ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮಾಜಿ ಪೊಲೀಸ್ ಅಧಿಕಾರಿ ಅಮಿತಾಭ್ ಠಾಕೂರ್ ಸ್ಪರ್ಧೆ ಸಾಧ್ಯತೆ

2017ರಲ್ಲಿ ಅಮಿತಾಬ್ ಠಾಕೂರ್ ತಮ್ಮ ಕೇಡರ್ ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಆ್ರಹಿಸಿದ್ದರು. 2015ರಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ತನಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅರೋಪಿಸಿದ ಹಿನ್ನೆಲೆಯಲ್ಲಿ ಠಾಕೂರ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮಾಜಿ ಪೊಲೀಸ್ ಅಧಿಕಾರಿ ಅಮಿತಾಭ್ ಠಾಕೂರ್ ಸ್ಪರ್ಧೆ ಸಾಧ್ಯತೆ
ಮಾಜಿ ಐಪಿಎಸ್​ ಅಧಿಕಾರಿ ಅಮಿತಾಭ್ ಠಾಕೂರ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 14, 2021 | 5:03 PM

ಲಖನೌ: ಸೇವಾವಧಿ ಕೊನೆಗೊಳ್ಳುವ ಮೊದಲೇ ನಿವೃತ್ತಿ ಹೊಂದುವ ಪರಿಸ್ಥಿತಿ ಎದುರಿಸಿದ ಉತ್ತರ ಪ್ರದೇಶ ಕೇಡರ್​ನ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರು ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಅವರ ಕುಟುಂದ ಮೂಲಗಳು ತಿಳಿಸಿವೆ. ಲಖನೌನಲ್ಲಿ ಶನಿವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಅಮಿತಾಭ್ ಅವರ ಪತ್ನಿ ನೂತನ್ ಅವರು ಇದು ತಮ್ಮ ಪತಿಗೆ ಆದರ್ಶಗಳ ಹೋರಾಟವಾಗಿದೆ ಎಂದರು.

‘ಶ್ರೀ ಆದಿತ್ಯನಾಥ ಅವರು ತಾವು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಅನೇಕ, ಪ್ರಜಾಪ್ರಭುತ್ವ ವಿರೋಧಿ, ಯೋಗ್ಯವಲ್ಲದ, ದಮನಕಾರಿ, ಕಿರುಕುಳ ನೀಡುವ ಮತ್ತು ಪೂರ್ವಾಗ್ರಹಪೀಡಿತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ; ಹಾಗಾಗೇ ಅವರು ಯಾವುದೇ ಕ್ಷೇತ್ರದಿಂದ ಸ್ಫರ್ಧಿಸಿದರೂ ನನ್ನ ಪತಿ ಅಮಿತಾಭ್ ಅವರ ವಿರುದ್ಧ ಸೆಣಸಲಿದ್ದಾರೆ,’ ಎಂದು ನೂತನ್ ಹೇಳಿದರು.

‘ಅವರಿಗೆ (ಅಮಿತಾಬ್ ಠಾಕೂರ್) ಇದು ಆದರ್ಶಗಳಿಗಾಗಿ ನಡೆಸುವ ಹೋರಾಟವಾಗಲಿದೆ, ಚುನಾವಣೆಯಲ್ಲಿ ಅವರು ಮುಖ್ಯಮಂತ್ರಿಗಳ ಎಲ್ಲ ಪ್ರಮಾದಗಳನ್ನು ಎತ್ತಿ ತೋರಲಿದ್ದಾರೆ,’ ಎಂದು ನೂತನ್ ಹೇಳಿದರು.

ಕೇಂದ್ರ ಗೃಹಸಚಿವಾಲಯದ ಒಂದು ನಿರ್ಧಾರದ ನಂತರ ಠಾಕೂರ್ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತಾಗಿತ್ತು ಎನ್ನುವದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದಾಗಿದೆ. ‘ತಮ್ಮ ಮಿಕ್ಕಿದ ಸೇವಾವಧಿಯಲ್ಲಿ ಮುಂದುವರಿಯಲು ಅಮಿತಾಬ್ ಠಾಕೂರ್ ಸಮರ್ಥರಲ್ಲ,’ ಎಂದು ಗೃಹ ಸಚಿವಾಲಯ ಆದೇಶದಲ್ಲಿ ತಿಳಿಸಲಾಗಿತ್ತು. ಸೇವೆ ಮೊಟಕುಗೊಳ್ಳದಿದ್ದರೆ ಠಾಕೂರ್ 2028 ರಲ್ಲಿ ನಿವೃತ್ತಿ ಹೊಂದುತ್ತಿದ್ದರು.

‘ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅಮಿತಾಭ್ ಠಾಕೂರ್ ಅವರನ್ನು ಸೇವಾವಧಿ ಕೊನೆಗೊಳ್ಳುವ ಮೊದಲು ಕೂಡಲೇ ನಿವೃತ್ತರಾಗುವಂತೆ ಸೂಚಿಸಿಲಾಗಿದೆ,’ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

2017ರಲ್ಲಿ ಅಮಿತಾಬ್ ಠಾಕೂರ್ ತಮ್ಮ ಕೇಡರ್ ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಆ್ರಹಿಸಿದ್ದರು. 2015ರಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ತನಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅರೋಪಿಸಿದ ಹಿನ್ನೆಲೆಯಲ್ಲಿ ಠಾಕೂರ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಅವರ ವಿರುದ್ಧ ಜಾಗರೂಕ ದಳದ ತನಿಖೆ ಆರಂಭಿಸಲಾಗಿತ್ತು.

ಆದರೆ, ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಲಖನೌ ಪೀಠವು ಏಪ್ರಿಲ್ 2016 ರಲ್ಲಿ ಠಾಕೂರ್ ಅವರ ಅಮಾನತು ಆದೇಶವನ್ನು ತಡೆಹಿಡಿದು, ಅವರ ಸೇವೆಯನ್ನು ಅಕ್ಟೋಬರ್ 11, 2015 ರಿಂದ ಜಾರಿಗೆ ಬರುವಂತೆ ಪೂರ್ಣ ಸಂಬಳದೊಂದಿಗೆ ಪುನರ್ ನೇಮಕ ಮಾಡಬೇಕು ಎಂದು ಆದೇಶಿಸಿತ್ತು.

ಇದನ್ನೂ ಓದಿ: ಶ್ರೀರಾಮ ನಮ್ಮ ಪೂರ್ವಜ, ಯಾರು ಅದನ್ನು ಒಪ್ಪುತ್ತಿಲ್ಲವೋ ಅವರ ಡಿಎನ್ಎ ಬಗ್ಗೆ ಅನುಮಾನವಿದೆ: ಯೋಗಿ ಆದಿತ್ಯನಾಥ 

Published On - 4:27 pm, Sat, 14 August 21

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ