ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಕೋಟಾದ ವಿದ್ಯಾರ್ಥಿಗಳ ಸಂಖ್ಯೆ ಸಾಮಾನ್ಯ ವರ್ಗಕ್ಕಿಂತ ಹೆಚ್ಚು: ಐಐಟಿ ಉದಯ್ಪುರ
ಉನ್ನತ ಶಿಕ್ಷಣಕ್ಕೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ದಾಖಲಾತಿಗಿಂತ ಪರಿಶಿಷ್ಟ ಜಾತಿ(ಎಸ್‌ಸಿ), ಪರಿಶಿಷ್ಟ ಪಂಗಡ(ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳ(ಒಬಿಸಿ) ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಐಐಎಂ ಉದಯಪುರದ ತಂಡ ಸಂಶೋಧನೆಯಲ್ಲಿ ಕಂಡುಹಿಡಿದಿದೆ. ಶೈಕ್ಷಣಿಕ ಸಂಶೋಧನಾ ವೇದಿಕೆ CasteFilesನಲ್ಲಿ ತಿಳಿಸಲಾಗಿದೆ. ಶಿಕ್ಷಣ ಸಚಿವಾಲಯ (MoE) ವಾರ್ಷಿಕ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (AISHE) ವರದಿಗಳನ್ನು ಪ್ರಕಟಿಸಲು ಪ್ರಾರಂಭಿಸಿದ ಹದಿನೈದು ವರ್ಷಗಳ ನಂತರ, IIM ಉದಯಪುರದ ಸಂಶೋಧನಾ ತಂಡವು ವಿದ್ಯಾರ್ಥಿಗಳ ದಾಖಲಾತಿ ಪ್ರವೃತ್ತಿಯನ್ನು ವಿಶ್ಲೇಷಿಸಿ ಭಾರತೀಯ ಉನ್ನತ ಶಿಕ್ಷಣದಲ್ಲಿ ಜಾತಿವಾರು ಭಾಗವಹಿಸುವಿಕೆಯ ಕುರಿತು ಇದುವರೆಗೆ ನಡೆಸಿದ ಅತ್ಯಂತ ಸಮಗ್ರ ಅಧ್ಯಯನಗಳಲ್ಲಿ ಒಂದನ್ನು ಈಗ ಬಿಡುಗಡೆ ಮಾಡಿದೆ.

ನವದೆಹಲಿ, ಡಿಸೆಂಬರ್ 03: ಉನ್ನತ ಶಿಕ್ಷಣದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿ(Student)ಗಳ ದಾಖಲಾತಿಗಿಂತ ಪರಿಶಿಷ್ಟ ಜಾತಿ(ಎಸ್‌ಸಿ), ಪರಿಶಿಷ್ಟ ಪಂಗಡ(ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳ(ಒಬಿಸಿ) ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಐಐಎಂ ಉದಯ್ಪುರದ ತಂಡ ಸಂಶೋಧನೆಯಲ್ಲಿ ಕಂಡುಹಿಡಿದಿದೆ. ಶೈಕ್ಷಣಿಕ ಸಂಶೋಧನಾ ವೇದಿಕೆ CasteFilesನಲ್ಲಿ ಪ್ರಕಟಿಸಲಾಗಿದೆ. ಶಿಕ್ಷಣ ಸಚಿವಾಲಯ (MoE) ವಾರ್ಷಿಕ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (AISHE) ವರದಿಗಳನ್ನು ಪ್ರಕಟಿಸಲು ಪ್ರಾರಂಭಿಸಿದ ಹದಿನೈದು ವರ್ಷಗಳ ನಂತರ, ಐಐಎಂ ಉದಯ್ಪುರದ ಸಂಶೋಧನಾ ತಂಡವು ವಿದ್ಯಾರ್ಥಿಗಳ ದಾಖಲಾತಿ ಪ್ರವೃತ್ತಿಯನ್ನು ವಿಶ್ಲೇಷಿಸಿ ಭಾರತೀಯ ಉನ್ನತ ಶಿಕ್ಷಣದಲ್ಲಿ ಜಾತಿವಾರು ಭಾಗವಹಿಸುವಿಕೆಯ ಕುರಿತು ಇದುವರೆಗೆ ನಡೆಸಿದ ಅತ್ಯಂತ ಸಮಗ್ರ ಅಧ್ಯಯನಗಳಲ್ಲಿ ಒಂದನ್ನು ಈಗ ಬಿಡುಗಡೆ ಮಾಡಿದೆ.
ವೆಂಕಟರಾಮನ್ ಕೃಷ್ಣಮೂರ್ತಿ ಅವರ ಸಹಕಾರದೊಂದಿಗೆ ಈ ಅಧ್ಯಯನ ನಡೆಸಲಾಗಿದೆ. ಐಟಿ ತಜ್ಞ ಮತ್ತು ಡೇಟಾ ಸಂಶೋಧನಾ ವಿಶ್ಲೇಷಕ ತ್ಯಾಗರಾಜನ್ ಜಯರಾಮನ್ಪ್ರೊ. ದಿನಾ ಬ್ಯಾನರ್ಜಿ ನೇತೃತ್ವದಲ್ಲಿ, ಅಭಿವೃದ್ಧಿ ನೀತಿ ಮತ್ತು ನಿರ್ವಹಣಾ ಕೇಂದ್ರದ (CDPM) ತಂಡವು 60,380 ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು 43.8 ಮಿಲಿಯನ್ ವಿದ್ಯಾರ್ಥಿಗಳನ್ನು ಒಳಗೊಂಡ ಅಧ್ಯಯನ ನಡೆಸಿತ್ತು.
ಈ ವರದಿಯು ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಯನ್ನು ದೂರ ಮಾಡುತ್ತದೆ. ಮೀಸಲಾತಿ ಕೋಟಾದ ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗಿಂತ ಗಮನಾರ್ಹವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ತೋರಿಸಿದೆ.
ಉನ್ನತ ಶಿಕ್ಷಣದಲ್ಲಿ 2010-11ರಲ್ಲಿ ಶೇ. 43.1 ರಷ್ಟಿದ್ದ ಎಸ್‌ಸಿ,ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳ ಒಟ್ಟು ಪಾಲು 2022-23ರಲ್ಲಿ ಶೇ. 60.8 ಕ್ಕೆ ಏರಿದೆ. 2023 ರಲ್ಲಿ , ಎಸ್‌ಸಿ/ಎಸ್‌ಟಿ/ಒಬಿಸಿ ದಾಖಲಾತಿ ಸಾಮಾನ್ಯ ವರ್ಗಕ್ಕಿಂತ 9.5 ಮಿಲಿಯನ್ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.ಆರ್ಥಿಕವಾಗಿ ದುರ್ಬಲ ವಿಭಾಗ (EWS) ಕೋಟಾದ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿದಾಗಲೂ, ಸಾಮಾನ್ಯ ವರ್ಗದ ಪಾಲು 2011 ರಲ್ಲಿ ಶೇಕಡಾ 57 ರಿಂದ 2023 ರಲ್ಲಿ ಸುಮಾರು ಶೇಕಡಾ 39 ಕ್ಕೆ ಇಳಿದಿದೆ.
ಮತ್ತಷ್ಟು ಓದಿ: ಸರ್ಕಾರಿ ಶಾಲೆಗಳ ಎಲ್ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ಮೊಟ್ಟೆ, ಹಾಲು, ಬಾಳೆಹಣ್ಣು
ಆದ್ದರಿಂದ ಅನೇಕ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ಶಿಕ್ಷಣ ಮತ್ತು ಕೆಲಸದ ಅವಕಾಶಗಳನ್ನು ಪಡೆಯುತ್ತಾರೆ, ಆದರೆ ಅವರು ಪಾಶ್ಚಿಮಾತ್ಯ ದೇಶಗಳಲ್ಲಿ ಜಾತಿ ಆಧಾರಿತ ಕಳಂಕವನ್ನು ಎದುರಿಸುತ್ತಲೇ ಇರುತ್ತಾರೆ ಎಂಬುದು ಆಶ್ಚರ್ಯವೇನಿಲ್ಲ.
ಈ ಹಿಂದೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ,ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಪ್ರಮುಖ ಹುದ್ದೆಗಳಿಗೆ ಲ್ಯಾಟರಲ್ ಪ್ರವೇಶಾತಿ ಮೂಲಕ ನೇಮಕಾತಿ ನಡೆಸುವ ಮೂಲಕ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದ ಮೀಸಲಾತಿಯನ್ನು ಮುಕ್ತವಾಗಿ ಕಸಿಯಲಾಗುತ್ತಿದೆ ಎಂದು ಕಿಡಿ ಕಾರಿದ್ದರು.ಹಿಂದುಳಿದ ವರ್ಗದವರು ಉನ್ನತ ಅಧಿಕಾರ ಸೇರಿದಂತೆ ದೇಶದ ಎಲ್ಲಾ ಉನ್ನತ ಹುದ್ದೆಗಳನ್ನು ಪ್ರತಿನಿಧಿಸುತ್ತಿಲ್ಲ.
ಇದನ್ನು ಸುಧಾರಣೆ ಮಾಡುವ ಬದಲಾಗಿ, ಲ್ಯಾಟರಲ್ ಪ್ರವೇಶಾತಿ ಮೂಲಕ ಇಂತಹ ಉನ್ನತ ಹುದ್ದೆಗಳನ್ನು ಅವರಿಂದ ಮತ್ತಷ್ಟು ದೂರ ತಳ್ಳುತ್ತಿದ್ದಾರೆ.ಇದು ಯುಪಿಎಸ್ಸಿಗೆ ತಯಾರಾಗುತ್ತಿರುವ ಪ್ರತಿಭಾವಂತರ ಹಕ್ಕನ್ನು ಕಸಿಯಲಾಗುತ್ತಿದೆ. ಹಿಂದುಳಿದ ವರ್ಗದ ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ವಿಷಯದ ಮೇಲಿನ ದಾಳಿ ಇದಾಗಿದೆ ಎಂದು ಟೀಕಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




