Ravi Kishan on Population: ನಾನು ನಾಲ್ಕು ಮಕ್ಕಳನ್ನು ಹೊಂದಿರುವುದಕ್ಕೆ ಕಾಂಗ್ರೆಸ್ ಕಾರಣ: ಬಿಜೆಪಿ ಸಂಸದ ರವಿ ಕಿಶನ್ ನೀಡಿದ ವಿವರಣೆ, ಕಾರಣ ಇಲ್ಲಿದೆ

Population Control Bill: ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ವಿರೋಧ ಪಕ್ಷ ಕಾಂಗ್ರೆಸ್​ ಮತ್ತು ಸಮಾಜದ ಕೆಲವು ಸಮುದಾಯದವರು ಮುಕ್ತವಾಗಿ ಸ್ವೀಕರಿಸಿಲ್ಲ. ಏಕೆಂದರೆ ಸರ್ಕಾರದ ಈ ಜನಸಂಖ್ಯೆ ನಿಯಂತ್ರಣ ನಿಯಮಗಳು ತಮ್ಮನ್ನು ಗುರಿಯಾಗಿಸಿಕೊಳ್ಳುತ್ತವೆ ಎಂಬುದು ಅವರ ಆತಂಕಕ್ಕೆ ಕಾರಣವಾಗಿದೆ.

Ravi Kishan on Population: ನಾನು ನಾಲ್ಕು ಮಕ್ಕಳನ್ನು ಹೊಂದಿರುವುದಕ್ಕೆ ಕಾಂಗ್ರೆಸ್ ಕಾರಣ: ಬಿಜೆಪಿ ಸಂಸದ ರವಿ ಕಿಶನ್ ನೀಡಿದ ವಿವರಣೆ, ಕಾರಣ ಇಲ್ಲಿದೆ
ನಾನು ನಾಲ್ಕು ಮಕ್ಕಳನ್ನು ಹೊಂದಿರುವುದಕ್ಕೆ ಕಾಂಗ್ರೆಸ್ ಕಾರಣ: ಬಿಜೆಪಿ ಸಂಸದ ರವಿ ಕಿಶನ್
Follow us
| Updated By: ಸಾಧು ಶ್ರೀನಾಥ್​

Updated on:Dec 14, 2022 | 11:57 AM

ಬಿಜೆಪಿ ಲೋಕಸಭಾ ಸದಸ್ಯ ರವಿ ಕಿಶನ್ (BJP MP Ravi Kishan) ಅವರು ತಮ್ಮ ಪತ್ನಿ ಪ್ರೀತಿ ಜೊತೆಗೂಡಿ ತನಗೆ ನಾಲ್ಕು ಮಕ್ಕಳು (children) -ಒಬ್ಬ ಮಗ ಮತ್ತು ಮೂವರು ಹೆಣ್ಣುಮಕ್ಕಳು ಇದ್ದಾರೆ. ಹೀಗೆ ನಾಲ್ಕು ಮಕ್ಕಳನ್ನು ಹೊಂದಿರುವುದಕ್ಕೆ ವಿರೋಧ ಪಕ್ಷ ಕಾಂಗ್ರೆಸ್ (congress) ಕಾರಣ ಎಂದು ಇತ್ತೀಚೆಗೆ ಹೇಳಿದ್ದಾರೆ. ಇದೀಗ ತಮ್ಮ ಈ ಆರೋಪಕ್ಕೆ ಕಾರಣಗಳೇನು ಎಂಬುದನ್ನು ಅವರು ವಿವರಿಸಿದ್ದಾರೆ. ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯ (Population Control Bill) ಮಹತ್ವ ಮತ್ತು ಅಗತ್ಯವನ್ನು ಒತ್ತಿ ಹೇಳುತ್ತಾ ಅವರು ಈ ಮಾತನ್ನು ಹೇಳಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಕಾಂಗ್ರೆಸ್ ಸರಕಾರ ಜನಸಂಖ್ಯಾ ನಿಯಂತ್ರಣ ಮಸೂದೆ ಅಂದೇ ತಂದಿದ್ದರೆ ನನಗೆ …

ಬಿಜೆಪಿ ಲೋಕಸಭಾ ಸದಸ್ಯರಾಗಿರುವ ರವಿ ಕಿಶನ್ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಹಿಂದಿನ ಸರಕಾರಗಳು ಜನಸಂಖ್ಯಾ ನಿಯಂತ್ರಣ ಮಸೂದೆ ತಂದಿದ್ದರೆ ವೈವಾಹಿಕ ಜೀವನದಲ್ಲಿ ನಾಲ್ವರು ಮಕ್ಕಳಾಗದೇ ಇರಬಹುದಾಗಿತ್ತು ಎಂದಿದ್ದಾರೆ. ಆಜ್ ತಕ್ ಕಾನ್​ಕ್ಲೇವ್​ 2022 ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ ರವಿ ಕಿಶನ್, ಜನಸಂಖ್ಯೆಯ ಬೆಳವಣಿಗೆಯ ವಿಷಯದಲ್ಲಿ ಹಿಂದಿನ ಸರ್ಕಾರಗಳು ಜಾಗರೂಕರಾಗಿರಲಿಲ್ಲ.

ಜೊತೆಗೆ, ಸರಿಯಾದ ಸಮಯದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಮಂಡಿಸಬೇಕಿತ್ತು ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದರು. ಅವರ ಈ ಹೇಳಿಕೆಯಿಂದ ಸಭಿಕರಲ್ಲಿ ನಗು ಪ್ರತಿಧ್ವನಿಸಿತು. ಆ ವೇಳೆ ರವಿ ಕಿಶನ್ ತಮ್ಮ ಮಾತಿನ ಲಹರಿಯನ್ನು ವಿಸ್ತರಿಸಿದರು. ನನಗೆ ನಾಲ್ಕು ಮಕ್ಕಳಾಗಿರುವುದು ನನ್ನ ತಪ್ಪಲ್ಲ. ಕಾಂಗ್ರೆಸ್ ಜನಸಂಖ್ಯಾ ನಿಯಂತ್ರಣ ಮಸೂದೆ ತಂದಿದ್ದರೆ, ನನ್ನನ್ನು ನಾಲ್ಕು ಮಕ್ಕಳ ತಂದೆಯಾಗಲು ಬಿಡುತ್ತಿರಲಿಲ್ಲ ಎಂದರು.

MP Ravi Kishan explains how and why congress to be blamed for him having four children

ರವಿ ಕಿಶನ್ ಅವರು ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ಆಗಾಗ್ಗೆ ವಿಲಕ್ಷಣ ಮಾತು ಹೇಳುವುದು ಸಾಮಾನ್ಯವಾಗಿದೆ. ನಮ್ಮ ದೇಶದಲ್ಲಿ ಸಂಪನ್ಮೂಲಗಳು ಖಾಲಿಯಾಗುತ್ತಿರುವ ಕಾರಣ ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯಲು ಇದನ್ನು ಪರಿಚಯಿಸಬೇಕು ಎಂದುದು ಅವ್ರ ವಾದವಾಗಿದೆ. ಇನ್ನು ಜನಸಂಖ್ಯಾ ನಿಯಂತ್ರಣ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಖಾಸಗಿ ಮಸೂದೆ ತರುವುದಾಗಿಯೂ ಅವರು ಹೇಳಿದರು.

ಇದನ್ನೂ ಓದಿ: Mohan Bhagwat: ಅಖಂಡ ಭಾರತ ನಿರ್ಮಾಣ, ಹಿಂದೂರಾಷ್ಟ್ರದ ನಿಲುವು, ನೂತನ ಜನಸಂಖ್ಯಾ ನೀತಿಯ ಬಗ್ಗೆ ಮೋಹನ್ ಭಾಗವತ್ ಪ್ರಸ್ತಾಪ

ಮುಂದಿನ ಒಂದು ದಶಕದಲ್ಲಿ ನಾವು ಚೀನಾದ ಜನಸಂಖ್ಯೆಯನ್ನು ಮೀರುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದ್ದೇವೆ. ಹಾಗಾಗಿ ಪ್ರಸ್ತುತ ಜನಸಂಖ್ಯೆ ಬೆಳವಣಿಗೆ ಗತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತದ ಜನಸಂಖ್ಯೆಯನ್ನು ನಿಯಂತ್ರಿಸುವ ಗುರಿ ಹೊಂದಿದ್ದೇವೆ. ಅದಕ್ಕಾಗಿ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು 2019 ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾಯಿತು ಎಂದು ಅವರು ವಿವರಿಸಿದ್ದಾರೆ.

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದದಿರುವ ಜನರಿಗೆ ಹಲವಾರು ಸರ್ಕಾರಿ ಸವಲತ್ತುಗಳು ಮತ್ತು ಪ್ರಯೋಜನಗಳನ್ನು ಕೊಡಮಾಡಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮಸೂದೆಯು ಇಬ್ಬರೇ ಇಬ್ಬರು ಮಕ್ಕಳನ್ನು ಹೊಂದಿರುವ ಕುಟುಂಬಸ್ಥರಿಗೆ ತೆರಿಗೆ ಪ್ರಯೋಜನಗಳು, ಉದ್ಯೋಗ ಪ್ರಯೋಜನಗಳು ಮತ್ತು ಶೈಕ್ಷಣಿಕ ಪ್ರಯೋಜನಗಳನ್ನು ನೀಡುತ್ತದೆ.

ಆದರೆ, ಈ ಮಸೂದೆಯನ್ನು ವಿರೋಧ ಪಕ್ಷ ಮತ್ತು ಸಮಾಜದ ಕೆಲವು ಸಮುದಾಯದವರು ಮುಕ್ತವಾಗಿ ಸ್ವೀಕರಿಸಿಲ್ಲ. ಏಕೆಂದರೆ ಸರ್ಕಾರದ ಜನಸಂಖ್ಯೆ ನಿಯಂತ್ರಣ ನಿಯಮಗಳು ತಮ್ಮನ್ನು ಗುರಿಯಾಗಿಸಿಕೊಳ್ಳುತ್ತವೆ ಎಂಬುದು ಅವರ ಆತಂಕವಾಗಿದೆ. ಮಸೂದೆಯನ್ನು ಕಾಂಗ್ರೆಸ್ ಪಕ್ಷವು ಇಸ್ಲಾಮೋಫೋಬಿಕ್ (Islamophobic) ಎಂದೂ ಜರಿದಿದೆ. ಆದರೆ ಬಿಜೆಪಿಯು ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ನಾಲ್ಕಾರು ವರ್ಷಗಳಿಂದ ಬೆಂಬಲಿಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:49 am, Wed, 14 December 22