Naxal Attack: ಛತ್ತೀಸ್‌ಗಢದಲ್ಲಿ ಸೈನಿಕರ ವಾಹನದ ಮೇಲೆ ನಕ್ಸಲರಿಂದ ಐಇಡಿ ಸ್ಫೋಟ; 9 ಜನ ಸಾವು
ಛತ್ತೀಸ್‌ಗಢದ ಬಿಜಾಪುರದಲ್ಲಿ ಇಂದು ನಕ್ಸಲೀಯರು ಐಇಡಿ ಸ್ಫೋಟಕವನ್ನು ಬಳಸಿ ಸೈನಿಕರ ವಾಹನವನ್ನು ಸ್ಫೋಟಿಸಿದ್ದಾರೆ. ಇದರಿಂದ 9 ಜನರು ಮೃತಪಟ್ಟಿದ್ದಾರೆ. ಅವರಲ್ಲಿ 8 ಯೋಧರು ಮತ್ತು ಒಬ್ಬ ಚಾಲಕ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಬಿಜಾಪುರ ಜಿಲ್ಲೆಯ ಬೇದ್ರೆ-ಕುಟ್ರು ರಸ್ತೆಯಲ್ಲಿ ಸೈನಿಕರು ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸೈನಿಕರ ವಾಹನವನ್ನು ಗುರಿಯಾಗಿಸಿಕೊಂಡು ನಕ್ಸಲರು ಮಾಡಿದ ಐಇಡಿ ಸ್ಫೋಟದಿಂದ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಮೃತರಾದವರಲ್ಲಿ 8 ಸಿಆರ್‌ಪಿಎಫ್ ಯೋಧರು, ಓರ್ವ ಚಾಲಕ ಸೇರಿದ್ದಾರೆ. ಛತ್ತೀಸ್‌ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದ 8 ಸೈನಿಕರು ಮಾತ್ರವಲ್ಲದೆ ಸಿಆರ್‌ಪಿಎಫ್ ವಾಹನದ ಚಾಲಕ ಸಹ ಮೃತಪಟ್ಟಿದ್ದಾರೆ. CRPF ವಾಹನವನ್ನು ಗುರಿಯಾಗಿಸಿಕೊಂಡು ನಕ್ಸಲರಿಂದ ಐಇಡಿ ಸ್ಫೋಟ ನಡೆದಿದೆ. ಗಾಯಾಳುಗಳು ಸಿಆರ್‌ಪಿಎಫ್ ಯೋಧರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಛತ್ತೀಸ್‌ಗಢದಲ್ಲಿ ಮಾವೋವಾದಿ ನಕ್ಸಲೀಯರಿಂದ ಅಟ್ಟಹಾಸ ನಡೆದಿದೆ. ಐಇಡಿ ಸ್ಫೋಟದಿಂದ 8 ಡಿಆರ್‌ಜಿ ಯೋಧರು, ಚಾಲಕ ಹುತಾತ್ಮರಾಗಿದ್ದಾರೆ. ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸಂಭವಿಸಿರುವ ಘಟನೆ ಇದಾಗಿದೆ. ದಾಂತೇವಾಡ ಜಿಲ್ಲಾ ಮೀಸಲು ಪಡೆಯ 8 ಯೋಧರು, ಓರ್ವ ಚಾಲಕ ಹುತಾತ್ಮರಾಗಿದ್ದಾರೆ. ಈ ಸ್ಫೋಟದಲ್ಲಿ ಕೆಲವು ಯೋಧರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕರೆ ಬೆನ್ನಲ್ಲೇ ಮೋಸ್ಟ್ ವಾಂಟೆಡ್ ನಕ್ಸಲರು ಶರಣಾಗತಿಗೆ ನಿರ್ಧಾರ
ಬಿಜಾಪುರ ಜಿಲ್ಲೆಯ ಬೇದ್ರೆ-ಕುಟ್ರು ರಸ್ತೆಯಲ್ಲಿ ಸ್ಫೋಟ ಸಂಭವಿಸಿದೆ. ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ತಮ್ಮ ವಾಹನವನ್ನು ಸ್ಫೋಟಿಸಲು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಬಳಸಿದಾಗ 8 ಸೈನಿಕರು ಮತ್ತು ಚಾಲಕ ಸಾವನ್ನಪ್ಪಿದ್ದಾರೆ. ಬಸ್ತಾರ್ ಪ್ರದೇಶದ ಕುಟ್ರುನಲ್ಲಿ ಇಂದು ಮಧ್ಯಾಹ್ನ 2.15ರ ಸುಮಾರಿಗೆ ಐಇಡಿ ಸ್ಕಾರ್ಪಿಯೋ ಎಸ್‌ಯುವಿಯನ್ನು ಸ್ಫೋಟಿಸಲಾಗಿದೆ.
Chhattisgarh | Nine people – eight Dantewada DRG jawans and one driver, lost their lives after their vehicle was blown up by naxals through an IED blast, in Bijapur. They were returning after a joint operation of Dantewada, Narayanpur and Bijapur: IG Bastar pic.twitter.com/hqsDHnr8XT
— ANI (@ANI) January 6, 2025
ಈ ಸೇನಾ ವಾಹನದಲ್ಲಿ 20 ಡಿಆರ್‌ಜಿ ಯೋಧರು ಪ್ರಯಾಣಿಸುತ್ತಿದ್ದರು. ಜಂಟಿ ಕಾರ್ಯಾಚರಣೆ ಬಳಿಕ ವಾಪಸಾಗುತ್ತಿದ್ದಾಗ ಐಇಡಿ ಸ್ಫೋಟ ಸಂಭವಿಸಿದೆ. ದಾಂತೇವಾಡ, ನಾರಾಯಣಪುರ್, ಬಿಜಾಪುರ್ ಜಿಲ್ಲೆಗಳಲ್ಲಿ ಮಾವೋವಾದಿ ನಕ್ಸಲರ ವಿರುದ್ಧ ನಡೆದಿದ್ದ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ.
Chhattisgarh: An IED blast occurred near Ambeli village on Kutru-Bedre road, Bijapur. The blast targeted a joint operation team returning from Dantewada, Narayanpur, and Bijapur. Nine personnel, including 8 DRG soldiers and one driver, were martyred pic.twitter.com/E1rQnPIYnj
— IANS (@ians_india) January 6, 2025
ಇಂದು ಮುಂಜಾನೆ ಛತ್ತೀಸ್‌ಗಢದ ಅಬುಜ್ಮದ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮಾವೋವಾದಿಗಳ ಮೇಲೆ ದಾಳಿ ಮಾಡಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಬಂಡುಕೋರರನ್ನು ಹತ್ಯೆಗೈದಿದ್ದಾರೆ. ಸ್ವಯಂಚಾಲಿತ ಶಸ್ತ್ರಾಸ್ತ್ರಗಳಾದ ಎಕೆ 47 ಮತ್ತು ಸೆಲ್ಫ್ ಲೋಡ್ ರೈಫಲ್ಸ್ ವಶಪಡಿಸಿಕೊಳ್ಳಲಾಗಿದೆ. ಬಂಡುಕೋರರು ಅವರನ್ನು ಗುರಿಯಾಗಿಸಿಕೊಂಡಾಗ ಯೋಧರು ಇದೇ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದರು.
#WATCH | Raipur: On Bijapur IED blast, Chhattisgarh Dy CM Arun Sao says, ” Information about a cowardly attack by Naxalites has come from Bijapur. I express condolences for the Jawans…this is a cowardly action…as Jawans are working towards eliminating naxals…they have done… pic.twitter.com/t4oasGjvrQ
— ANI (@ANI) January 6, 2025
ಇದನ್ನೂ ಓದಿ: ಕುದುರೆಮುಖ ಅರಣ್ಯದಲ್ಲಿ ನಕ್ಸಲ್ ನಾಯಕಿ ಸುಂದರಿ ವಾಸ: ಶರಣಾಗಿ ಮನೆಗೆ ಬಾ ಎಂದ ಸಹೋದರ
ಈ ಘಟನೆ ನಡೆದ ಸ್ಥಳದಲ್ಲಿ ಬೃಹತ್ ಹೊಂಡ ಉಂಟಾಗಿದೆ. ಇದು ಯೋಧರನ್ನು ಕೊಂದ ಐಇಡಿ ಸ್ಫೋಟದ ತೀವ್ರತೆಯನ್ನು ಸೂಚಿಸುತ್ತದೆ. ಬಸ್ತಾರ್‌ನ ಬಿಜೆಪಿ ಸಂಸದ ಮಹೇಶ್ ಕಶ್ಯಪ್ ದಾಳಿಯನ್ನು “ಹೇಡಿತನ” ಎಂದು ಬಣ್ಣಿಸಿದ್ದಾರೆ. “ನಮ್ಮ ಯೋಧರು ಮಾವೋವಾದಿಗಳನ್ನು ನಿರ್ಮೂಲನೆ ಮಾಡುತ್ತಿದ್ದಾರೆ. ಆದ್ದರಿಂದ ನಕ್ಸಲರು ಹತಾಶೆಯಿಂದ ಈ ದುರದೃಷ್ಟಕರ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. 2026ರ ವೇಳೆಗೆ ಬಸ್ತಾರ್ ಅನ್ನು ಮಾವೋವಾದಿಗಳಿಂದ ತೆರವುಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ