ದೈನಿಕ್ ಭಾಸ್ಕರ್ ಮಾಧ್ಯಮ ಸಮೂಹದ ವಿವಿಧ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ
Dainik Bhaskar: ದೈನಿಕ್ ಭಾಸ್ಕರ್ ಮಾಧ್ಯಮ ಸಮೂಹದ ಕಚೇರಿಗಳಿರುವ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ ಮತ್ತು ಗುಜರಾತ್‌ನ ಹಲವಾರು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಆದರೆ ಶೋಧಗಳು ನಡೆಯುತ್ತಿವೆ ಎಂದು ತೆರಿಗೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ದೆಹಲಿ: ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ಅನೇಕ ನಗರಗಳಲ್ಲಿ ಮಾಧ್ಯಮ ಸಮೂಹ ದೈನಿಕ್ ಭಾಸ್ಕರ್ ವಿರುದ್ಧ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ ಮತ್ತು ಗುಜರಾತ್‌ನ ಹಲವಾರು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಆದರೆ ಶೋಧಗಳು ನಡೆಯುತ್ತಿವೆ ಎಂದು ತೆರಿಗೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
Income Tax Department raids multiple premises of media group Dainik Bhaskar in Bhopal, Jaipur and other locations: Officials
— Press Trust of India (@PTI_News) July 22, 2021
ಕೊವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಸಾವಿಗೀಡಾದವರ ಮೃತದೇಹವನ್ನು ಗಂಗಾ ನದಿಯ ಉದ್ದಕ್ಕೂ ಎಸೆಯಲಾಗುತ್ತಿದೆ ಎಂಬ ಬಗ್ಗೆ ದೈನಿಕ್ ಭಾಸ್ಕರ್ ಮಾಧ್ಯಮ ಸರಣಿ ವರದಿ ಪ್ರಕಟಿಸಿತ್ತು.
Madhya Pradesh: Visuals from outside the office of Dainik Bhaskar Group in Bhopal
Income Tax Department is conducting searches on Dainik Bhaskar Group in connection with tax evasion case, at multiple locations, as per Sources pic.twitter.com/boH3xLGUUE
— ANI (@ANI) July 22, 2021
ಭೋಪಾಲ್, ಜೈಪುರ, ಅಹಮದಾಬಾದ್ ಮತ್ತು ದೇಶದ ಕೆಲವು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿರುವುದಾಗಿ ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ಕಾಂಗ್ರೆಸ್ ಮುಖಂಡ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ರಾಜ್ಯದ ರಾಜಧಾನಿ ಭೋಪಾಲ್ ನ ಪ್ರೆಸ್ ಕಾಂಪ್ಲೆಕ್ಸ್ ನಲ್ಲಿರುವ ಕಚೇರಿಯನ್ನೂ ಒಳಗೊಂಡಂತೆ ಗುಂಪಿನ ಅರ್ಧ ಡಜನ್ ಆವರಣದಲ್ಲಿ ತೆರಿಗೆ ಅಧಿಕಾರಿಗಳು “ಹಾಜರಾಗಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Farmers Protest ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಸಜ್ಜಾದ ರೈತರು, ದೆಹಲಿಯಲ್ಲಿ ಬಿಗಿ ಭದ್ರತೆ
(Income Tax Department conducted raids against the Media group Dainik Bhaskar over alleged Tax Evasion)