Bihar Liquor Tragedy: ವಿಷಕಾರಿ ಮದ್ಯ ಸೇವಿಸಿ 6 ಮಂದಿ ಸಾವು

ಬಿಹಾರದ ಛಪ್ರಾದಲ್ಲಿ ವಿಷಕಾರಿ ಮದ್ಯ ಸೇವಿಸಿ 6 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ.

Bihar Liquor Tragedy: ವಿಷಕಾರಿ ಮದ್ಯ ಸೇವಿಸಿ 6 ಮಂದಿ ಸಾವು
Bihar Liquor Tragedy 6 people died after drinking poisonous liquorImage Credit source: ANI
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 14, 2022 | 12:51 PM

ಪಾಟ್ನಾ:ಬಿಹಾರ(Bihar) ಛಾಪ್ರಾ ಜಿಲ್ಲೆಯಲ್ಲಿ ಬುಧವಾರ ವಿಷಕಾರಿ ಮದ್ಯ (Liquor Tragedy) ಸೇವಿಸಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಇನ್ನು ಕೆಲವರು ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ಕಾರಣ ತಿಳಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾವಿನ್ನಪ್ಪಿರುವವರ ಸಂಬಂಧಿಕರು ಅವರ ವಿಷಕಾರಿ ಮದ್ಯ ಸೇವಿಸಿಯೇ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ, ಆದರೆ ಈ ಬಗ್ಗೆ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.

ಈ ಸಾವಿಗೆ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವೇ ಕಾರಣ ಎಂದು ಸ್ಥಳೀಯ ಬಿಜೆಪಿ ಶಾಸಕ ಜನಕ್ ಸಿಂಗ್ ಆರೋಪಿಸಿದ್ದಾರೆ. ಬಿಜೆಪಿ ಶಾಸಕನ ಗ್ರಾಮದಲ್ಲಿ ಕನಿಷ್ಠ ಮೂರು ಸಾವುಗಳು ಸಂಭವಿಸಿವೆ.

ರಾಜ್ಯದಲ್ಲಿ ವಿಷಕಾರಿ ಮದ್ಯದಿಂದಾಗಿ ಸಾವಿರಾರು ಜನರು ಸಾಯುತ್ತಿದ್ದಾರೆ, ಆದರೆ ಮುಖ್ಯಮಂತ್ರಿಗಳು ಅದರ ಬಗ್ಗೆ ಏನೂ ಮಾಡುತ್ತಿಲ್ಲ, ಇದಕ್ಕೆ ಸರ್ಕಾರದ ಚುಕ್ಕಾಣಿ ಹಿಡಿದವರನ್ನು ದೂಷಿಸಬೇಕು ಏಕೆಂದರೆ ಅಂತಹ ಘಟನೆಗಳು ನಡೆದರೆ ಅಧಿಕಾರಿಗಳನ್ನು ತನಿಖೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಇದೀಗ ಅವರ ಊರಿನಲ್ಲೇ ಸಂಭವಿಸಿದೆ ಎಂದು ಅವರು ನಿತೀಶ್ ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.

ಇದನ್ನು ಓದಿ:ಗುಜರಾತ್​​ನಲ್ಲಿ ಕಳ್ಳಭಟ್ಟಿ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆ; 45 ಜನ ಆಸ್ಪತ್ರೆಗೆ ದಾಖಲು

“ಯಾರ ಕಣ್ಗಾವಲಿನಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ? ಅಂತಹ ಎಷ್ಟು ಅಧಿಕಾರಿಗಳನ್ನು ತನಿಖೆ ಮಾಡಲಾಗಿದೆ ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ, ವಿಷಕಾರಿ ಮದ್ಯವು ನನ್ನ ಗ್ರಾಮಕ್ಕೆ ಹೇಗೆ ಬಂತು? ನೀವು ಪೊಲೀಸ್ ಠಾಣೆಗಳ ಮೂಲಕ ಹಣ ಮಾಡುತ್ತಿದ್ದೀರಿ, ನಿಮಗೆ  ಅಧಿಕಾರದಲ್ಲಿರಲು ಹಕ್ಕಿಲ್ಲ. ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Wed, 14 December 22