ಕೊರೊನಾ ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಮ್ಮೆ ಸಾಧನೆ; ಸೋಮವಾರವೂ 1 ಕೋಟಿ ಡೋಸ್ ಲಸಿಕೆ ನೀಡಿಕೆ

| Updated By: ganapathi bhat

Updated on: Sep 27, 2021 | 10:59 PM

Corona Vaccine: ಕರ್ನಾಟಕದಲ್ಲಿ ಈವರೆಗೆ ಒಟ್ಟು 5,46,20,334 ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಅದರಲ್ಲಿ 3,85,31,913 ಮೊದಲ ಡೋಸ್ ಕೊರೊನಾ ಲಸಿಕೆ ಹಾಗೂ 1,60,88,421 ಎರಡನೇ ಡೋಸ್ ಕೊರೊನಾ ಲಸಿಕೆ ನೀಡಿಕೆ ಆಗಿದೆ.

ಕೊರೊನಾ ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಮ್ಮೆ ಸಾಧನೆ; ಸೋಮವಾರವೂ 1 ಕೋಟಿ ಡೋಸ್ ಲಸಿಕೆ ನೀಡಿಕೆ
ಸಾಂಕೇತಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಇಂದು (ಸೆಪ್ಟೆಂಬರ್ 27) ಒಂದೇ ದಿನ ಒಂದು ಕೋಟಿಗೂ ಹೆಚ್ಚು ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಇಂದು ಈ ಸುದ್ದಿ ಪ್ರಕಟ ಆಗುವ ವೇಳೆಗೆ 1,01,01,318 ಲಸಿಕೆ ನೀಡಲಾಗಿದೆ. ಕೊರೊನಾ ವಿರುದ್ಧ ಬೃಹತ್ ಲಸಿಕಾ ಅಭಿಯಾನವನ್ನು ಭಾರತ ನಡೆಸುತ್ತಿದೆ. ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಯ ಮೂಲಕ ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನವನ್ನು ಭಾರತ ಮುನ್ನಡೆಸುತ್ತಿದೆ. ದೇಶದ ಕೋಟ್ಯಾಂತರ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಇಂದು ಮತ್ತೊಂದು ಮೈಲುಗಲ್ಲು ಸೃಷ್ಟಿಯಾಗಿದೆ. ಇಂದು 1 ಕೋಟಿಗೂ ಅಧಿಕ ಕೊರೊನಾ ಲಸಿಕೆ ನೀಡಿಕೆ ಆಗುವ ಮೂಲಕ ದೇಶದಲ್ಲಿ ಕೊವಿಡ್19 ವಿರುದ್ಧ ಒಟ್ಟು ಸುಮಾರು 86 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಒಟ್ಟಾರೆ ಈ ಸುದ್ದಿ ಪ್ರಕಟ ಆಗುವ ವೇಳೆಗೆ 86,01,59,011 ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಇಂದು 33 ಲಕ್ಷ ಡೋಸ್​ ಲಸಿಕೆ ನೀಡಿಕೆ ಆಗಿದೆ. ನಿನ್ನೆ ಭಾರತದಲ್ಲಿ 38,18,362 ಡೋಸ್ ಕೊರೊನಾ ಲಸಿಕೆ ನೀಡಲಾಗಿತ್ತು. ಕರ್ನಾಟಕದಲ್ಲಿ ಈವರೆಗೆ ಒಟ್ಟು 5,46,20,334 ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಅದರಲ್ಲಿ 3,85,31,913 ಮೊದಲ ಡೋಸ್ ಕೊರೊನಾ ಲಸಿಕೆ ಹಾಗೂ 1,60,88,421 ಎರಡನೇ ಡೋಸ್ ಕೊರೊನಾ ಲಸಿಕೆ ನೀಡಿಕೆ ಆಗಿದೆ.

ಕರ್ನಾಟಕ ಕೊರೊನಾ ಪ್ರಕರಣಗಳು
ಕರ್ನಾಟಕ ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 27) ಹೊಸದಾಗಿ 504 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,73,899 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,23,320 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 20 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,746 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 12,804 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 181 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,45,671 ಕ್ಕೆ ಏರಿಕೆಯಾಗಿದೆ. 12,45,671 ಸೋಂಕಿತರ ಪೈಕಿ 12,22,139 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 5 ಮಂದಿ ಸಾವನ್ನಪ್ಪಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,137 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 7,394 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ
ಬಾಗಲಕೋಟೆ 0, ಬಳ್ಳಾರಿ 3, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 14, ಬೆಂಗಳೂರು ನಗರ 181, ಬೀದರ್ 1, ಚಾಮರಾಜನಗರ 4, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 19, ಚಿತ್ರದುರ್ಗ 7, ದಕ್ಷಿಣ ಕನ್ನಡ 83, ದಾವಣಗೆರೆ 2, ಧಾರವಾಡ 0, ಗದಗ 0, ಹಾಸನ 18, ಹಾವೇರಿ 0, ಕಲಬುರಗಿ 1, ಕೊಡಗು 26, ಕೋಲಾರ 11, ಕೊಪ್ಪಳ 0, ಮಂಡ್ಯ 8, ಮೈಸೂರು 47, ರಾಯಚೂರು 1, ರಾಮನಗರ 0, ಶಿವಮೊಗ್ಗ 18, ತುಮಕೂರು 20, ಉಡುಪಿ 24, ಉತ್ತರ ಕನ್ನಡ 12, ವಿಜಯಪುರ 0, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: Bengaluru Night Curfew: ಅಕ್ಟೋಬರ್ 11ವರೆಗೂ ನೈಟ್ ಕರ್ಫ್ಯೂ ಮುಂದುವರಿಕೆ: ಕಮಲ್ ಪಂತ್ ಆದೇಶ

ಇದನ್ನೂ ಓದಿ: Mysore Dasara 2021: ಕೊರೊನಾದಿಂದ ಜಟ್ಟಿ‌ ಕಾಳಗಕ್ಕೆ ಬ್ರೇಕ್: ಅರಮನೆಯ ಪಾರಂಪರಿಕ ದಸರಾ ಕಾರ್ಯಕ್ರಮ ಲಿಸ್ಟ್​ ಇಲ್ಲಿದೆ

Published On - 10:57 pm, Mon, 27 September 21