ರಾಜಸ್ಥಾನ: ಬನ್ಸ್ವಾರನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ವೇದಿಕೆ ಮೇಲೆ ನಿಂತು ಭಾಷಣ ಮಾಡುವ ವೇಳೆ, ಕಾರ್ಯಕ್ರಮದಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಇದೀಗ ಈ ಬಗ್ಗೆ ಒಂದು ವಿಡಿಯೋ ವೈರಲ್ ಆಗಿದೆ.
ಈ ವ್ಯಕ್ತಿ ವೇದಿಕೆಯಲ್ಲಿ ಮೋದಿ ಭಾಷಣ ಮಾಡುತ್ತಿರುವುದು ಕೇಳಿಸಿಕೊಳ್ಳುವಂತೆ ನಟಿಸಿದ್ದಾನೆ. ಪೆಂಡಾಲ್ ಕೋಲಿನ ಬಳಿ ನಿಂತುಕೊಂಡು ಸ್ವಲ್ಪ ಹೊತ್ತಿನ ನಂತರ ಯಾರಿಗೂ ತಿಳಿಯದಂತೆ ಪೆಂಡಾಲ್ ಕೋಲಿನ ಸ್ಕ್ರೂಗಳನ್ನು ಒಂದೊಂದಾಗಿ ಬಿಚ್ಚುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ನಂತರ ಆ ಸ್ಕ್ರೂಗಳನ್ನು ಪಕ್ಕದವರಿಗೆ ನೀಡುತ್ತಾನೆ. ಆದರೆ ಇದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
Yesterday's video is when PM Modi came to Banaskantha, Now Whose responsibility is there if a major accident occurs??
The pool accident in Morbi is also due to such irresponsible people!!pic.twitter.com/XOmWMQ2WZI
— ADV. ASHUTOSH J. DUBEY ?? (@AdvAshutoshBJP) November 1, 2022
ಈ ಬಗ್ಗೆ ಪೊಲೀಸರು ಆ ವ್ಯಕ್ತಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ವಿಡಿಯೋದಲ್ಲಿ ಈ ವ್ಯಕ್ತಿ ಯಾರು? ವಿಡಿಐಒ ಮಾಡಿರುವವ ಬಗ್ಗೆಯು ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಹೇಳಲಾಗಿದೆ. ಮೊರ್ಬಿ ಸೇತುವೆ ದುರಂತದಲ್ಲೂ ಈ ರೀತಿ ಕೆಲಸ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
Published On - 5:58 pm, Wed, 2 November 22