ನಾಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಇದೆ ಒಂದು ವಿಶೇಷತೆ; 2 ಹೆಲಿಕಾಪ್ಟರ್​ಗಳು ಸಿದ್ಧ

Independence Day: ಎರಡೂ ಹೆಲಿಕಾಪ್ಟರ್​ಗಳು ಭಾರತೀಯ ವಾಯುಪಡೆಗೆ ಸೇರಿದವು. ಮೊದಲನೇ ಹೆಲಿಕಾಪ್ಟರ್​​ನ ಕಮಾಂಡರ್​ ಬಲ್​ದೇವ್​ ಸಿಂಗ್​ ಬಿಶತ್​ ಆಗಿದ್ದು ಎರಡನೇ ಹೆಲಿಕಾಪ್ಟರ್​ನ ಕ್ಯಾಪ್ಟನ್​ ವಿಂಗ್​ ಕಮಾಂಡರ್​ ನಿಖಿಲ್​ ಮೆಹ್ರೋತ್ರಾ.

ನಾಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಇದೆ ಒಂದು ವಿಶೇಷತೆ; 2 ಹೆಲಿಕಾಪ್ಟರ್​ಗಳು ಸಿದ್ಧ
ಕೆಂಪುಕೋಟೆ (ಚಿತ್ರಕೃಪೆ -ಪಿಟಿಐ)
Follow us
TV9 Web
| Updated By: Lakshmi Hegde

Updated on:Aug 14, 2021 | 7:25 PM

ನಾಳೆ (ಆಗಸ್ಟ್​ 15) ಭಾರತದ ಪಾಲಿಗೆ ವಿಶೇಷ ದಿನ. 75ನೇ ಸ್ವಾತಂತ್ರ್ಯ ದಿನಾಚರಣೆ (Independence Day)ಯ ಹಿನ್ನೆಲೆಯಲ್ಲಿ ಮುಂಜಾನೆ ಪ್ರಧಾನಮಂತ್ರಿ ಮೋದಿಯವರು, ಐತಿಹಾಸಿಕ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಲಿದ್ದಾರೆ (Flag Hoisting). ನಂತರ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇವಿಷ್ಟು ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ದಿನದಂದು ನಡೆಯುತ್ತದೆ. ಆದರೆ ಈ ಬಾರಿ ಧ್ವಜಾರೋಹಣದ ಸಂದರ್ಭದಲ್ಲಿ ವಿಶೇಷತೆಯೊಂದು ಇದೆ. ಇಷ್ಟುವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ (Narendra Modi)ಯವರು ಧ್ವಜಾರೋಹಣ ಮಾಡುತ್ತಿದ್ದಂತೆ ಸ್ಥಳದಲ್ಲಿ ಹೂವಿನ ಎಸಳುಗಳ ಸುರಿಮಳೆಯಾಗಲಿದೆ.

ಈ ಬಾರಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಸಂಭ್ರಮದಲ್ಲಿದೆ. ಹೀಗೆ ಅಪಾರ ಪ್ರಮಾಣದಲ್ಲಿ ಹೂವಿನ ಎಸಳುಗಳನ್ನು ಮೇಲಿನಿಂದ ಉದಿರಿಸಲು ಎರಡು ಹೆಲಿಕಾಪ್ಟರ್​​ಗಳನ್ನು ರೆಡಿಯಾಗಿವೆ. ರಾಷ್ಟ್ರಧ್ವಜಾರೋಹಣ ಆಗುತ್ತಿದ್ದಂತೆ ಭಾರತೀಯ ವಾಯುಸೇನೆಯ ಎಂಐ-17 1ವಿ (Mi-17 1V) ಎರಡು ಹೆಲಿಕಾಪ್ಟರ್​​ಗಳು ಹೂವಿನ ಎಸಳುಗಳ ಸುರಿಮಳೆ ಸುರಿಸಲಿವೆ.

ಇದರಲ್ಲಿ ಮೊದಲನೇ ಹೆಲಿಕಾಪ್ಟರ್​​ನ ಕಮಾಂಡರ್​ ಬಲ್​ದೇವ್​ ಸಿಂಗ್​ ಬಿಶತ್​ ಆಗಿದ್ದು ಎರಡನೇ ಹೆಲಿಕಾಪ್ಟರ್​ನ ಕ್ಯಾಪ್ಟನ್​ ವಿಂಗ್​ ಕಮಾಂಡರ್​ ನಿಖಿಲ್​ ಮೆಹ್ರೋತ್ರಾ. ರಾಷ್ಟ್ರಧ್ವಜಾರೋಹಣವಾಗುತ್ತಿದ್ದಂತೆ ಇವೆರಡೂ ಹೆಲಿಕಾಪ್ಟರ್​ಗಳಿಂದ ಹೂವಿನ ಸಿಂಪಡಣೆ ಆಗಲಿದ್ದು, ನಂತರ ಪ್ರಧಾನ ಮಂತ್ರಿ ದೇಶವನ್ನುದ್ದೇಶಿಸಿ ಮಾತನಾಡುವರು. ಭಾಷಣದ ಬಳಿಕ ನ್ಯಾಷನಲ್​ ಕೆಡೆಟ್ಸ್​ ಕಾರ್ಪ್ಸ್(NCC)​ ರಾಷ್ಟ್ರಗೀತೆ ಹಾಡಲಿದೆ. ಭೂ, ನೌಕಾ ಮತ್ತು ವಾಯುಸೇನೆಯ ವಿವಿಧ ಶಾಲೆಗಳಿಂದ ಒಟ್ಟು 500 ಕೆಡೆಟ್​ಗಳು ಈ ಹೊತ್ತಲ್ಲಿ ಪಾಲ್ಗೊಳ್ಳಲಿವೆ.

ಒಲಿಂಪಿಕ್ಸ್​ ಅಥ್ಲೀಟ್​ಗಳು ಭಾಗಿ ಇನ್ನು ಈ ಬಾರಿ ಒಲಿಂಪಿಕ್ಸ್​ನಲ್ಲಿ ಭಾರತ ಅಮೋಘ ಸಾಧನೆ ಮಾಡಿದ್ದು, ಅದರಲ್ಲಿ ಪಾಲ್ಗೊಂಡ ಆಟಗಾರರನ್ನು ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಆಹ್ವಾನಿಸಲಾಗಿದೆ. ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಸೇರಿ 32 ಅಥ್ಲೀಟ್​ಗಳು ಪಾಲ್ಗೊಳ್ಳುವರು.

ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಎನ್​ಎಸ್​ಜಿ ಸ್ನಿಪರ್​ಗಳು ಸೇರಿ, ವಿವಿಧ ಭದ್ರತಾ ಪಡೆಗಳ ಕಮಾಂಡೋಗಳನ್ನು ನೇಮಿಸಲಾಗಿದೆ. ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಜನವರಿ 26ರಂದು ರೈತರ ಹೋರಾಟ ಕೆಂಪುಕೋಟೆ ಬಳಿ ಹಿಂಸಾಚಾರ ಸೃಷ್ಟಿಸಿತ್ತು. ಕೆಂಪುಕೋಟೆಯ ಮೇಲೆ ಭಾರತದ ಧ್ವಜದೊಟ್ಟಿಗೆ ಸಿಖ್​ ಧ್ವಜ ಹಾರಿಸಲಾಗಿತ್ತು.

ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ನಮ್ಮ ಸರ್ಕಾರ ಸಿದ್ಧವಿದೆ; ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಗೋವಿಂದ ಕಾರಜೋಳ ಮಾತು

ಮನನೊಂದು ಮುಂದಿನ ಸೀಸನ್​ನಿಂದ ಜಡ್ಜ್ ಆಗುವುದಿಲ್ಲ ಎಂದು ಹೇಳಿ ಶಾಕ್ ಕೊಟ್ಟ ಗಾಯಕ!

Published On - 6:39 pm, Sat, 14 August 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ