Votevibe Survey: ಮತಕಳವು ಬಗ್ಗೆ ರಾಹುಲ್​ ಗಾಂಧಿ ಗಂಭೀರ ಆರೋಪಕ್ಕೆ ಜನರು ಪ್ರತಿಕ್ರಿಯಿಸಿದ್ಹೇಗೆ?

ಸಂಸದ ರಾಹುಲ್ ಗಾಂಧಿ(Rahul Gandhi)ಯ ಮತಕಳವು ಆರೋಪಕ್ಕೆ ಸಂಬಂಧಿಸಿದಂತೆ ದೇಶದ ಜನರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ತಿಳಿಯೋಣ. ಖಾಸಗಿ ಸಂಸ್ಥೆ ವೋಟ್ ವೈಬ್ ರಾಹುಲ್ ಗಾಂಧಿ ಆರೋಪಕ್ಕೆ ಜನರ ಪ್ರತಿಕ್ರಿಯೆಯನ್ನು ಸಂಗ್ರಹಿಸಿದೆ. ಐದು ಪ್ರಶ್ನೆಗಳನ್ನು ಕೇಳಿ ಯಾರ್ಯಾರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಇಲ್ಲಿ ನೀಡಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮತದಾರರ ಪಟ್ಟಿಯ ಅಕ್ರಮಗಳ ಕುರಿತ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು.

Votevibe Survey: ಮತಕಳವು ಬಗ್ಗೆ ರಾಹುಲ್​ ಗಾಂಧಿ ಗಂಭೀರ ಆರೋಪಕ್ಕೆ ಜನರು ಪ್ರತಿಕ್ರಿಯಿಸಿದ್ಹೇಗೆ?
ರಾಹುಲ್ ಗಾಂಧಿ
Updated By: ಡಾ. ಭಾಸ್ಕರ ಹೆಗಡೆ

Updated on: Aug 18, 2025 | 10:34 AM

ನವದೆಹಲಿ, ಆಗಸ್ಟ್​ 18: ಸಂಸದ ರಾಹುಲ್ ಗಾಂಧಿ(Rahul Gandhi)ಯ ಮತಕಳವು ಆರೋಪಕ್ಕೆ ಸಂಬಂಧಿಸಿದಂತೆ ದೇಶದ ಜನರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ತಿಳಿಯೋಣ. ಖಾಸಗಿ ಸಂಸ್ಥೆ ವೋಟ್ ವೈಬ್ (VoteVibe) ರಾಹುಲ್ ಗಾಂಧಿ ಆರೋಪಕ್ಕೆ ಜನರ ಪ್ರತಿಕ್ರಿಯೆಯನ್ನು ಸಂಗ್ರಹಿಸಿದೆ. ಐದು ಪ್ರಶ್ನೆಗಳನ್ನು ಕೇಳಿ  ಎಷ್ಟು ಮಂದಿ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಇಲ್ಲಿ ನೀಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮತದಾರರ ಪಟ್ಟಿಯ ಅಕ್ರಮಗಳ ಕುರಿತ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ‘ಮತ ಕಳವು’ ಆರೋಪವನ್ನು ಆಧಾರರಹಿತ, ಅಸಿಂಧು ಎಂದು ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

ರಾಹುಲ್​ ಗಾಂಧಿ ಚುನಾವಣಾ ಆಯೋಗದ ಮೇಲೆ ಮಾಡಿರುವ ಮತಕಳ್ಳತನ ಆರೋಪದ ಬಗ್ಗೆ ನೀವೇನು ಹೇಳುತ್ತೀರಿ?
ಸಾರ್ವಜನಿಕರು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು ಅರ್ಧದಷ್ಟು ಜನರು (48%) ಭಾರತ ಚುನಾವಣಾ ಆಯೋಗದ (ECI) ವಿರುದ್ಧ ರಾಹುಲ್ ಗಾಂಧಿಯವರ ಮತ ಕಳ್ಳತನ ಆರೋಪಗಳನ್ನು  ಸತ್ಯವೆಂದು ಮತ್ತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಅದನ್ನು ಆಧಾರರಹಿತವೆಂದು ಪರಿಗಣಿಸಿದ್ದು ಕೇವಲ ಶೇ.27ರಷ್ಟು ಜನ ಮಾತ್ರ. 60 ವರ್ಷದವರಿಗಿಂತ ಮೇಲ್ಪಟ್ಟವರು ಇದನ್ನು ಹೆಚ್ಚಾಗಿ ನಂಬಿದ್ದಾರೆ. 18-23 ವರ್ಷದೊಳಗಿನವರು ಇದರ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗದ ಚುನಾವಣಾ ಫಲಿತಾಂಶ ಬಿಜೆಪಿಗೆ ಸಹಾಯ ಮಾಡಿದೆ ಎಂಬ ರಾಹುಲ್ ಗಾಂದಿ ಆರೋಪಗಳನ್ನು ನೀವು ಒಪ್ತೀರಾ?
ಚುನಾವಣಾ ಆಯೋಗದ ಚುನಾವಣಾ ಫಲಿತಾಂಶವು ಬಿಜೆಪಿ ಸಹಾಯ ಮಾಡಿದೆ ಎಂದು ಒಪ್ಪದವರ ಸಂಖ್ಯೆಯೇ ಹೆಚ್ಚಿದೆ. ಶೇ.47ರಷ್ಟು ಮಂದಿ ಇದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಒಪ್ಪುವ ಜನರು ಶೇ.39ರಷ್ಟಿದ್ದಾರೆ. 60 ವರ್ಷ ಮೇಲ್ಪಟ್ಟ ಶೇ.60 ರಷ್ಟು ಮಂದಿ ಒಪ್ಪುವುದಿಲ್ಲ ಎಂದು ಹೇಳಿದ್ದರೆ, 46-60 ವರ್ಷದೊಳಗಿನ ಶೇ.44ರಷ್ಟು ಮಂದಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ಚುನಾವಣಾ ಆಯೋಗ, ಚುನಾವಣಾ ಪ್ರಕ್ರಿಯೆ ಬಗ್ಗೆ ನಿಮಗೆ ನಂಬಿಕೆ ಎಷ್ಟಿದೆ?

ಭಾರತದ ಚುನಾವಣಾ ಆಯೋಗದ ಮೇಲೆ ನಂಬಿಕೆ ಎಷ್ಟಿದೆ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಅದರಲ್ಲಿ ಶೇ.38ರಷ್ಟು ಮಹಿಳೆಯರು ಆಯೋಗದ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಾರೆ. ಪುರುಷರ ಸಂಖ್ಯೆ ಶೇ.25ರಷ್ಟು ಮಾತ್ರ. 46-60 ವರ್ಷ ವಯಸ್ಸಿನ ಶೇ.36ರಷ್ಟು ಮಂದಿ ಆಯೋಗದ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ನಂಬದವರ ಸಂಖ್ಯೆಯೇ ಹೆಚ್ಚಿದೆ. ಶೇ,.27ರಷ್ಟು ಮಂದಿ ನಂಬುವುದಿಲ್ಲ ಎಂದು ಹೇಳಿದ್ದರೆ, ಕೇವಲ ಶೇ.20ರಷ್ಟು ನಂಬುವುದಾಗಿ ಹೇಳಿದ್ದಾರೆ.

ಮತ್ತಷ್ಟು ಓದಿ: Votevibe Survey: ತಮಿಳುನಾಡು ಚುನಾವಣೆ, ಜನರ ನಾಡಿ ಮಿಡಿತ ಅರಿಯಲು ‘ವೋಟ್ ವೈಬ್’ ಸಮೀಕ್ಷೆ

ಮಹಾದೇವಪುರ ಮತಗಳವು ಆರೋಪ ಆಯೋಗ ದಾಖಲೆ ಕೇಳಿದ್ದು ಸರಿಯೇ?
ಮಹಾದೇವಪುರದಲ್ಲಿ ಮತಗಳವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಕುರಿತು ಚುನಾವಣಾ ಆಯೋಗ ದಾಖಲೆ ಕೇಳಿತ್ತು. ಚುನಾವಣಾ ಆಯೋಗ ಕೇಳಿದ್ದು ಸರಿ ಎಂದು ಶೇ.46ರಷ್ಟು ಮಹಿಳೆಯರು ಹೇಳಿದ್ದರೆ, ಶೇ.45ರಷ್ಟು ಪುರುಷರು ಕೂಡ ಇದೇ ಅಭಿಪ್ರಾಯ ಕೊಟ್ಟಿದ್ದಾರೆ.46-60ವರ್ಷದ ಶೇ.62ರಷ್ಟು ಮಂದಿ ಸರಿ ಎಂದು ಹೇಳಿದ್ದಾರೆ. 18-23 ವರ್ಷದ ಶೇ.48ರಷ್ಟು ಮಂದಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಹಾರದ ಎಸ್​ಐಆರ್ ಹಾಗೂ ಮತ ಕಳ್ಳತನ ಆರೋಪಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದ ರೀತಿ ಬಗ್ಗೆ ನೀವೇನು ಹೇಳ್ತೀರಿ?
ಬಿಹಾರದ ಎಸ್​ಐಆರ್ ಹಾಗೂ ಮತಕಳ್ಳತನ ಆರೋಪದ ಬಗ್ಗೆ ಆಯೋಗ ನೀಡಿರುವ ಪ್ರತಿಕ್ರಿಯೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಲಾಗಿತ್ತು. ಅದರಲ್ಲಿ ಶೇ.34ರಷ್ಟು ಮಹಿಳೆಯರು ತಟಸ್ಥರಾಗಿದ್ದು, ಈ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಶೇ.35ರಷ್ಟು ಮಹಿಳೆಯರು ಚುನಾವಣಾ ಆಯೋಗದ ಪ್ರತಿಕ್ರಿಯೆ ತೃಪ್ತಿ ತಂದಿದೆ ಎಂದಿದ್ದಾರೆ. 60 ವರ್ಷ ಮೇಲ್ಪಟ್ಟ ಶೇ.27ರಷ್ಟು ಮಂದಿ ಆಯೋಗದ ಪ್ರತಿಕ್ರಿಯೆ ಸರಿ ಎಂದು ಹೇಳಿದ್ದರೆ, 46-60 ವರ್ಷದೊಳಗಿನ ಶೇ.26ರಷ್ಟು ಮಂದಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:13 am, Mon, 18 August 25