ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ಮನೆ ಮೇಲೆ ಬಿಜೆಪಿ (BJP) ಕಾರ್ಯಕರ್ತರು ಬುಧವಾರ ದಾಳಿ ನಡೆಸಿದ್ದು, ಕೇಜ್ರಿವಾಲ್ ಇದನ್ನು ಗೂಂಡಾಗಿರಿ ಎಂದು ಕರೆದಿದ್ದಾರೆ.”ಭಾರತದ ಅತಿದೊಡ್ಡ ಪಕ್ಷವು ಗೂಂಡಾಗಿರಿಯಲ್ಲಿ ತೊಡಗಿದರೆ, ಅದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಅರವಿಂದ ಕೇಜ್ರಿವಾಲ್ ಮುಖ್ಯವಲ್ಲ ಆದರೆ ರಾಷ್ಟ್ರ ಮುಖ್ಯ. ನಾನು ದೇಶಕ್ಕಾಗಿ ನನ್ನ ಪ್ರಾಣವನ್ನು ಕೊಡಬಲ್ಲೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ದೇಶದ ಅತಿ ದೊಡ್ಡ ಹಾಗೂ ಆಡಳಿತಾರೂಢ ಪಕ್ಷವೇ ದೆಹಲಿಯಲ್ಲಿ ಇಂತಹ ‘ಗೂಂಡಾಗಿರಿ’ ಮಾಡಿದರೆ ದೇಶದ ಯುವಕರಿಗೆ ಯಾವ ಸಂದೇಶ ನೀಡಲಿದೆ? ದೇಶ ಈ ರೀತಿ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಬುಧವಾರ ಆಮ್ ಆದ್ಮಿ ಪಕ್ಷ (AAP) ಕೇಜ್ರಿವಾಲ್ ಅವರ ಮನೆ ಮೇಲಿನ ದಾಳಿಯ ಕುರಿತು ಟ್ವೀಟ್ ಮಾಡಿದ್ದು, “ಬಿಜೆಪಿ ಗೂಂಡಾಗಳು ದೆಹಲಿ ಪೊಲೀಸರ ಸಮ್ಮುಖದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತಾ ತಡೆಗಳನ್ನು ಮುರಿದಿದ್ದಾರೆ” ಎಂದು ಹೇಳಿದೆ. ಇದಾದ ನಂತರ 35-ಸೆಕೆಂಡ್ ಕ್ಲಿಪ್ ಅನ್ನು ಟ್ವೀಟ್ ಮಾಡಿ, ಅದನ್ನು “ರಾ ಸಿಸಿಟಿವಿ ಫೂಟೇಜ್” ಎಂದು ಕರೆದಿದೆ. ಕ್ಲಿಪ್ ಸುಮಾರು ಎರಡು ಡಜನ್ ಪ್ರತಿಭಟನಾಕಾರರು ಗೇಟ್‌ಗಳವರೆಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ ಮತ್ತು ಭದ್ರತಾ ತಡೆಗೋಡೆಯನ್ನು ಉರುಳಿಸುವುದನ್ನು ತೋರಿಸುತ್ತದೆ.
CM House पर हुए हमले पर CM @ArvindKejriwal :
“देश के लिए मेरी जान भी हाज़िर है लेकिन गुंडागर्दी से देश आगे नहीं बढ़ेगा। 21वीं सदी का भारत बनाने के लिए मिलकर काम करना होगा।
दुनिया की सबसे बड़ी पार्टी अगर इस तरह की गुंडागर्दी करती है तो युवाओं में ग़लत संदेश जाता है।” #BJPKeGunde pic.twitter.com/e2d6yQRIu5
— AAP (@AamAadmiParty) March 31, 2022
ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುರುವಾರ ಎಂಟು ಜನರನ್ನು ಬಂಧಿಸಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರದ ಕುರಿತು ಕೇಜ್ರಿವಾಲ್ ಅವರ ಹೇಳಿಕೆಗಳನ್ನು ಖಂಡಿಸಿ ದೆಹಲಿಯಲ್ಲಿ ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನ ಸುಮಾರು 200 ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಕೇಜ್ರಿವಾಲ್ ಮನೆ ಹೊರಗೆ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಕೇಜ್ರಿವಾಲ್ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
BJP’s MP or a Sadak Chhap Gunda?@Tejasvi_Surya #ArrestTejasviSurya pic.twitter.com/lP2pP0RhAs
— AAP (@AamAadmiParty) March 30, 2022
ಕೇಜ್ರಿವಾಲ್ ಮನೆ ಮೇಲಿನ ದಾಳಿ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಆಪ್ ಶಾಸಕ ಸೌರಭ್ ಭಾರದ್ವಾಜ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ಮೇಲೆ ಬುಧವಾರ ನಡೆದ ದಾಳಿ ಮತ್ತು ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಎಎಪಿ ಶಾಸಕ ಸೌರಭ್ ಭಾರದ್ವಾಜ್ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ. ದಾಳಿ ಮತ್ತು ಅದರ ದುಷ್ಕರ್ಮಿಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ತನಿಖೆ ಮತ್ತು ಭವಿಷ್ಯದಲ್ಲಿ ದೆಹಲಿ ಸಿಎಂ ಮತ್ತು ಅವರ ನಿವಾಸದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ನಿರ್ದೇಶನಗಳನ್ನು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಚುನಾವಣೆಯಲ್ಲಿ ಸೋಲಿಸಲು ಆಗುತ್ತಿಲ್ಲ ಹಾಗಾಗಿ ಕೇಜ್ರಿವಾಲ್ನ್ನು ಕೊಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ: ಆಮ್ ಆದ್ಮಿ ಪಕ್ಷ
Published On - 1:57 pm, Thu, 31 March 22