AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದ ಸನ್ವರ್ ಅಲಿ ಎಲ್ಲಾ ಅಡೆತಡೆಗಳನ್ನು ಹಿಂದಟ್ಟಿ ಇಂಡೋನೇಷ್ಯಾದ ಜನ್ನಾಹ್ ಳನ್ನು ಮದುವೆಯಾದ!

ಭಾರತದ ದಕ್ಷಿಣ ಭಾಗ 2017 ರಲ್ಲಿ ಸೈಕ್ಲೋನ್ ನಿಂದ ತತ್ತರಿಸಿದಾಗ ಜನ್ನಾಹ್ ಗೆ ಅಲಿ ಮತ್ತು ಅವನ ಕುಟುಂಬದ ಸುರಕ್ಷತೆ ಬಹಳ ಚಿಂತೆಯಾಗಿತ್ತು. ಆಗಲೇ ಅವರಿಬ್ಬರಿಗೆ ತಮ್ಮ ನಡುವೆ ಪ್ರೀತಿ ಅಂಕುರಿಸಿದ್ದು ಗೊತ್ತಾಗಿದ್ದು

ಉತ್ತರ ಪ್ರದೇಶದ ಸನ್ವರ್ ಅಲಿ ಎಲ್ಲಾ ಅಡೆತಡೆಗಳನ್ನು ಹಿಂದಟ್ಟಿ ಇಂಡೋನೇಷ್ಯಾದ ಜನ್ನಾಹ್ ಳನ್ನು ಮದುವೆಯಾದ!
ಸನ್ವರ್ ಅಲಿ ಮತ್ತು ಮಿಫ್ತಾಹುಲ್ ಜನ್ನಾಹ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Dec 14, 2022 | 1:16 PM

ಮದುವೆಗಳು ಸ್ವರ್ಗದಲ್ಲೇ ನಿಶ್ಚಯಿಸಲ್ಪಡುತ್ತವಂತೆ! ಒಂದು ಗಂಡು ಮತ್ತು ಹೆಣ್ಣಿನ ನಡುವಿನ ಪ್ರೀತಿ (love) ಮತ್ತು ಮದುವೆಗೆ ಭಾಷೆ, ಮೂಲ, ಧರ್ಮ, ಆಸ್ತಿ-ಅಂತಸ್ತು, ಜನಾಂಗ, ವರ್ಣ-ಯಾವತ್ತೂ ಅಡ್ಡಿಯಾಗಲಾರವು. ಅಡ್ಡಿಯಾದ ಸಂದರ್ಭಗಳನ್ನೂ ನಾವು ನೋಡುತ್ತಿರುತ್ತೇವೆ ಆದರೆ ಇಲ್ಲಿ ಆ ವಿಷಯ ಪ್ರಸ್ತುತವಲ್ಲ. ನಾವು ಹೇಳುತ್ತಿರುವುದು ಉತ್ತರ ಪ್ರದೇಶದ ಸನ್ವರ್ ಅಲಿ (Sanwar Ali) ಮತ್ತು ಇಂಡೋನೇಷ್ಯಾದ ಮಿಫ್ತಾಹುಲ್ ಜನ್ನಾಹ್ (Miftahul Jannah) ಅವರ ಪ್ರೇಮ್ ಕಹಾನಿ. ಆವರಿಬ್ಬರ ಪ್ರೀತಿ ಎಲ್ಲ ಅಡೆತಡೆಗಳನ್ನು ಮೀರಿದ್ದು ಮತ್ತು ಅವರ ನಡುವೆ ಅಡ್ಡಗೋಡೆಯಾಗಬಹದಾಗಿದ್ದ ಪರಸ್ಪರ ಅಪರಚಿತ ಭಾಷೆ ಒಂದು ಸೇತುವೆಯಾಗಿ ಕೆಲಸ ಮಾಡಿದೆ. ಉತ್ತರ ಪ್ರದೇಶ ದೇರಿಯ ಜಿಲ್ಲೆಯ ನಿವಾಸಿಯಾಗಿರುವ ಸನ್ವರ್ ಅಲಿ 2015ರಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಯಲು ತನ್ನ ಹೆಸರನ್ನು ಎನ್ರೋಲ್ ಮಾಡಿಸಿದಾಗ ಜನ್ನಾಹ್ ಜೊತೆ ಅವನ ಲವ್ ಸ್ಟೋರಿ ಆರಂಭವಾಯಿತು. ಆಗಲೇ ಜನ್ನಾಹ್, ಅವನಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಳು. ಅವರಿಬ್ಬರ ನಡುವೆ ಸ್ನೇಹ ಚಿಗುರುವುದು ತಡವಾಗಲಿಲ್ಲ.

ಪದವೀಧರೆಯಾಗಿರುವ ಜನ್ನಾಹ್ ಒಂದು ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಾ ತನ್ನ ತಾಯಿ ಮತ್ತು ಇಬ್ಬರು ಸಹೋದರಿಯರೊಂದಿಗೆ ವಾಸವಾಗಿದ್ದಳು.

ಇದನ್ನೂ ಓದಿ: Satellite Spectrum Auction: ಶೀಘ್ರ ಉಪಗ್ರಹ ತರಂಗಗುಚ್ಛ ಹರಾಜು; ಮೊದಲ ದೇಶವಾಗಲಿದೆ ಭಾರತ

ಭಾರತದ ದಕ್ಷಿಣ ಭಾಗ 2017 ರಲ್ಲಿ ಸೈಕ್ಲೋನ್ ನಿಂದ ತತ್ತರಿಸಿದಾಗ ಜನ್ನಾಹ್ ಗೆ ಅಲಿ ಮತ್ತು ಅವನ ಕುಟುಂಬದ ಸುರಕ್ಷತೆ ಬಹಳ ಚಿಂತೆಯಾಗಿತ್ತು. ಆಗಲೇ ಅವರಿಬ್ಬರಿಗೆ ತಮ್ಮ ನಡುವೆ ಪ್ರೀತಿ ಅಂಕುರಿಸಿದ್ದು ಗೊತ್ತಾಗಿದ್ದು. ಅಲಿ ಅವಳಿಗೆ ತನ್ನ ಭಾವನೆಗಳನ್ನು ಹೇಳಿಕೊಂಡಾಗ ಅವಳು ಕೂಡಲೇ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ. ಆರು ತಿಂಗಳು ಸಮಯ ತೆಗೆದುಕೊಂಡು ಕೊನೆಗೆ ಯೆಸ್ ಅಂದುಬಿಟ್ಟಳು!

ಹಿಂದಿ ಸುದ್ದಿವಾಹಿನಿ ಆಜ್ ತಕ್ ವರದಿಯ ಪ್ರಕಾರ ಅಲಿ 2018ರಲ್ಲಿ ಮೊಟ್ಟಮೊದಲ ಬಾರಿಗೆ ಇಂಡೋನೇಷ್ಯಾಗೆ ಹೋಗಿ ಜನ್ನಾಹ್ ಳನ್ನು ಭೇಟಿಯಾದ. ಅದಾದ ಬಳಿಕ ಅವರಿಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದರು.

ಅಲಿ ಮತ್ತು ಜನ್ನಾಹ್ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿರುವುದರಿಂದ ಅವರ ಕುಟುಂಬಗಳು ಮದುವೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಅಲಿ ಭಾರತಕ್ಕೆ ವಾಪಸ್ಸಾಗಿ ತನ್ನ ಕುಟುಂಬ ಸದಸ್ಯರು ಮತ್ತು ಬಳಗದವರಿಗೆ ವಿಷಯ ತಿಳಿಸಿದ.

ಅಲಿ 2019ರಲ್ಲಿ ಪುನಃ ಇಂಡೋನೇಷ್ಯಾಗೆ ತೆರಳಿ ಜನ್ನಾಹ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ. ಆದಷ್ಟು ಬೇಗ ಮದುವೆಯಾಗುವ ನಿರ್ಧಾರ ಅವರು ಮಾಡಿಕೊಂಡಿದ್ದ ಅವರಿಗೆ ಕೋವಿಡ್-19 ಖಳನಾಯಕನಂತೆ ಎದುರಾಯಿತು.

ಇದನ್ನೂ ಓದಿ:  ಶಿರಾಳಕೊಪ್ಪ: ಸುಂದರಿಯ ಬೆನ್ನುಬಿದ್ದು ಮದುವೆಯಾಗಿದ್ದ ಆತ, ಆದರೆ ಕೆಲವೇ ತಿಂಗಳಿಗೆ ಪ್ರೀತಿ ಕಮ್ಮಿಯಾಯ್ತು, ಮುಂದೆ ನಡೆಯಿತು ದುರಂತ

ಪ್ರೀತಿಯಲ್ಲಿ ಮುಳುಗಿದ್ದ ಅಲಿ ಮತ್ತು ಜನ್ನಾಹ್ ಗೆ ಕೋವಿಡ್ ಪೀಡೆ ತೊಲಗುವವರೆಗೆ ಕಾಯುವುದು ಸಮಸ್ಯೆಯೆನಿಸಲಿಲ್ಲ. ಅವರಿಬ್ಬರ ಪ್ರೀತಿ ಅಂತಿಮವಾಗಿ ಸುಖಾಂತ್ಯ ಕಂಡು ಈ ವರ್ಷ ಅಕ್ಟೋಬರ್ 29 ರಂದು ಮದುವೆಯಾದರು.

ಅಲಿಯ ಪೂರ್ವಿಕರು ವಾಸವಾಗಿದ್ದ ದೇರಿಯಾನಲ್ಲಿ ದಂಪತಿ ಕಳೆದ ವಾರ ರೆಸೆಪ್ಷನ್ ಆಯೋಜಿಸಿದ್ದರು. ಪ್ರೀತಿ ನಿಜವಾಗಿದ್ದರೆ ಅದು ಎಲ್ಲ ಅಡಚಣೆಗಳನ್ನು ದಾಟಬಲ್ಲದು ಅನ್ನೋದನ್ನು ಅಲಿ ಮತ್ತು ಜನ್ನಾಹ್ ಲವ್ ಸ್ಟೋರಿ ಸಾಬೀತು ಮಾಡಿದೆ.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Wed, 14 December 22

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ