- Kannada News National in 1994 Narendra modi along with former union minister late HN Anantakumar, present union minister G Kishan Reddy and Ponguleti Sudhakar Reddy in the delegation that visited USA on the invitation of ACYPL (American Council of Young Political Leaders), USA
ಅಮೆರಿಕದಲ್ಲಿ ಪ್ರಧಾನಿ ಮೋದಿ 30 ವರ್ಷಗಳ ಹಿಂದೆ ಹೀಗಿದ್ದರು, ಅವರ ಜೊತೆ ಕರ್ನಾಟಕದ ಮಾಜಿ ಕೇಂದ್ರ ಸಚಿವರೊಬ್ಬರು ಇದ್ದರು! ಯಾರವರು ನೋಡಿ!
1994 ರಲ್ಲಿ ಅಮೆರಿಕನ್ ಕೌನ್ಸಿಲ್ ಆಫ್ ಯಂಗ್ ಪೊಲಿಟಿಕಲ್ ಲೀಡರ್ಸ್ (ACYPL -American Council of Young Political Leaders) ಎಂಬ ಲಾಭ ರಹಿತ ಸಂಸ್ಥೆಯೊಂದು ವಿಶ್ವದ ನಾನಾ ರಾಷ್ಟ್ರಗಳ ಯುವ ನಾಯಕರ ಸಭೆಯೊಂದನ್ನು ಆಯೋಜಿಸಿತ್ತು. ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಹಾಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆ ಸುಮಾರು 30 ವರ್ಷಗಳ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Updated on: Jul 14, 2023 | 11:26 AM

ವೈರಲ್ ಫೋಟೋ: 1994 ರಲ್ಲಿ ಅಮೆರಿಕನ್ ಕೌನ್ಸಿಲ್ ಆಫ್ ಯಂಗ್ ಪೊಲಿಟಿಕಲ್ ಲೀಡರ್ಸ್ (ACYPL -American Council of Young Political Leaders) ಎಂಬ ಲಾಭ ರಹಿತ ಸಂಸ್ಥೆಯೊಂದು ವಿಶ್ವದ ನಾನಾ ರಾಷ್ಟ್ರಗಳ ಯುವ ನಾಯಕರ ಸಭೆಯೊಂದನ್ನು ಆಯೋಜಿಸಿತ್ತು. ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಹಾಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆ ಸುಮಾರು 30 ವರ್ಷಗಳ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1994 ರಲ್ಲಿ ಅಮೆರಿಕದ ಯುವ ರಾಜಕೀಯ ನಾಯಕರ ಪರಿಷತ್ತಿನ ಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ, ಮಾಜಿ ಕೇಂದ್ರ ಸಚಿವ ದಿವಂಗತ ಹೆಚ್ ಎನ್ ಅನಂತ್ ಕುಮಾರ್ ಮತ್ತು ಇತರರೊಂದಿಗೆ ಭಾಗವಹಿಸಲು ಅಮೆರಿಕಕ್ಕೆ ಭೇಟಿ ನೀಡಿದ್ದ ದಿನಗಳ ನೆನಪು. 30 ವರ್ಷಗಳ ಹಿಂದೆ ಈ ಫೋಟೋದಲ್ಲಿ ಪ್ರಧಾನಿ ಮೋದಿ ಜೊತೆಗೆ ಇಬ್ಬರು ತೆಲುಗು ನಾಯಕರೂ ಸಹ ಇದ್ದರು.

ಈ ಚಿತ್ರ 1994 ರಲ್ಲಿ ಅಮೇರಿಕಾದಲ್ಲಿ ನರೇಂದ್ರ ಮೋದಿ ತಂಡದಲ್ಲಿ ಹಾಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಮಾಜಿ ಕಾಂಗ್ರೆಸ್ ನಾಯಕ ಮತ್ತು ಈಗ ಬಿಜೆಪಿ ತಮಿಳುನಾಡು ಉಸ್ತುವಾರಿ ನಾಯಕ ಪೊಂಗುಲೇಟಿ ಸುಧಾಕರ್ ರೆಡ್ಡಿ ಇದ್ದಾರೆ.

1994ರಲ್ಲಿ ಅಮೆರಿಕದಲ್ಲಿ ನಡೆದ ರಾಜಕೀಯ ಮುಖಂಡರ ಸಮಾವೇಶಕ್ಕೆ ದೇಶದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತೆರಳಿದ್ದರು. ಬಿಜೆಪಿ ತಂಡದಲ್ಲಿ ನರೇಂದ್ರ ಮೋದಿ, ಕಿಶನ್ ರೆಡ್ಡಿ, ಅನಂತ್ ಕುಮಾರ್ ಇದ್ದರು. ಕಾಂಗ್ರೆಸ್ ನಿಂದ ಪೊಂಗುಲೇಟಿ ಸುಧಾಕರ್ ರೆಡ್ಡಿಗೆ ಅವಕಾಶ ಸಿಕ್ಕಿತ್ತು.

ಅಂದಿನಿಂದ ನರೇಂದ್ರ ಮೋದಿಯವರೊಂದಿಗೆ ಕಿಶನ್ ರೆಡ್ಡಿ ಮತ್ತು ಸುಧಾಕರ್ ರೆಡ್ಡಿ ಸ್ನೇಹ ಆರಂಭಿಸಿದಂತಿದೆ.

ಈ ಮಧ್ಯೆ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ, ಈಗ ದೇಶದ ಪ್ರಧಾನಿಯಾಗಿದ್ದಾರೆ. ಕಿಶನ್ ರೆಡ್ಡಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋಗಳನ್ನು ಪ್ರಸ್ತುತಪಡಿಸಿ, ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.



















