ಸಾವಿನಂಚಿನಲ್ಲಿರುವ ಗಂಡನಿಂದ ಗರ್ಭಿಣಿಯಾಗಬೇಕೆಂದ ಹೆಂಡತಿ; ವೀರ್ಯ ಸಂಗ್ರಹಿಸಲು ಹೈಕೋರ್ಟ್​ ಅನುಮತಿ

Viral News: ನನ್ನ ಗಂಡ ಕೊರೋನಾ ತಗುಲಿ ಸಾಯುವ ಸ್ಥಿತಿಯಲ್ಲಿದ್ದಾರೆ. ಆತನಿಂದ ನನಗೊಂದು ಮಗು ಬೇಕಾಗಿದೆ. ಅದಕ್ಕಾಗಿ ಆತನ ವೀರ್ಯವನ್ನು (Sperm) ಸಂಗ್ರಹಿಸಿಕೊಡಲು ವೈದ್ಯರಿಗೆ ಸೂಚನೆ ನೀಡಿ' ಎಂದು ವಡೋದರದಾದ ಮಹಿಳೆ ಹೈಕೋರ್ಟ್​ ಮುಂದೆ ಬೇಡಿಕೆಯಿಟ್ಟಿದ್ದಾಳೆ.

ಸಾವಿನಂಚಿನಲ್ಲಿರುವ ಗಂಡನಿಂದ ಗರ್ಭಿಣಿಯಾಗಬೇಕೆಂದ ಹೆಂಡತಿ; ವೀರ್ಯ ಸಂಗ್ರಹಿಸಲು ಹೈಕೋರ್ಟ್​ ಅನುಮತಿ
ಪ್ರಾತಿನಿಧಿಕ ಚಿತ್ರ

ಅಹಮದಾಬಾದ್: ಕೋವಿಡ್​ನಿಂದಾಗಿ ಜಗತ್ತಿನ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಜನರ ಜೀವನ ಮೂರಾಬಟ್ಟೆಯಾಗಿದೆ. ಆದರೆ, ಗುಜರಾತ್​ನ ಮಹಿಳೆಯೊಬ್ಬಳು ಈ ಕೋವಿಡ್ ನಡುವೆಯೂ ತನ್ನ ಜೀವನಕ್ಕೆ ಹೊಸ ಬೆಳಕೊಂದನ್ನು ಕಂಡುಕೊಳ್ಳಲು ನಿರ್ಧರಿಸಿದ್ದಾಳೆ. ಕೊರೋನಾ ಸೋಂಕು (Covid-19) ತಗುಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ತನ್ನ ಗಂಡನಿಂದ ಒಂದು ಮಗುವನ್ನು ಪಡೆಯಬೇಕೆಂದು ಆಕೆಗೆ ಆಸೆಯಿತ್ತು. ಇದಕ್ಕಾಗಿ ಏನು ಮಾಡಬೇಕೆಂಬ ಮಾರ್ಗ ಕಾಣದ ಆಕೆ ಹೈಕೋರ್ಟ್​ ಮೆಟ್ಟಿಲೇರಿದ್ದಾಳೆ. ‘ನನ್ನ ಗಂಡ ಕೊರೋನಾ (Coronavirus) ತಗುಲಿ ಬಹಳ ಗಂಭೀರ ಪರಿಸ್ಥಿತಿಯಲ್ಲಿದ್ದಾನೆ. ಆತನಿಂದ ನನಗೊಂದು ಮಗು ಬೇಕಾಗಿದೆ. ಅದಕ್ಕಾಗಿ ಆತನ ವೀರ್ಯವನ್ನು (Sperm) ಸಂಗ್ರಹಿಸಿಕೊಡಲು ವೈದ್ಯರಿಗೆ ಸೂಚನೆ ನೀಡಿ’ ಎಂಬ ವಿಚಿತ್ರವಾದ ಬೇಡಿಕೆಯಿಟ್ಟಿದ್ದಾಳೆ. ಇದೇ ಮೊದಲ ಬಾರಿಗೆ ಈ ರೀತಿಯ ಪ್ರಕರಣವೊಂದು ವಿಚಾರಣೆಗೆ ಬಂದಿದ್ದಕ್ಕೆ ನ್ಯಾಯಮೂರ್ತಿಗಳೂ ಶಾಕ್ ಆಗಿದ್ದಾರೆ.

ಅಚ್ಚರಿಯಾದರೂ ಇದು ಸತ್ಯ. ಗುಜರಾತ್ ರಾಜ್ಯದ ವಡೋದರಾದ ಮಹಿಳೆಯೊಬ್ಬಳು ಸಾವಿನಂಚಿನಲ್ಲಿರುವ ತನ್ನ ಪ್ರೀತಿಯ ಗಂಡನಿಂದ ಗರ್ಭಿಣಿಯಾಗಲು ಬಯಸಿದ್ದಾಳೆ. ಆಕೆಯ ಗಂಡನಿಗೆ ಕೊರೋನಾ ಸೋಂಕು ತಗುಲಿ, ಬಹು ಅಂಗಾಂಗ ವೈಫಲ್ಯದಿಂದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಡ ಈಗಿರುವ ಪರಿಸ್ಥಿತಿಯಲ್ಲಿ ಆತ ಬದುಕುಳಿಯುವ ಸಾಧ್ಯತೆಗಳು ಕಡಿಮೆ ಇರುವ ಕಾರಣದಿಂದ ಆತನ ವೀರ್ಯವನ್ನು (Sperm) ಸಂಗ್ರಹಿಸಿ ಕೊಟ್ಟರೆ ಕೃತಕ ಗರ್ಭಧಾರಣೆಯ  (IVF) ಮೂಲಕ ಮಗುವನ್ನು ಹೆರುವುದಾಗಿ ವೈದ್ಯರಲ್ಲಿ ಮನವಿ ಮಾಡಿದ್ದಳು. ಆದರೆ, ಇದು ಕಾನೂನುಬಾಹಿರವೆಂದು ವೈದ್ಯರು ಒಪ್ಪಿಗೆ ನೀಡಿರಲಿಲ್ಲ.

ಹೀಗಾಗಿ, ಕಾನೂನುಪ್ರಕಾರವೇ ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ ಆಕೆ ಗುಜರಾತ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಳು. ನಮಗೆ ಮದುವೆಯಾಗಿ ಹೆಚ್ಚು ಸಮಯವಾಗಿಲ್ಲ. ನನ್ನ ಗಂಡ ಸತ್ತುಹೋದರೆ ನನಗೆ ಬೇರೆಯವರನ್ನು ಮದುವೆಯಾಗಲು ಇಷ್ಟವಿಲ್ಲ. ಕೊರೋನಾ ಸೋಂಕು ತಗುಲಿ ಗಂಭೀರ ಸ್ಥಿತಿಯಲ್ಲಿರುವ ಗಂಡನಿಂದ ವೀರ್ಯವನ್ನಾದರೂ ಸಂಗ್ರಹಿಸಿಕೊಟ್ಟರೆ ಕೃತಕ ಗರ್ಭಧಾರಣೆಯ ಮೂಲಕ ನನ್ನ ಗಂಡನ ಮಗುವಿಗೆ ತಾಯಿಯಾಗುತ್ತೇನೆ. ಇಲ್ಲವಾದರೆ ಜೀವನಪೂರ್ತಿ ಏಕಾಂಗಿಯಾಗಿಯೇ ಬದುಕಬೇಕಾಗುತ್ತದೆ ಎಂದು ಆಕೆ ನ್ಯಾಯಮೂರ್ತಿಗಳೆದುರು ತನ್ನ ಅಸಹಾಯಕತೆ ಮತ್ತು ಬಯಕೆಯನ್ನು ಹೇಳಿಕೊಂಡಿದ್ದಾಳೆ.

ಆಕೆಯ ಮಾತನ್ನು ಕೇಳಿದ ನ್ಯಾಯಮೂರ್ತಿಗಳು ಇದನ್ನು ತುರ್ತು ಮತ್ತು ವಿಶೇಷ ಪ್ರಕರಣವೆಂದು ಪರಿಗಣಿಸಿ, ಆಕೆಯ ಗಂಡನ ವೀರ್ಯವನ್ನು ಸಂಗ್ರಹಿಸಿಡುವಂತೆ ಆಸ್ಪತ್ರೆಯ ವೈದ್ಯರಿಗೆ ಆದೇಶ ನೀಡಿದ್ದಾರೆ. ಹೈಕೋರ್ಟ್​ನ ಆದೇಶದಂತೆ ವೈದ್ಯರು ಆ ರೋಗಿಯ ವೀರ್ಯವನ್ನು ಸಂಗ್ರಹಿಸಿಟ್ಟಿದ್ದಾರೆ. ಕೋರ್ಟ್​ನಿಂದ ಆದೇಶ ಬಂದ ಒಂದೇ ಗಂಟೆಯೊಳಗೆ ಕೋವಿಡ್ ರೋಗಿಯ ವೀರ್ಯವನ್ನು ಸಂಗ್ರಹಿಸಿಡಲಾಗಿದೆ.

ಆದರೆ, ಕೃತಕ ಗರ್ಭಧಾರಣೆ ಮೂಲಕ ಆ ಮಹಿಳೆ ಗರ್ಭ ಧರಿಸುವ ವಿಚಾರದಲ್ಲಿ ಕೋರ್ಟ್​ ಇನ್ನೂ ಯಾವುದೇ ಆದೇಶ ನೀಡಿಲ್ಲ. ಹೀಗಾಗಿ, ಆ ವೀರ್ಯವನ್ನು ಆಸ್ಪತ್ರೆಯವರು ಇನ್ನೂ ರೋಗಿಯ ಹೆಂಡತಿಗೆ ನೀಡಿಲ್ಲ. ಕೋವಿಡ್ ಪೀಡಿತ ವ್ಯಕ್ತಿಯ ಪೋಷಕರು ಕೂಡ ತಮ್ಮ ಸೊಸೆಯ ಈ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ. ಈ ಪ್ರಕರಣದಲ್ಲಿ ನಾಳೆ ಅಂದರೆ ಜುಲೈ 23ರಂದು ಮತ್ತೆ ಹೈಕೋರ್ಟ್​ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

ನನಗೆ ಎ.ಆರ್ ರೆಹಮಾನ್ ಯಾರೆಂದೇ ಗೊತ್ತಿಲ್ಲ, ಭಾರತರತ್ನ ಪ್ರಶಸ್ತಿ ನನ್ನಪ್ಪನ ಉಗುರಿಗೆ ಸಮ; ವಿವಾದಕ್ಕೀಡಾದ ಖ್ಯಾತ ನಟ

(Sperm Of Critical Covid Patient Collected by Doctor After Gujarat High Court Grants Wife Plea over Pregnancy)

Click on your DTH Provider to Add TV9 Kannada