸಾದುದ್ದೀನ್ ಓವೈಸಿ

ನಾವು ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಪಾಕಿಸ್ತಾನ​ ಹೆಸರು ಪದೇ ಪದೇ ಹೇಳು ಎಂದು ಪ್ರಧಾನಿ ಮೋದಿ ಯತ್ನಾಳ್​ಗೆ ಹೇಳಿ‌ಕೊಟ್ಟಿರಬಹುದು ಎಂದು ಕಿಡಿಕಾರಿದರು. 

ಪಾಕಿಸ್ತಾನದ ಮೇಲೆ ಶಾಸಕ ಯತ್ನಾಳ್​ಗೆ​ ಪ್ರೀತಿ ಇದೆ, ಅದಕ್ಕೇ ಪದೇ ಪದೇ ಹೇಳುತ್ತಾರೆ: ಅಸಾದುದ್ದೀನ್ ಓವೈಸಿ
AIMIM ಸಂಸದ ಅಸಾದುದ್ದೀನ್ ಓವೈಸಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 25, 2022 | 4:18 PM

ವಿಜಯಪುರ: ಶಾಸಕ ಬಸನಗೌಡ ಯತ್ನಾಳ್​ಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದೆ. ಅದಕ್ಕಾಗಿ ಪದೇ ಪದೇ ಪಾಕ್ ಹೆಸರು ಉಲ್ಲೇಖ ಮಾಡುತ್ತಾರೆ ಎಂದು ಜಿಲ್ಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ AIMIM ಸಂಸದ ಅಸಾದುದ್ದೀನ್ ಓವೈಸಿ ವಾಗ್ದಾಳಿ ಮಾಡಿದರು. ಮಹಾನಗರ ಪಾಲಿಕೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ವಿಜಯಪುರಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದರು. ನಾವು ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಆದರೆ ಪಾಕಿಸ್ತಾನದ​ ಮೇಲೆ ಯತ್ನಾಳ್​ಗೆ ಯಾಕೆ ಪ್ರೀತಿ ಇದೆ ನನಗೆ ಗೊತ್ತಿಲ್ಲ. ಪಾಕಿಸ್ತಾನ​ ಹೆಸರು ಪದೇ ಪದೇ ಹೇಳು ಎಂದು ಪ್ರಧಾನಿ ಮೋದಿ ಯತ್ನಾಳ್​ಗೆ ಹೇಳಿ‌ಕೊಟ್ಟಿರಬಹುದು ಎಂದು ಕಿಡಿಕಾರಿದರು. ಇನ್ನು ವಿಜಯಪುರ ಮಹಾನಗರ ಪಾಲಿಕೆ ಚುನಾವಣಾ ಪ್ರಚಾರ ರಂಗೇರಿದ್ದು, ಅಸಾದುದ್ದಿನ ಓವೈಸಿ ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಿದ್ದಾರೆ. ವಿಜಯಪುರ ನಗರದ ಜುಮ್ಮಾ ಮಸೀದಿಯಿಂದ ಸಿಕ್ಯಾಬ್ ಕಾಲೇಜು ಮೈದಾನದವರೆಗೆ ಪಾದಯಾತ್ರೆ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಓವೈಸಿ ಬೆಂಬಲಿಗರು ಜಮಾಯಿಸಿದ್ದರು. ದೇಖೋ‌ ದೇಖೋ ಕೋನ್ ಆಯಾ, ಶೇರ್ ಆಯಾ ಶೇರ್ ಆಯಾ ಎಂದು ಬೆಂಬಲಿಗರು ಘೋಷಣೆ ಕೂಗಿದರು. ಇನ್ನು ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ರಸ್ತೆ ಬಂದ್ ಮಾಡಿದ್ದರು.

ಜೆಡಿಎಸ್ ಜೊತೆಗೆ ಮೈತ್ರಿ ಸಾಧ್ಯವೆ ಇಲ್ಲ

ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಸಾಧ್ಯವೆ ಇಲ್ಲವೆಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ ಓವೈಸಿ ಹೇಳಿದರು. ಅವರು ಅವರ ಕೆಲಸ ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ. ಕಳೆದ ಬಾರಿ ಕುಮಾರಸ್ವಾಮಿ ಪರವಾಗಿ ಜಸ್ಟ್ ಕ್ಯಾಂಪೆನ್ ಮಾಡಿದ್ದೇವು. ಆದರೆ ಈ ಬಾರಿ ಜೆಡಿಎಸ್ ಜೊತೆಗೆ ಮೈತ್ರಿಯ ಮಾತಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಗೆ ನಮ್ಮ ಪಕ್ಷ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ. ಎಐಎಂಐಎಂ ಬಿಜೆಪಿ ಬಿ ಟೀಂ ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಾವು ಬಿಜೆಪಿ ಟೀಂ ಅಲ್ಲವೇ ಅಲ್ಲ. ಕಾಂಗ್ರೆಸ್​ನ ಸದ್ಯದ ಪರಿಸ್ಥಿತಿಗೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಕಾರಣ ಎಂದರು.

ಕಾಂಗ್ರೆಸ್ ಸರ್ಟಿಫಿಕೇಟ್ ನಮಗೆ ಬೇಕಿಲ್ಲ:

ನಮಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ, ನಾವು ಬಿಜೆಪಿ ಪಕ್ಷದ ಬಿ ಟೀಂ ಅಲ್ಲ. ಕರ್ನಾಟಕ, ಗುಜರಾತ್, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರು ಓಡಿ ಹೋಗಿದ್ದಾರೆ. ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತರೇ ನಾನು ಜವಾಬ್ದಾರನಾ ಎಂದು ಪ್ರಶ್ನೀಸಿದರು. ರಾಜಸ್ತಾನದ ಕಾಂಗ್ರೆಸ್ ಪಕ್ಷದಲ್ಲಿ ಈಗಲೂ ತಿಕ್ಕಾಟ ನಡೆಯುತ್ತಿವೆ. ಇದಕ್ಕೆಲ್ಲ ನಾವು ಕಾರಣರಲ್ಲ, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಕಳಪೆ ನಾಯಕತ್ವದಿಂದಲೇ ಮೋದಿ ಎರಡು ಬಾರಿ ಪ್ರಧಾನಿಯಾಗಿದ್ದು ಎಂದು ಓವೈಸಿ ಹೇಳಿದರು.

ಹಲಾಲ್ ವಿಚಾರದಲ್ಲಿ ಬಿಜೆಪಿ ಹಲಾಲ್ ಕಮೀಷನ್ ಪಡೆಯುತ್ತಿದೆ

ಹಿಜಾಬ್ ಕೋರ್ಟ್ ತೀರ್ಪು ವಿಚಾರವಾಗಿ ಮಾತನಾಡಿದ ಅವರು, ಹಿಜಾಬ್ ಪರ ತೀರ್ಪು ಬಂದಿದ್ದು ಸಂತಸ ತಂದಿದೆ. ತೀರ್ಪಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಹಿಜಾಬ್ ಪರ ತೀರ್ಪು ಬಂದಿದ್ದು ನಮ್ಗೆ ದೊಡ್ಡ ತೀರ್ಪು ಆಗಿದೆ. ಮುಸ್ಲಿಂರ ಗಡ್ಡ, ಊಟ, ಟೋಪಿಗೆಗೆ ತೊಂದರೆ ಇದೆ. ಸಬ್ ಕಾ ವಿಕಾಸ, ಸಬ್ ಕಾ ಸಾತ್ ಬರೀ ಬಿಜೆಪಿ ಮಾತಿನಲ್ಲೇ ಇದೆ. ಬಿಜೆಪಿ ಮುಸ್ಲಿಂರ ವಿರುದ್ಧ ಇದೆ. ಹಲಾಲ್ ವಿಚಾರದಲ್ಲಿ ಬಿಜೆಪಿ ಹಲಾಲ್ ಕಮೀಷನ್ ಪಡೆಯುತ್ತಿದೆ. ಬಿಜೆಪಿ ಕಮೀಷನ್ ಬಗ್ಗೆ ವಿಡಿಯೋಗಳಿವೆ ಎಂದು ಓವೈಸಿ ಆರೋಪಿದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:00 pm, Tue, 25 October 22