ಕಿಶ್ತ್ವಾರಾದಲ್ಲಿ ಐಇಡಿ ಪತ್ತೆ; ಸೇತುವೆ ಬಳಿಯಿದ್ದ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆಗಳು

| Updated By: Lakshmi Hegde

Updated on: Aug 14, 2021 | 7:09 PM

ಇತ್ತೀಚೆಗೆ ಜಮ್ಮು-ಕಾಶ್ಮೀರ, ಶ್ರೀನಗರಗಳಲ್ಲಿ ಡ್ರೋನ್​ ಹಾರಾಟ, ಐಇಡಿ ಸ್ಫೋಟಕ ಪತ್ತೆ ಪ್ರಕರಣಗಳು ಹೆಚ್ಚಾಗಿವೆ. ಇಲ್ಲಿನ ಭದ್ರತಾ ಪಡೆಗಳು ಸದಾ ಅಲರ್ಟ್​ ಆಗಿರುತ್ತಿದ್ದು, ಉಗ್ರಚಟುವಟಿಕೆಗಳನ್ನು ಯಶಸ್ವಿಯಾಗಿ ನಿಯಂತ್ರಣ ಮಾಡುತ್ತಿವೆ.

ಕಿಶ್ತ್ವಾರಾದಲ್ಲಿ ಐಇಡಿ ಪತ್ತೆ; ಸೇತುವೆ ಬಳಿಯಿದ್ದ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆಗಳು
ಸೇತುವೆ ಬಳಿ ಪತ್ತೆಯಾದ ಐಇಡಿಯನ್ನು ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆ
Follow us on

ಶ್ರೀನಗರ: ಇಲ್ಲಿನ ಕಿಶ್ತ್ವಾರ್​-ಕೇಶ್ವಾನ್​ ರಸ್ತೆಯಲ್ಲಿ ಇಡಲಾಗಿದ್ದ ಐಇಡಿ (IED) ಸ್ಫೋಟಕವನ್ನು ಭದ್ರತಾ ಪಡೆಗಳು (Security Forces) ಇಂದು ನಿಷ್ಕ್ರಿಯಗೊಳಿಸಿವೆ. ಗ್ರೇಟರ್​ ಕಾಶ್ಮೀರದ ಪೊಲೀಸ್​ ವಕ್ತಾರ (Police Spokesperson) ಈ ಬಗ್ಗೆ ಮಾಹಿತಿ ನೀಡಿದ್ದು, ಇಂದು ಮುಂಜಾನೆ ಕಿಶ್ತ್ವಾರ್​-ಕೇಶ್ವಾನ್ (Kishtwar-Keshwan)​ ರಸ್ತೆಯಲ್ಲಿ ಸೇನೆಯ 26 ಆರ್​ಆರ್​ ಮತ್ತು ಸ್ಥಳೀಯ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ವೇಳೆ ಇಲ್ಲಿನ ಕುರಿಯಾ ಸೇತುವೆ (Kuriya Bridge) ಬಳಿ, ರಕ್ಷಣಾ ಪಡೆಗಳ ಶ್ವಾನ (Dog Scout)ಗಳ ಸಹಾಯದಿಂದ ಸ್ಫೋಟಕ ಸಾಧನವನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದ್ದಾರೆ. ಐಇಡಿ ಇದ್ದ ಸ್ಥಳದಲ್ಲೇ ಅದನ್ನು ನಿಷ್ಕ್ರಿಯಗೊಳಿಸಲಾಯಿತು ಎಂದೂ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಜಮ್ಮು-ಕಾಶ್ಮೀರ, ಶ್ರೀನಗರಗಳಲ್ಲಿ ಡ್ರೋನ್​ ಹಾರಾಟ, ಐಇಡಿ ಸ್ಫೋಟಕ ಪತ್ತೆ ಪ್ರಕರಣಗಳು ಹೆಚ್ಚಾಗಿವೆ. ಇಲ್ಲಿನ ಭದ್ರತಾ ಪಡೆಗಳು ಸದಾ ಅಲರ್ಟ್​ ಆಗಿರುತ್ತಿದ್ದು, ಉಗ್ರಚಟುವಟಿಕೆಗಳನ್ನು ಯಶಸ್ವಿಯಾಗಿ ನಿಯಂತ್ರಣ ಮಾಡುತ್ತಿವೆ. ಜುಲೈನಲ್ಲಿ ಕುಲ್ಗಾಮ್ ಜಿಲ್ಲೆಯ, ಕ್ವಾಜಿಗುಂಡ ಪ್ರದೇಶದಲ್ಲಿ ಐಇಡಿ ಪತ್ತೆಯಾಗಿತ್ತು. ಹಾಗೇ, ಐದು ದಿನಗಳ ಹಿಂದೆ ಪಂಜಾಬ್​​ನ ಅಮೃತಸರ್​​ನ ದೆಲೆಕೆ ಎಂಬ ಹಳ್ಳಿಯಲ್ಲಿ ಟಿಫಿನ್​ ಬಾಕ್ಸ್​ನಲ್ಲಿ ಐಇಡಿ ಪತ್ತೆಯಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವಂತೆಯೇ ಇಂಥ ಉಗ್ರಕೃತ್ಯಗಳೂ ಹೆಚ್ಚುತ್ತಿವೆ. ಹಾಗೇ, ದೆಹಲಿ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆಯಿದ್ದು, ಈ ಮಧ್ಯೆ ಅಲ್ಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

 

(IED Explosive detected along the Kishtwar Keshwan road of Jammu Kashmir)