ಕೊರೊನಾವೈರಸ್ ದೇವರ ಸೂಪರ್​​ಕಂಪ್ಯೂಟರ್​​​ನಲ್ಲಿ ಸೃಷ್ಟಿಯಾಗಿದೆ ಎಂದರು ಆಸ್ಸಾಮಿನ ಬಹುಖಾತೆಗಳ ಸಚಿವ ಚಂದ್ರಮೋಹನ್ ಪಟೊವರಿ!

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. ಹಾಗಾಗಿ, ಪ್ರಕೃತಿ ಮನುಕುಲದ ವಿರುದ್ಧ ಸಮರ ಸಾರಿದೆ ಎಂದು ಸಚಿವರು ಹೇಳಿದರು.

ಕೊರೊನಾವೈರಸ್ ದೇವರ ಸೂಪರ್​​ಕಂಪ್ಯೂಟರ್​​​ನಲ್ಲಿ ಸೃಷ್ಟಿಯಾಗಿದೆ ಎಂದರು ಆಸ್ಸಾಮಿನ ಬಹುಖಾತೆಗಳ ಸಚಿವ ಚಂದ್ರಮೋಹನ್ ಪಟೊವರಿ!
ಚಂದ್ರಮೋಹನ್ ಪಟೊವರಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 28, 2021 | 1:33 AM

ಗುವಹಾಟಿ: ಅಸ್ಸಾಮಿನ ಸಚಿವರೊಬ್ಬರ ಪ್ರಕಾರ ಕೊರೋನಾವೈರಸ್ ದೇವರ ಸೂಪರ್ಕಂಪ್ಯೂಟರ್ನಲ್ಲಿ ಸೃಷ್ಟಿಯಾಗಿದ್ದು ಯಾರಿಗೆ ಸೋಂಕು ತಾಕಿಸಬೇಕು ಯಾರನ್ನು ಬಲಿತೆಗೆದುಕೊಳ್ಳಬೇಕು ಅಂತ ಅದೇ ನಿರ್ಧರಿಸುತ್ತದಂತೆ! ಅಂದಹಾಗೆ, ಈ ಮಹಾನುಭಾವ ಸಚಿವರ ಹೆಸರು ಚಂದ್ರಮೋಹನ್ ಪಟೊವರಿ. ಗುವಹಾಟಿಯ ಅಮೀನ್ಗಾಂವ್​ನಲ್ಲಿ ಬುಧವಾರದಂದು ಕೋವಿಡ್-19 ಸೋಂಕಿನಿಂದ ಪತಿಯರನ್ನು ಕಳೆದುಕೊಂದ ಮಹಿಳೆಯರಿಗೆ ರಾಜ್ಯ ಸರ್ಕಾರದ ಯೋಜನೆಯೊಂದರಡಿ ಹಣಕಾಸಿನ ನೆರವನ್ನು ವಿತರಿಸುವಾಗ ಸಚಿವರು ಈ ಅಣಿಮುತ್ತುಗಳನ್ನು ಉದುರಿಸಿದರು.

‘ಯಾರಿಗೆ ಸೋಂಕು ತಾಕಬೇಕು, ಯಾರಿಗೆ ತಾಕಬಾರದು, ಯಾರನ್ನು ಭೂಮಿಯಿಂದ ಎತ್ತಿಕೊಂಡು ಹೋಗಬೇಕು ಅನ್ನೋದನ್ನೆಲ್ಲ ಪ್ರಕೃತಿ ನಿರ್ಧರಿಸುತ್ತದೆ. ಇದು ಮಾನವಕೃತವಲ್ಲ, ದೇವರ ಬಳಿಯಿರುವ ಸೂಪರ್ಕಂಪ್ಯೂಟರ್ ಇದನ್ನೆಲ್ಲ ನಿರ್ವಹಿಸುತ್ತದೆ. ಭೂಮಿಯ ಮೇಲಿರುವ ಶೇಕಡಾ 2 ರಷ್ಟು ಜನಗಳನ್ನು ಬಲಿ ತೆಗೆದುಕೊಳ್ಳಲು ಕಂಪ್ಯೂಟರ್ ಕೋವಿಡ್-19 ವೈರಸ್ ಅನ್ನು ಕಳಿಸಿದೆ,’ ಎಂದು ಅಸ್ಸಾಮಿನ ಸಾರಿಗೆ, ಕೈಗಾರಿಕೆ ಮತ್ತು ವಾಣಿಜ್ಯ, ಌಕ್ಟ್ ಈಸ್ಟ್ ಆಫ್ ಪಾಲಿಸಿ ಆಫೇರ್ಸ್, ಕೌಶಲ್ಯಾಭಿವೃದ್ಧಿ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಖಾತೆಗಳ ಸಚಿವರಾಗಿರುವ ಪಟೊವರಿ ಹೇಳಿದರು.

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. ಹಾಗಾಗಿ, ಪ್ರಕೃತಿ ಮನುಕುಲದ ವಿರುದ್ಧ ಸಮರ ಸಾರಿದೆ ಎಂದು ಸಚಿವರು ಹೇಳಿದರು.

‘ಕೊವಿಡ್-19 ಬಗ್ಗೆ ಜಗತ್ತಿಗೆಲ್ಲ ಉಪದೇಶ ಸಾರಿದ ವಿಜ್ಞಾನಿಗಳು ಎಲ್ಲಿದ್ದಾರೆ? ಪಿಡುಗನ್ನು ನಿರ್ಮೂಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಲಸಿಕೆ ತೆಗೆದುಕೊಂಡ ನಂತರವೂ ಜನ ಸಾಯುತ್ತಿದ್ದಾರೆ. ಕೇವಲ ಪ್ರಕೃತಿಗೆ ಮಾತ್ರ ಈ ಸೋಂಕಿನ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯ. ನಾವು ನಿಸರ್ಗದ ವಿರುದ್ಧ ಯುದ್ಧ ನಡೆಸಿದೆವು, ಈಗ ಅದು ನಮ್ಮ ವಿರುದ್ಧ ಸಮರ ಘೋಷಿಸಿದೆ,’ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಅಸ್ಸಾಂನಲ್ಲಿ ಇನ್ಮುಂದೆ ಹಿಂದು ಧಾರ್ಮಿಕ ಪ್ರದೇಶಗಳ 5 ಕಿ.ಮೀ.ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಖರೀದಿ ಮಾಡುವಂತಿಲ್ಲ

ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್