75ನೇ ಸ್ವಾತಂತ್ರ್ಯೋತ್ಸವ: 7500 ಚದರ್​ ಅಡಿ ರಾಷ್ಟ್ರಧ್ವಜವನ್ನು ದೇಶಕ್ಕೆ ಅರ್ಪಿಸಲಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನ್ಕರ್​

Tricolour Flag: 7500 ಚದರ್​ ಅಡಿ ವಿಸ್ತೀರ್ಣದ ತ್ರಿವರ್ಣ ಧ್ವಜವನ್ನು 2021ರ ಏಪ್ರಿಲ್​ 25ರಂದು ಹಿಮಾಲಯ ಪರ್ವತಾರೋಹಣ ಸಂಸ್ಥೆಯ ಅಧಿಕಾರಿಗಳು, ಸಿಕ್ಕಿಂನ, ಸಮುದ್ರ ಮಟ್ಟಕ್ಕಿಂತ 16,500 ಅಡಿ ಎತ್ತರದ ಪ್ರದೇಶವಾದ ಮೌಂಟ್​ ರೆನಾಕ್​ ಎಂಬಲ್ಲಿ ಹಾರಿಸಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವ: 7500 ಚದರ್​ ಅಡಿ ರಾಷ್ಟ್ರಧ್ವಜವನ್ನು ದೇಶಕ್ಕೆ ಅರ್ಪಿಸಲಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನ್ಕರ್​
ಜಗದೀಪ್ ಧನ್ಕರ್​
Follow us
TV9 Web
| Updated By: Lakshmi Hegde

Updated on: Aug 14, 2021 | 5:22 PM

ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ನಿಮಿತ್ತ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನ್ಕರ್​ ಅವರು 7500 ಚದರ್​ ಅಡಿಯಷ್ಟು ವಿಶಾಲವಾದ ರಾಷ್ಟ್ರಧ್ವಜವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಕೊಲ್ಕತ್ತದ ವಿಕ್ಟೋರಿಯಾ ಮೆಮೋರಿಯಲ್ ಹಾಲ್​​ನಲ್ಲಿ, ಕೋಲ್ಕತ್ತ, ಭಾರತೀಯ ಪ್ರವಾಸೋದ್ಯಮ ಮತ್ತು ಡಾರ್ಜಲಿಂಗ್​​ನ ಹಿಮಾಲಯ ಪರ್ವತಾರೋಹಣ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ, ಈ ವಿಶಾಲವಾದ ರಾಷ್ಟ್ರಧ್ವಜವನ್ನು ರಾಜ್ಯಪಾಲರು ಅರ್ಪಿಸಲಿದ್ದು, ನಂತರ ಅದನ್ನು ವಿಕ್ಟೋರಿಯಾ ಸ್ಮಾರಕದ ಮೇಲೆ ಹೊದಿಸಲಾಗುವುದು ಎಂದು ವರದಿಯಾಗಿದೆ.

ಈ ಬಾರಿ ದೇಶದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, ಅದರ ಸವಿನೆನಪಿಗಾಗಿ ಸ್ಮಾರಕದ ಆವರಣದಲ್ಲಿ 750 ಸಸಿಗಳನ್ನು ನೆಡಲಾಗುವುದು. ಕಾರ್ಯಕ್ರಮದಲ್ಲಿ ಧನ್ಕರ್​ ಅವರಿಗೆ ಸಿಐಎಸ್​ಎಫ್​ ಪಡೆಯಿಂದ ಗೌರವ ವಂದನೆ ಸಲ್ಲಿಸಲಾಗುವುದು. ಅದಾದ ಬಳಿಕ ರಾಜ್ಯಪಾಲರಿಂದ ಧ್ವಜಾರೋಹಣ ನಡೆಯಲಿದ್ದು, ರಾಷ್ಟ್ರಗೀತೆ ಹಾಡಲಾಗುತ್ತದೆ.

ಇದೀಗ ಧನ್​ಕರ್​ ಅವರು ರಾಷ್ಟ್ರಕ್ಕೆ ಅರ್ಪಿಸುತ್ತಿರುವ 7500 ಚದರ್​ ಅಡಿ ವಿಸ್ತೀರ್ಣದ ತ್ರಿವರ್ಣ ಧ್ವಜವನ್ನು 2021ರ ಏಪ್ರಿಲ್​ 25ರಂದು ಹಿಮಾಲಯ ಪರ್ವತಾರೋಹಣ ಸಂಸ್ಥೆಯ ಅಧಿಕಾರಿಗಳು, ಸಿಕ್ಕಿಂನ, ಸಮುದ್ರ ಮಟ್ಟಕ್ಕಿಂತ 16,500 ಅಡಿ ಎತ್ತರದ ಪ್ರದೇಶವಾದ ಮೌಂಟ್​ ರೆನಾಕ್​ ಎಂಬಲ್ಲಿ ಹಾರಿಸಿದ್ದಾರೆ. ಅದಾದ ನಂತರ ಧ್ವಜ ಡಾರ್ಜಲಿಂಗ್​​ನಲ್ಲಿ ಹಾರಿಸಲಾಗಿದೆ. ಇದೀಗ ಕೊಲ್ಕತ್ತಕ್ಕೆ ತರಲಾಗಿದ್ದು, ಇಲ್ಲಿ ಸ್ವಾತಂತ್ರ್ಯೋತ್ಸವದಂದು ರಾಜ್ಯಪಾಲರು ರಾಷ್ಟ್ರಧ್ವಜವನ್ನು ದೇಶಕ್ಕೆ ಅರ್ಪಿಸಲಿದ್ದಾರೆ.

ಇದನ್ನೂ ಓದಿ: ಸಹೋದರಿ ಉಷಾ ಅವರ ಪರಿಸ್ಥಿತಿಯನ್ನು ವಿವರಿಸುತ್ತಾ ಕಣ್ಣೀರು ಹಾಕಿದ ವಿಜಯಲಕ್ಷ್ಮಿ

‘ಲವ್​ ಯೂ ರಚ್ಚು’ ಫೈಟರ್​ ವಿವೇಕ್​ ಸಾವಿಗೆ ಅಸಲಿ ಕಾರಣ ಏನು? ಪ್ರತ್ಯಕ್ಷದರ್ಶಿ ರಂಜಿತ್​ ತೆರೆದಿಟ್ಟ ಸತ್ಯ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ