AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನನೊಂದು ಮುಂದಿನ ಸೀಸನ್​ನಿಂದ ಜಡ್ಜ್ ಆಗುವುದಿಲ್ಲ ಎಂದು ಹೇಳಿ ಶಾಕ್ ಕೊಟ್ಟ ಗಾಯಕ!

Benny Dayal: ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಹಿಟ್ ಗೀತೆಗಳನ್ನು ನೀಡಿರುವ ಗಾಯಕ ಬೆನ್ನಿ ದಯಾಲ್, ಮನನೊಂದು ರಿಯಾಲಿಟಿ ಶೋ ಒಂದರ ಜಡ್ಜ್ ಸ್ಥಾನದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಅಭಿಮಾನಿಗಳಿಗೆ ಆಘಾತವಾಗಿದೆ.

ಮನನೊಂದು ಮುಂದಿನ ಸೀಸನ್​ನಿಂದ ಜಡ್ಜ್ ಆಗುವುದಿಲ್ಲ ಎಂದು ಹೇಳಿ ಶಾಕ್ ಕೊಟ್ಟ ಗಾಯಕ!
ಗಾಯಕ ಬೆನ್ನಿ ದಯಾಲ್
TV9 Web
| Updated By: shivaprasad.hs|

Updated on: Aug 14, 2021 | 5:59 PM

Share

ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿ, ಹಿಟ್ ಗೀತೆಗಳನ್ನು ನೀಡಿರುವ ಗಾಯಕ ಬೆನ್ನಿ ದಯಾಲ್ ಇನ್ನು ಮುಂದೆ ಸಂಗೀತದ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗುವುದಿಲ್ಲ ಎಂದು ಘೋಷಿಸಿದ್ದಾರೆ. ಇತ್ತೀಚೆಗೆ ಸ್ಪರ್ಧಿಯೊಬ್ಬರ ಎಲಿಮಿನೇಷನ್ ನಂತರ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಹೀನ ಪದಗಳಿಂದ ನಿಂದಿಸಿದ್ದರು. ಇದರಿಂದ ಮನನೊಂದ ಬೆನ್ನಿ ದಯಾಲ್, ನಾನೂ ಮನುಷ್ಯ. ಇವುಗಳಿಗೆ ಮಿತಿ ಎನ್ನುವುದೊಂದು ಇರುತ್ತದೆ. ನನಗಿದು ಸಾಕು. ಮುಂದಿನ ಸೀಸನ್​ನಿಂದ ನಾನು ಜಡ್ಜ್ ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇದರಿಂದ ಬೆನ್ನಿಯ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದು, ದಯವಿಟ್ಟು ಹೀಗೆ ಮಾಡಬೇಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಗಾಯಕ ಬೆನ್ನಿ ದಯಾಲ್ ತಮಿಳಿನ ಖಾಸಗಿ ಚಾನೆಲ್ ಒಂದರಲ್ಲಿ ಪ್ರಸಾರವಾಗುವ ಸೂಪರ್ ಸಿಂಗರ್​ ಸಂಗೀತ ಸ್ಪರ್ಧೆಯ ಎಂಟನೇ ಆವೃತ್ತಿಯ ಜಡ್ಜ್ ಆಗಿದ್ದರು. ಇತ್ತೀಚೆಗೆ ಶ್ರೀಧರ್ ಸೇನಾ ಎಂಬ ಸ್ಪರ್ಧಿಯನ್ನು ಎಲಿಮಿನೇಷನ್ ಮಾಡಲಾಗಿತ್ತು. ಇದಕ್ಕೆ ಆ ಗಾಯಕನ ಅಭಿಮಾನಿಗಳು ಬೆನ್ನಿ ಅವರನ್ನು ತೀವ್ರವಾಗಿ ಟೀಕಿಸಿದ್ದರು. ಇದಕ್ಕೆ ಮನನೊಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಬೆನ್ನಿ, ಮುಂದಿನ ಸೀಸನ್​ನಿಂದ ತಾನು ಮುಂದುವರೆಯುವುದಿಲ್ಲ ಎಂದಿದ್ದಾರೆ.

Benny dayal

ಗಾಯಕ, ಸೂಪರ್ ಸಿಂಗರ್ ಶೋನ ನಿರ್ಣಾಯಕ ಬೆನ್ನಿ ದಯಾಲ್

‘‘ಸೀಸನ್ 8ರ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ನಾನು ಇನ್ನು ಮುಂದೆ ಯಾವ ವಿಡಿಯೊ, ಚಿತ್ರಗಳನ್ನೂ ಹಂಚಿಕೊಳ್ಳುವುದಿಲ್ಲ. ದ್ವೇಷ ಪೂರಿತ ಸಂದೇಶಗಳನ್ನು ನನಗೆ ಸ್ವೀಕರಿಸುವುದಕ್ಕೆ ಆಗುವುದಿಲ್ಲ. ನಾನೂ ಒಬ್ಬ ಮನುಷ್ಯ. ನನಗೂ ಸಾಕಾಗಿ ಹೋಗಿದೆ. ಇದುವರೆಗಿನ ನಿಮ್ಮ ಪ್ರೀತಿಗೆ ಕೃತಜ್ಞ. ಮುಂದಿನ ಸೀಸನ್​ನಿಂದ ನಾನು ನಿಮಗೆ ಕಾಣಸಿಗುವುದಿಲ್ಲ’’ ಎಂದು ಬೆನ್ನಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದು, ದಯವಿಟ್ಟು ಇಂತಹ ನಿರ್ಧಾರ ಕೈಗೊಳ್ಳಬೇಡಿ ಎಂದು ಕೋರುತ್ತಿದ್ದಾರೆ. ಆದರೆ ಬೆನ್ನಿ, ಇದುವರೆಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಬೆನ್ನಿ ಹಂಚಿಕೊಂಡಿರುವ ಪೋಸ್ಟ್:

ಗಾಯಕ ಬೆನ್ನಿ ದಯಾಲ್ ಮುಖ್ಯವಾಗಿ ತಮಿಳು ಹಾಗೂ ಹಿಂದಿ ಚಿತ್ರಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲೂ ಹಲವು ಗೀತೆಗಳನ್ನು ಹಾಡಿರುವ ಅವರು, ಗಣೇಶ್ ಅಭಿನಯದ ಮುಂಗಾರು ಮಳೆ 2ರ ‘ಮೈ ಡ್ಯಾಡಿ’, ಪುನೀತ್ ರಾಜ್​ಕುಮಾರ್ ಅಭಿನಯದ ಪೃಥ್ವಿ ಚಿತ್ರದ ‘ಜಯವೇ ನಿನದು’ ಮೊದಲಾದ ಹಾಡುಗಳಿಗೆ ದನಿಯಾಗಿದ್ದಾರೆ.

ಇದನ್ನೂ ಓದಿ:

‘ನನ್ನರಸಿ ರಾಧೆ’ ನಟಿ ಕೌಸ್ತುಭ ಅವರ ಮೈನಸ್​ ಪಾಯಿಂಟ್​ ಏನು? ಬಿಗ್​ ಬಾಸ್​ ಮನೆಯಲ್ಲಿ ಸತ್ಯ ಬಾಯ್ಟಿಟ್ಟ ಇಂಚರ

‘ಲವ್​ ಯೂ ರಚ್ಚು’ ಫೈಟರ್​ ವಿವೇಕ್​ ಸಾವಿಗೆ ಅಸಲಿ ಕಾರಣ ಏನು? ಪ್ರತ್ಯಕ್ಷದರ್ಶಿ ರಂಜಿತ್​ ತೆರೆದಿಟ್ಟ ಸತ್ಯ

(Benny Dayal announces that he is not coming back next season as a judge)