ಜಾರ್ಖಂಡ್​ನಲ್ಲಿ ನಕ್ಸಲರಿಂದ ಐಇಡಿ ಸ್ಫೋಟ, ಮೂವರು ಯೋಧರಿಗೆ ಗಾಯ

ಜಾರ್ಖಂಡ್​ನಲ್ಲಿ ನಕ್ಸಲರು ಐಇಡಿ(ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಳಿಸಿದ ಪರಿಣಾಮ ಮೂವರು ಯೋಧರು ಗಾಯಗೊಂಡಿದ್ದಾರೆ. ಬಲಿಬಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಫೋಟದ ನಂತರ, ಗಾಯಗೊಂಡ ಸೈನಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಾಂಚಿಗೆ ವಿಮಾನದ ಮೂಲಕ ಸಾಗಿಸಲಾಯಿತು.

ಜಾರ್ಖಂಡ್​ನಲ್ಲಿ ನಕ್ಸಲರಿಂದ ಐಇಡಿ ಸ್ಫೋಟ, ಮೂವರು ಯೋಧರಿಗೆ ಗಾಯ
ಚಾಪರ್
Image Credit source: Etv Bharat

Updated on: Mar 05, 2025 | 1:02 PM

ಜಾರ್ಖಂಡ್, ಮಾರ್ಚ್ 05: ನಕ್ಸಲರು ಐಇಡಿ(ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಳಿಸಿದ ಪರಿಣಾಮ ಜಾರ್ಖಂಡ್​ನಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಬಲಿಬಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಫೋಟದ ನಂತರ, ಗಾಯಗೊಂಡ ಸೈನಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಾಂಚಿಗೆ ವಿಮಾನದ ಮೂಲಕ ಸಾಗಿಸಲಾಯಿತು.

ದಾಳಿಯನ್ನು ದೃಢಪಡಿಸಿದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಶುತೋಷ್ ಶೇಖರ್, ನಕ್ಸಲ್ ಚಟುವಟಿಕೆಗಳನ್ನು ಎದುರಿಸಲು ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿವೆ.

ಮನೋಹರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಂಡಾ ಅರಣ್ಯದ ಬಲಿವಾದಲ್ಲಿ ಸಿಆರ್‌ಪಿಎಫ್ 197 ಬೆಟಾಲಿಯನ್ ಸಿಬ್ಬಂದಿ ಶೋಧ ಕಾರ್ಯಾಚರಣೆಗೆ ಹೋದಾಗ ಈ ಘಟನೆ ನಡೆದಿದೆ ಎಂದು ಕೊಲ್ಹಾನ್ ಡಿಐಜಿ ಮನೋಜ್ ರತನ್ ಚೋಥೆ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ
ಕದನವಿರಾಮ ಉಲ್ಲಂಘಿಸಿದ ಪಾಕ್​ಗೆ ತಕ್ಕ ಉತ್ತರ ಕೊಟ್ಟ ಭಾರತೀಯ ಸೇನೆ
ಜಮ್ಮು ಕಾಶ್ಮೀರದ ಅಖ್ನೂರ್‌ನಲ್ಲಿ ಐಇಡಿ ಸ್ಫೋಟ; ಇಬ್ಬರು ಸೈನಿಕರು ಸಾವು
ಐಇಡಿ ಸ್ಫೋಟ, ಯೋಧರನ್ನು ರಕ್ಷಿಸುವ ವೇಳೆ ಸಿಆರ್​ಪಿಎಫ್​ ಶ್ವಾನಕ್ಕೆ ಗಾಯ
ಛತ್ತೀಸ್​ಗಢದಲ್ಲಿ ಸೈನಿಕರ ವಾಹನದ ಮೇಲೆ ನಕ್ಸಲರಿಂದ ಐಇಡಿ ಸ್ಫೋಟ; 9 ಜನ ಸಾವು

ಫೆಬ್ರವರಿ 27 ರಂದು ಪಲಮು ಜಿಲ್ಲೆಯಲ್ಲಿ ನಿಷೇಧಿತ ತೃತೀಯಾ ಸಮ್ಮೇಳನ ಪ್ರಸ್ತುತಿ ಸಮಿತಿಯ (TSPC) ನ ನಕ್ಸಲ್ ನಾಯಕ ಉಪೇಂದ್ರ ಭೂಯಾನ್ ಅವರನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ ನಂತರ ಈ ಸ್ಫೋಟ ಸಂಭವಿಸಿದೆ. ಪೊಲೀಸರು ಆತನ ಬಳಿಯಿಂದ 652 ಕ್ಕೂ ಹೆಚ್ಚು ಗುಂಡುಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ, ಇವುಗಳನ್ನು ಸೆರ್ಬಿಯಾ ಮತ್ತು ಯುಎಸ್ಎಯಲ್ಲಿ ಮಾಡಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: ಐಇಡಿ ಸ್ಫೋಟ, ಯೋಧರನ್ನು ರಕ್ಷಿಸುವ ವೇಳೆ ಸಿಆರ್​ಪಿಎಫ್​ ಶ್ವಾನಕ್ಕೆ ಗಂಭೀರ ಗಾಯ

ಉಪೇಂದ್ರ ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ತಿಳಿಸಿದ್ದು, ತನ್ನ ಬಳಿಯಿಂದ ವಶಪಡಿಸಿಕೊಂಡ ಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು TSPC ಯ ಉನ್ನತ ಕಮಾಂಡರ್‌ಗಳ ಸೂಚನೆಯ ಮೇರೆಗೆ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದ. ಗುಂಡುಗಳ ಮೇಲೆ ನಿರ್ದಿಷ್ಟ ಸಂಖ್ಯೆಗಳು ಮತ್ತು ಕೋಡ್‌ಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ