ದೆಹಲಿ: ಡಿಸೆಂಬರ್ 9ರಂದು ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಯ ಬಗ್ಗೆ ಸರ್ಕಾರ ಖಚಿತಪಡಿಸಿದ ನಂತರ, ಇದೀಗ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಬಗ್ಗೆ ಒಂದು ವಿಡಿಯೊ ವೈರಲ್ ಆಗುತ್ತಿದೆ. ಯಾವುದೇ ದಿನಾಂಕವನ್ನು ವ್ಯಕ್ತಪಡಿಸದೆ ಒಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅರುಣಾಚಲ ಪ್ರದೇಶದ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತ ಮತ್ತು ಚೀನಾ ಸೈನಿಕರು ಭೀಕರ ಕಾಳಗ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ತೋರಿಸದಲಾಗಿದೆ. ಆದರೆ ಈ ವಿಡಿಯೊ ಡಿಸೆಂಬರ್ 9ರ ಘಟನೆಗೆ ಸಂಬಂಧಿಸಿದ್ದು ಎಂಬುದನ್ನು ಸೇನೆ ನಿರಾಕರಿಸಿದೆ.
ಇದನ್ನು ಓದಿ:India-China Border Clash: ಅರುಣಾಚಲ ಪ್ರದೇಶದಲ್ಲಿ ಯುದ್ಧ ವಿಮಾನ ಗಸ್ತು ನಡೆಸುತ್ತಿರುವ ಭಾರತೀಯ ವಾಯುಪಡೆ
ಜೂನ್ 2020ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಂತರ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ, ದೇಶಕ್ಕಾಗಿ 20 ಭಾರತೀಯ ಸೈನಿಕರು ಸಾವನ್ನಪ್ಪಿದರು ಮತ್ತು 40 ಕ್ಕೂ ಹೆಚ್ಚು ಚೀನೀ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು.
Video running around.. don’t know when this was shot but feast to watch!! pic.twitter.com/zLJcpkdwe7
— Chakravarty Sulibele (@astitvam) December 13, 2022
ಚೀನಾ ಸೈನಿಕರು ಭಾರತದ ಗಡಿ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ನಡೆಸಿದ ಸಂಘಟಿತ ಪ್ರಯತ್ನವನ್ನು ಈ ವೀಡಿಯೊದಲ್ಲಿ ತೋರಿಸುತ್ತದೆ. ಭಾರತದ ಗಡಿಯನ್ನು ದಾಟಲು ಬರುತ್ತಿರುವ ಚೀನಾ ಸೈನಿಕರು ಭಾರತೀಯ ಸೈನಿಕರನ್ನು ಥಳಿಸಿದ್ದಾರೆ.ಈ ಕಾರಣಕ್ಕೆ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಲಾಠಿಗಳಿಂದ ಹೊಡೆಯುವುದನ್ನು ಈ ವಿಡಿಯೊದಲ್ಲಿ ನೋಡಬಹುದು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Wed, 14 December 22