ದೆಹಲಿ: ಕೊರೊನಾ ಕಷ್ಟ ಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ತುಂಬಾನೇ ದುಬಾರಿಯಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನಕ್ಕೆ ಅದು ಗಗನಕುಸುಮ ಆಗಿಬಿಟ್ಟಿದೆ. ಈ ಸಂದರ್ಭದಲ್ಲಿ ಹಣಕಾಸು ವ್ಯವಹಾರವೂ ಕಷ್ಟಕಷ್ಟವಾಗಿದೆ. ಈಗಿರುವ ಆದಾಯ ತೆರಿಗೆ ಕಾನೂನು ಪ್ರಕಾರ 2 ಲಕ್ಷಕ್ಕಿಂತ ಹೆಚ್ಚಿನ ನಗದು ವರ್ಗಾವಣೆಗೆ ಕಡಿವಾಣವಿದೆ. 2 ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತ ವರ್ಗಾಯಿಸಲು ಸಕಲ ತೆರಿಗೆ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಸರಿಯಾಗಿ ಇದೇ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಮಧ್ಯೆ ಪ್ರವೇಶಿಸಿದ್ದು, ಹಣ ವರ್ಗಾವಣೆಗೆ ತೆರಿಗೆ ರಿಯಾಯಿತಿ ತರಬಹುದಾ ನೋಡಿ ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸೂಚಿಸಿತ್ತು. ಕೋರ್ಟ್ ಸೂಚನೆಯ ಮೇರೆಗೆ ಕೋವಿಡ್ ರೋಗಿಗಳಿಗೆ ಮಾತ್ರ ಅನ್ವಯವಾಗುವಂತೆ ಹಣ ವರ್ಗಾವಣೆಯಲ್ಲಿ ರಿಯಾಯ್ತಿ ನೀಡಿದೆ. ಈ ಬಗ್ಗೆ ನೇರ ತೆರಿಗೆಗಳ ಕೇಂದ್ರೀ ಮಂಡಳಿಯು (Central Board of Direct Taxes) ಶುಕ್ರವಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ, ಚಿಕತ್ಸಾಲಯ, ನರ್ಸಿಂಗ್ ಹೋಂ, ಕೋವಿಡ್ ಕೇರ್ ಸೆಂಟರ್ ಅಥವಾ ಅಂತಹುದೇ ಮತ್ಯಾವ ವ್ಯವಸ್ಥೆಯೇ ಆಗಲಿ ರೋಗಿಗಳಿಂದ ಪಡೆಯುವ 2 ಲಕ್ಷಕ್ಕಿಂತ ಹೆಚ್ಚಿನ ಹಣಕ್ಕೆ ತೆರಿಗೆ ನೀತಿಯಲ್ಲಿ ರಿಯಾಯ್ತಿ ತಂದಿದೆ. Section 269 ST of the Income Tax Act,1961 ಅನುಸಾರ ರಿಯಾಯ್ತಿ ತಂದಿದೆ. ಆದರೆ ಇದು 2021 ಏಪ್ರಿಲ್ 1 ರಿಂದ ಮೇ 31ರವರೆಗಿನ ಹಣ ವರ್ಗಾವಣೆಗೆ ಮಾತ್ರ ಅನ್ವಯವಾಗುತ್ತದೆ. ಈ ಸಂದರ್ಭದಲ್ಲಿ ನಡೆಯುವ ಹಣಕಾಸು ವರ್ಗಾವಣೆಗಾಗಿ ಪಾವತಿದಾರರ PAN ಅಥವಾ AADHAAR ಸಂಖ್ಯೆಯನ್ನು ತಪ್ಪದೆ ದಾಖಲಿಸಿಕೊಳ್ಳಬೇಕು ಎಂದೂ ಆದೇಶಿಸಿದೆ. ಇದರಿಂದ ಕೋವಿಡ್ ರೋಗಿಗಳಿಗೆ ಸ್ವಲ್ಪಮಟ್ಟಿಗೆ ತೆರಿಗೆ ಗಜಿಬಿಜಿ ತಪ್ಪಿದ್ದರೆ ಆಸ್ಪತ್ರೆಗಳು ಸಹ ಸುಗಮ ವ್ಯವಹಾರ ನಿಟ್ಟಿನಲ್ಲಿ ನಿರಾಳಗೊಂಡಿವೆ.
ಈ ಬಗ್ಗೆ ಸ್ವತಃ ಆದಾಯ ತೆರಿಗೆ ಇಲಾಖೆಯೂ ಟ್ವೀಟ್ ಮಾಡಿ, ಮಾಹಿತಿ ನೀಡಿದೆ:
Granting further relief in view of severe Covid pandemic, provisions of section 269ST of Income-tax Act,1961 relaxed by the Central Govt. Allows Hospitals/Medical facilities etc providing Covid treatment to patients to receive cash payments of Rs. 2 lakh or more, adding, Relaxation granted for the period 01.04.2021 to 31.05.2021, after obtaining PAN or AADHAAR of patient & the payer.
(Income tax provisions relaxed Allows Hospitals providing Covid treatment to patients to receive cash payments of Rs 2 lakh or more)
ಕೇಂದ್ರ ಸರ್ಕಾರಕ್ಕೆ ಮುಖಭಂಗ; ಆಕ್ಸಿಜನ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ
Published On - 10:30 am, Sat, 8 May 21