ದೆಹಲಿ ಜನವರಿ 04 : ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪ್ರಕಾರ, 2022-23ರಲ್ಲಿ ಚುನಾವಣಾ ಟ್ರಸ್ಟ್‌ಗಳಿಂದ ರಾಜಕೀಯ ಪಕ್ಷಗಳು ಸ್ವೀಕರಿಸಿದ ದೇಣಿಗೆಯಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಬಿಜೆಪಿ (BJP) ಪಡೆದುಕೊಂಡಿದೆ. ಅದೇ ವೇಳೆ ಭಾರತ್ ರಾಷ್ಟ್ರ ಸಮಿತಿ (BRS) ಸುಮಾರು 25 ಪ್ರತಿಶತದಷ್ಟು ದೇಣಿಗೆಯನ್ನು ಸ್ವೀಕರಿಸಿದೆ ಎಂದು ಎಡಿಆರ್ ಹೇಳಿದೆ. 2022-23ರ ಚುನಾವಣಾ ಟ್ರಸ್ಟ್‌ಗಳ ಕೊಡುಗೆ ವರದಿಗಳ ವಿಶ್ಲೇಷಣೆಯ ಪ್ರಕಾರ, ಚುನಾವಣಾ ಟ್ರಸ್ಟ್‌ಗಳಿಗೆ ₹ 363 ಕೋಟಿಗೂ ಹೆಚ್ಚು ಕೊಡುಗೆ ನೀಡಿರುವ 39 ಕಾರ್ಪೊರೇಟ್ ಮತ್ತು ವ್ಯಾಪಾರ ಸಂಸ್ಥೆಗಳಿವೆ.
ಮೂವತ್ನಾಲ್ಕು ಕಾರ್ಪೊರೇಟ್ ಮತ್ತು ವ್ಯಾಪಾರ ಸಂಸ್ಥೆಗಳು ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ಗೆ ₹ 360 ಕೋಟಿ, ಸಮಾಜ್ ಎಲೆಕ್ಟೋರಲ್ ಟ್ರಸ್ಟ್‌ಗೆ ಒಂದು ಕಂಪನಿ ₹ 2 ಕೋಟಿ, ಪರಿಬರ್ತನ್ ಎಲೆಕ್ಟೋರಲ್ ಟ್ರಸ್ಟ್‌ಗೆ ಎರಡು ಕಂಪನಿಗಳು ₹ 75.50 ಲಕ್ಷ, ಮತ್ತು ಟ್ರಯಂಫ್ ಎಲೆಕ್ಟೋರಲ್ ಟ್ರಸ್ಟ್‌ಗೆ ಎರಡು ಕಂಪನಿಗಳು ₹ 50 ಲಕ್ಷ ಕೊಡುಗೆ ನೀಡಿವೆ ಎಡಿಆರ್ ಹೇಳಿದೆ.
ಎಡಿಆರ್ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಬಿಜೆಪಿಯು ₹ 259.08 ಕೋಟಿ ಅಥವಾ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಟ್ರಸ್ಟ್‌ಗಳಿಂದ ಪಡೆದ ಒಟ್ಟು ದೇಣಿಗೆಯಲ್ಲಿ 70.69 ಪ್ರತಿಶತವನ್ನು ಸ್ವೀಕರಿಸಿದೆ. ಬಿಆರ್ ಎಸ್₹ 90 ಕೋಟಿ ಅಥವಾ ಒಟ್ಟು ದೇಣಿಗೆಯಲ್ಲಿ 24.56 ಪ್ರತಿಶತವನ್ನು ಸ್ವೀಕರಿಸಿದೆ.
ಇತರ ಮೂರು ರಾಜಕೀಯ ಪಕ್ಷಗಳಾದ ವೈಎಸ್ಆರ್ ಕಾಂಗ್ರೆಸ್, ಎಎಪಿ ಮತ್ತು ಕಾಂಗ್ರೆಸ್ ಒಟ್ಟಾರೆಯಾಗಿ ₹ 17.40 ಕೋಟಿ ಪಡೆದಿವೆ ಎಂದು ಎಡಿಆರ್ ಹೇಳಿದೆ.
2021-22ರಲ್ಲಿ ₹ 336.50 ಕೋಟಿಗೆ ಹೋಲಿಸಿದರೆ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಬಿಜೆಪಿಗೆ ₹ 256.25 ಕೋಟಿ ದೇಣಿಗೆ ನೀಡಿದೆ. ಆದರೆ ಸಮಾಜ್ ಇಟಿ ಅಸೋಸಿಯೇಷನ್ 2022-23ರಲ್ಲಿ ಬಿಜೆಪಿಗೆ ತನ್ನ ಒಟ್ಟು ಆದಾಯದ ₹ 1.50 ಕೋಟಿ ದೇಣಿಗೆ ನೀಡಿದೆ ಎಂದು ಎಡಿಆರ್ ವರದಿ ತಿಳಿಸಿದೆ.
ಇದನ್ನೂ ಓದಿ: ನಾನೂ ರಾಮಭಕ್ತ, ನನ್ನನ್ನೂ ಬಂಧಿಸಿ ಸಿದ್ದರಾಮಯ್ಯನವರೇ: ಪ್ರೊಫೈಲ್ ಫೋಟೋ ಬದಲಿಸಿ ಬಿಜೆಪಿ ನಾಯಕರ ಪ್ರತಿಭಟನೆ
ಸಮಾಜ್ ಎಲೆಕ್ಟೋರಲ್ ಟ್ರಸ್ಟ್ ₹ 50 ಲಕ್ಷವನ್ನು ಕಾಂಗ್ರೆಸ್‌ಗೆ ದೇಣಿಗೆ ನೀಡಿದರೆ, ಪ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್ ನಾಲ್ಕು ರಾಜಕೀಯ ಪಕ್ಷಗಳಾದ ಬಿಜೆಪಿ, ಬಿಆರ್‌ಎಸ್, ವೈಎಸ್‌ಆರ್ ಕಾಂಗ್ರೆಸ್ ಮತ್ತು ಎಎಪಿಗೆ ದೇಣಿಗೆ ನೀಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ