ಏರ್​ಪೋರ್ಟ್​ಗಳಲ್ಲಿ ಜನದಟ್ಟಣೆ; ಪ್ರಯಾಣಿಕರಿಗೆ ಮೂರೂವರೆ ತಾಸು ಮೊದಲು ವಿಮಾನ ನಿಲ್ದಾಣ ತಲುಪಲು ಸೂಚನೆ

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ದೇಶೀಯ ವಿಮಾನ ನಿರ್ಗಮನದ ಸಮಯಕ್ಕೆ ಕನಿಷ್ಠ ಮೂರುವರೆ (3.5) ಗಂಟೆಗಳ ಮೊದಲೇ ದೆಹಲಿ ವಿಮಾನ ನಿಲ್ದಾಣವನ್ನು ತಲುಪುವಂತೆ ತನ್ನ ಪ್ರಯಾಣಿಕರಿಗೆ ಮನವಿ ಮಾಡಿದೆ.

ಏರ್​ಪೋರ್ಟ್​ಗಳಲ್ಲಿ ಜನದಟ್ಟಣೆ; ಪ್ರಯಾಣಿಕರಿಗೆ ಮೂರೂವರೆ ತಾಸು ಮೊದಲು ವಿಮಾನ ನಿಲ್ದಾಣ ತಲುಪಲು ಸೂಚನೆ
ಸಾಂದರ್ಭಿಕ ಚಿತ್ರImage Credit source: PTI
Follow us
TV9 Web
| Updated By: ಆಯೇಷಾ ಬಾನು

Updated on:Dec 14, 2022 | 8:10 AM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಮಾನ ನಿಲ್ದಾಣದಲ್ಲಿ(Delhi International Airport) ದೀರ್ಘ ಸರತಿ ಸಾಲುಗಳಲ್ಲಿ ನಿಲ್ಲುವುದು ಮತ್ತು ಚೆಕ್-ಇನ್‌ ಆಗುವಲ್ಲಿ ಭಾರಿ ವಿಳಂಬವಾಗುತ್ತಿದೆ ಎಂದು ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡಿದ್ದರು. ಹೀಗಾಗಿ ಈ ಸಮಸ್ಯೆಗೆ ಕಡಿವಾಣ ಹಾಕಲು ದೆಹಲಿ ವಿಮಾನಯಾನ ಸಂಸ್ಥೆ ಹೊಸದೊಂದು ಪ್ಲಾನ್ ಮಾಡಿದೆ. ವಿಮಾನ ನಿಲ್ದಾಣಗಳಲ್ಲಿ ದಟ್ಟಣೆ ತಪ್ಪಿಸಲು ಪ್ರಯಾಣಿಕರು ಬೇಗ ಬರುವಂತೆ ಹಾಗೂ ಒಂದೇ ಲಗೇಜ್ ಬ್ಯಾಗ್ ತರುವಂತೆ ವಿನಂತಿ ಮಾಡಿದೆ.

ದೆಹಲಿ ಮತ್ತು ಇತರ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ದೀರ್ಘಾವಧಿಯವರೆಗೆ ಕಾಯುವ ಸ್ಥಿತಿ ಇದೆ. ಹಾಗೂ ಚೆಕ್​ ಇನ್​ಗಳು ಸರಿಯಾದ ಸಮಯಕ್ಕೆ ಮುಗಿಯುತ್ತಿಲ್ಲ. ನೂಕು ನುಗ್ಗಲಿನ ಸ್ಥಿತಿ ಇದೆ. ಈ ಬಗ್ಗೆ ಹಲವು ಪ್ರಯಾಣಿಕರು ಕೆಲವು ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪ್ರಯಾಣಿಕರು ಬೇಗನೆ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಹಾಗೂ ವೆಬ್ ಚೆಕ್-ಇನ್ ಮಾಡಲು ಮತ್ತು ವೇಗವಾಗಿ ಚಲಿಸಲು ಕೇವಲ ಒಂದು ಕೈ ಬ್ಯಾಗ್ ತರುವಂತೆ ಮನವಿ ಮಾಡಿದೆ.

ಇದನ್ನೂ ಓದಿ: Viral Video: ಪ್ರಯಾಣಿಕರಿಂದ ದೂರು ಹಿನ್ನೆಲೆ; ದೆಹಲಿ ವಿಮಾನ ನಿಲ್ದಾಣಕ್ಕೆ ದಿಢೀರನೆ ಭೇಟಿ ನೀಡಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ದೇಶೀಯ ವಿಮಾನ ನಿರ್ಗಮನದ ಸಮಯಕ್ಕೆ ಕನಿಷ್ಠ ಮೂರುವರೆ (3.5) ಗಂಟೆಗಳ ಮೊದಲೇ ದೆಹಲಿ ವಿಮಾನ ನಿಲ್ದಾಣವನ್ನು ತಲುಪುವಂತೆ ತನ್ನ ಪ್ರಯಾಣಿಕರಿಗೆ ಮನವಿ ಮಾಡಿದೆ. ಇತ್ತೀಚೆಗೆ, ರಾಷ್ಟ್ರ ರಾಜಧಾನಿಯಲ್ಲಿರುವ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGIA) ಹೆಚ್ಚುತ್ತಿರುವ ವಿಮಾನ ದಟ್ಟಣೆಯ ನಡುವೆ ದೀರ್ಘ ಸರತಿ ಸಾಲುಗಳು ಮತ್ತು ಜನಸಂದಣಿ ಹೆಚ್ಚಿತ್ತು. ಇದರಿಂದ ಪ್ರಯಾಣಿಕರು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಿದ್ದರು. ಸದ್ಯ ಪರಿಸ್ಥಿತಿಯನ್ನು ನಿಭಾಯಿಸಲು ಪೀಕ್ ಅವರ್‌ಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಸೇರಿದಂತೆ ಅಧಿಕಾರಿಗಳು ಕ್ರಿಯಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸೋಮವಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ಇನ್ನು ವಿಸ್ತಾರಾ ಸಂಸ್ಥೆ, ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ತೆರಳುವವರು ವಿಮಾನ ನಿರ್ಗಮನದ ಸಮಯಕ ಕನಿಷ್ಠ ಮೂರು ಗಂಟೆಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಬರುವಂತೆ ತನ್ನ ಪ್ರಯಾಣಿಕರಿಗೆ ತಿಳಿಸಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಇಲ್ಲಿ ಹೆಚ್ಚಿನ ಕಾಲ್ತುಳಿತಗಳು ಸಂಭವಿಸುತ್ತವೆ ಎಂದು ಇಂಡಿಗೋ ಟ್ವೀಟ್ ಮಾಡಿದೆ. ಚೆಕ್-ಇನ್ ಮತ್ತು ಬೋರ್ಡಿಂಗ್ ಸಮಯವು ಸಾಮಾನ್ಯಕ್ಕಿಂತ ಹೆಚ್ಚು ಇರುತ್ತದೆ. ಹೀಗಾಗಿ “ದೇಶೀಯ ವಿಮಾನದಲ್ಲಿ ಪ್ರಯಾಣಿಸುವವರು ಕನಿಷ್ಠ ಮೂರೂವರೆ (3.5) ಗಂಟೆಗಳ ಮೊದಲೇ ವಿಮಾನ ನಿಲ್ದಾಣವನ್ನು ತಲುಪಬೇಕು. ಸುಗಮ ಭದ್ರತಾ ತಪಾಸಣೆಗಾಗಿ 7 ಕೆಜಿ ತೂಕದ ಒಂದು ಕೈ ಬ್ಯಾಕನ್ನು ಮಾತ್ರ ತೆಗೆದುಕೊಂಡು ಹೋಗಿ. ಹೆಚ್ಚಿನ ಅನುಕೂಲಕ್ಕಾಗಿ ನಿಮ್ಮ ವೆಬ್ ಚೆಕ್-ಇನ್ ಅನ್ನು ನೀವು ಪೂರ್ಣಗೊಳಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಎಂದು ಇಂಡಿಗೋ ವಿನಂತಿಸಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:10 am, Wed, 14 December 22