ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಇಂದಿನಿಂದ (ಆಗಸ್ಟ್ 28) ಆಗಸ್ಟ್ 30ರವರೆಗೆ ವಿಪರೀತ ಮಳೆ (Heavy Rainfall)ಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಕರಾವಳಿ ಮತ್ತು ದಕ್ಷಿಣ ಕರ್ನಾಟಕದ ಒಳನಾಡು ಪ್ರದೇಶಗಳು, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದೆ. ಅದು ಮುಂದಿನ ಎರಡು ದಿನಗಳಲ್ಲಿ ಇನ್ನಷ್ಟು ವ್ಯಾಪಕವಾಗಿ ಸುರಿಯಲಿದೆ. ಭಾರಿ ಮಳೆ ಬೀಳುವ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ತಮಿಳುನಾಡು ಮತ್ತು ಕೇರಳದ ಘಟ್ಟ ಪ್ರದೇಶಗಳಲ್ಲಿ ಅಲ್ಲಲ್ಲಿ ಇಂದು ಮತ್ತು ಭಾನುವಾರ ಸಿಕ್ಕಾಪಟೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಅದರಲ್ಲೂ ಕೇರಳದಲ್ಲಿ ತುಂಬ ಮಳೆಬೀಳುವ ಸಾಧ್ಯತೆ ಇರುವುದರಿಂದ ಇಂದು ಮತ್ತು ನಾಳೆ ಒಟ್ಟು 6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸದ್ಯ ನೈಋತ್ಯ ಮಾನ್ಸೂನ್ ಪ್ರಭಾವ ಕೇರಳದಲ್ಲಿ ಹೆಚ್ಚಾಗಲಿದೆ ಎಂದು ಐಎಂಡಿ ತಿಳಿಸಿದೆ. ಆಗಸ್ಟ್ 30ರವರೆಗೂ ಸಮುದ್ರಕ್ಕೆ ಇಳಿಯಬೇಡಿ ಎಂದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ನೈಋತ್ಯ ಮತ್ತು ಪಶ್ಚಿಮ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಗಂಟೆಗೆ 50/60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಎಚ್ಚರಿಕೆಯಿಂದ ಇರಬೇಕು..ಈ ಅವಧಿಯಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದು ಐಎಂಡಿ ಸೂಚಿಸಿದೆ.
ದೆಹಲಿಯಲ್ಲೂ ಮಳೆ
ರಾಷ್ಟ್ರರಾಜಧಾನಿ ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲೂ ಆಗಸ್ಟ್ 29ರಿಂದ ಭರ್ಜರಿ ಮಳೆ ಸುರಿಯಲಿದೆ ಎಂದು ಐಎಂಡಿ ಹೇಳಿದೆ. ಮಾನ್ಸೂನ್ನ ಕಡಿಮೆ ಒತ್ತಡ ಪ್ರದೇಶವು ಹಿಮಾಲಯದ ತಪ್ಪಲಿನಿಂದಲ ಬಯಲು ಪ್ರದೇಶಗಳ ಕಡೆಗೆ ಚಲಿಸುವ ಕಾರಣಕ್ಕೆ ಮಳೆ ಹೆಚ್ಚಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು ಪೊಲೀಸರ ಬೃಹತ್ ಬೇಟೆ; 1 ಕ್ವಿಂಟಲ್ಗೂ ಹೆಚ್ಚು ತೂಕದ ಒಣ ಗಾಂಜಾ ತರಕಾರಿ ಗಾಡಿಯಲ್ಲಿ ಪತ್ತೆ, ಮೂವರು ವಶಕ್ಕೆ
India vs England: ಶತಕದತ್ತ ಪೂಜಾರ, ಅರ್ಧಶತಕದತ್ತ ಕೊಹ್ಲಿ: ಇಂಗ್ಲೆಂಡ್ಗೆ ಶುರುವಾಗಿದೆ ನಡುಕ: 4ನೇ ದಿನ ಏನಾಗಲಿದೆ?