Mohan Bhagwat: ಅಖಂಡ ಭಾರತ ನಿರ್ಮಾಣ, ಹಿಂದೂರಾಷ್ಟ್ರದ ನಿಲುವು, ನೂತನ ಜನಸಂಖ್ಯಾ ನೀತಿಯ ಬಗ್ಗೆ ಮೋಹನ್ ಭಾಗವತ್ ಪ್ರಸ್ತಾಪ

rss vijayadashami Utsav: ಆತ್ಮನಿರ್ಭರ್​ ಆಗಬೇಕು ಎನ್ನುವುದು ಸರಿ. ಆದರೆ ನಮ್ಮ ಆತ್ಮ ಯಾವುದು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಬೇಕಿದೆ ಎಂದು ಮೋಹನ್ ಭಾಗವತ್ ಹೇಳಿದರು.

Mohan Bhagwat: ಅಖಂಡ ಭಾರತ ನಿರ್ಮಾಣ, ಹಿಂದೂರಾಷ್ಟ್ರದ ನಿಲುವು, ನೂತನ ಜನಸಂಖ್ಯಾ ನೀತಿಯ ಬಗ್ಗೆ ಮೋಹನ್ ಭಾಗವತ್ ಪ್ರಸ್ತಾಪ
ಮೋಹನ್ ಭಾಗವತ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 05, 2022 | 11:15 AM

ನಾಗಪುರ: ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ. ಜನಸಂಖ್ಯೆ ಹಂಚಿಕೆಯಲ್ಲಿ ಆಗುವ ವ್ಯತ್ಯಾಸಗಳು ಭೌಗೋಳಿಕ ಗಡಿಗಳನ್ನು ಬದಲಿಸುತ್ತವೆ. ಜನನ ಪ್ರಮಾಣ ದರ, ಬಲವಂತ ಅಥವಾ ಆಮಿಷ ಅಥವಾ ಆಸೆಗಳನ್ನು ಒಡ್ಡಿ ಮಾಡುವ ಮತಾಂತರ, ಅಕ್ರಮ ಒಳನುಸುಳುವಿಕೆಗಳು ಧರ್ಮಾಧಾರಿತ ಜನಸಂಖ್ಯೆಯಲ್ಲಿ ವ್ಯತ್ಯಯಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ಆರ್​ಎಸ್​ಎಸ್​ ಮುಖ್ಯಸ್ಥರಾದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು. ಆರ್​ಎಸ್​ಎಸ್​ ಸಂಸ್ಥಾಪನಾ ದಿನದ ಪ್ರಯುಕ್ತ ನಾಗಪುರದ ರೇಷಂಭಾಗ್​ನಲ್ಲಿ ನಡೆದ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಅವರು, ಜನರಿಗೆ ಸೌಲಭ್ಯ ಒದಗಿಸಲು ಸಂಪನ್ಮೂಲಗಳು ಬೇಕು. ಸಂಪನ್ಮೂಲಗಳನ್ನು ಬೆಳೆಸದೇ ಜನಸಂಖ್ಯೆ ಹೆಚ್ಚಾದರೆ ಅದು ಹೊರೆಯಾಗುತ್ತದೆ. ಜನಸಂಖ್ಯೆಯನ್ನೇ ದೇಶದ ಸಂಪನ್ಮೂಲ ಎಂದು ಪರಿಗಣಿಸುವ ದೃಷ್ಟಿಯೂ ಇದೆ. ನಾವು ಈ ಎರಡೂ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜನಸಂಖ್ಯಾ ನೀತಿಯನ್ನು ರೂಪಿಸಬೇಕಿದೆ ಎಂದು ಸಲಹೆ ಮಾಡಿದರು.

ಸರಸಂಘಚಾಲಕರ ಭಾಷಣದ ಮುಖ್ಯ ಅಂಶಗಳಿವು…

  1. ಸಮಾನತೆ ಅತ್ಯಗತ್ಯ: ದೇವಾಲಯಗಳು, ನೀರು ಮತ್ತು ಸ್ಮಶಾನದ ಭೂಮಿಯಲ್ಲಿ ತಾರತಮ್ಯ ಸಲ್ಲದು. ಸಣ್ಣಪುಟ್ಟ ವಿಚಾರಗಳ ಬಗ್ಗೆ ನಾವು ಜಗಳವಾಡಬಾರದು. ಯಾರೋ ಒಬ್ಬರು ಕುದುರೆ ಸವಾರಿ ಮಾಡಬಹುದು, ಮತ್ತೊಬ್ಬರಿಗೆ ಈ ಅವಕಾಶ ಇಲ್ಲ ಎನ್ನುವ ಮಾತು ಕೇಳಿಬರದಂಥ ಸಮಾಜ ರೂಪಿಸಲು ನಾವು ಶ್ರಮಿಸಬೇಕು. ಇಂದು ಹಿಂದೂರಾಷ್ಟ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಚಾರವನ್ನು ಹಲವರು ಒಪ್ಪುತ್ತಾರೆ ಆದರೆ ಹಿಂದೂ ಎನ್ನುವ ಪದದ ಬಗ್ಗೆ ಅವರಿಗೆ ಆಕ್ಷೇಪವಿದೆ. ಇತರ ಪದಗಳನ್ನು ಬಳಸಬೇಕು ಎಂದು ಒತ್ತಾಯಿಸುತ್ತಾರೆ. ನಮಗೂ ಈ ವಿಚಾರದಲ್ಲಿ (ಬೇರೆ ಪದ ಬಳಸುವ) ಯಾವುದೇ ಆಕ್ಷೇಪವಿಲ್ಲ. ಆದರೆ ಪರಿಕಲ್ಪನೆಯ ಸ್ಪಷ್ಟತೆಗಾಗಿ ನಾವು ಹಿಂದೂ ಎನ್ನುವ ಪದಕ್ಕೆ ಒತ್ತು ಕೊಡುತ್ತೇವೆ.
  2. ಯಾವುದು ಆತ್ಮ: ಸಮಾಜದಲ್ಲಿ ಕಂಡುಬರುವ ತಪ್ಪುಗಳ ಬಗ್ಗೆ ಜನರು ಕಾನೂನು ಚೌಕಟ್ಟಿನಲ್ಲಿ ಧ್ವನಿ ಎತ್ತಬೇಕಿದೆ. ತಪ್ಪುಗಳ ವಿರುದ್ಧ ಧ್ವನಿ ಎತ್ತುವುರು ಸಮಾಜದಲ್ಲಿ ಸಾಮಾನ್ಯ ವಿದ್ಯಮಾನವಾಗಬೇಕು. ನಾವು ಒಂದಾಗಿ ಬದುಕಬೇಕಿದೆ. ಆತ್ಮನಿರ್ಭರ್​ ಆಗಬೇಕು ಎನ್ನುವುದು ಸರಿ. ಆದರೆ ನಮ್ಮ ಆತ್ಮ ಯಾವುದು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಬೇಕಿದೆ.
  3. ದೇಶಸೇವೆಗೆ ಮೀಸಲಿಡಿ: ಮಹರ್ಷಿ ಅರವಿಂದರು ನಮಗೆ ಸಮಗ್ರ ಪ್ರಣಾಳಿಕೆಯೊಂದನ್ನು ನೀಡಿದ್ದಾರೆ. ಅದು ಇಂದಿಗೂ ಪ್ರಸ್ತುತವಾಗಿದೆ. ‘ದೇಶದ ಇತಿಹಾಸದಲ್ಲಿ ಕೆಲವು ಕಾಲಘಟ್ಟಗಳು ಇರುತ್ತವೆ. ಒಂದು ಉದ್ದೇಶ, ಒಂದು ಕೆಲಸಕ್ಕಾಗಿ ಉಳಿದ ಎಲ್ಲವನ್ನೂ ತ್ಯಾಗಮಾಡಬೇಕಾಗುತ್ತದೆ. ಅವು ಎಂಥದ್ದೇ ಆಗಿದ್ದರೂ, ಎಷ್ಟೇ ಮುಖ್ಯವಾಗಿದ್ದರೂ ದೇಶಕ್ಕಾಗಿ ಅವನ್ನು ಬಿಡಬೇಕಾಗುತ್ತದೆ’ ಎಂದು ಅರವಿಂದರು ಹೇಳಿದ್ದಾರೆ. ನಮ್ಮ ಮಾತೃಭೂಮಿಗಾಗಿ ಇಂಥ ಸಂದರ್ಭ ಈಗ ಬಂದಿದೆ. ಆಕೆಯ ಸೇವೆಯ ಎದುರು ಬೇರೆ ಯಾವುದೂ ನಮಗೆ ಮುಖ್ಯವಲ್ಲ. ಎಲ್ಲವೂ ಈ ಉದ್ದೇಶದತ್ತಲೇ ಮುನ್ನಡೆಯಬೇಕಾಗಿದೆ. ನೀವು ಓದುವುದಿದ್ದರೆ ಆಕೆಗಾಗಿ ಓದಿರಿ. ನಿಮ್ಮ ದೇಹ, ಮನಸ್ಸು ಹಾಗೂ ಆತ್ಮವನ್ನು ಆಕೆಯ ಸೇವೆಗಾಗಿ ಮೀಸಲಿಡಿ.
  4. ದೇಶಕ್ಕಾಗಿ ಬದುಕು: ನೀವು ನಿಮ್ಮ ಕೆಲಸದಿಂದ ಬದುಕಬಹುದು. ಆದರೆ ನಿಮ್ಮ ಬದುಕು ಆಕೆಗಾಗಿ ಮೀಸಲಿರಬೇಕು. ನೀವು ವಿದೇಶಗಳಿಗೆ ಹೋಗಬಹುದು, ಅಲ್ಲಿಂದ ಹೊಸ ಜ್ಞಾನ ಹೊತ್ತು ತರಬಹುದು. ಇವೆಲ್ಲವೂ ಮಾತೃಭೂಮಿಯ ಸೇವೆಯ ಉದ್ದೇಶ ಹೊಂದಿರಬೇಕು. ನಿಮ್ಮ ಕೆಲಸ, ನಿಮ್ಮ ಪರಿಶ್ರಮ ಎಲ್ಲವು ಮಾತೃಭೂಮಿಯನ್ನೇ ದೃಷ್ಟಿಯಲ್ಲಿ ಇರಿಸಿಕೊಳ್ಳಬೇಕು.
  5. ಅಖಂಡ ಭಾರತ ನಿರ್ಮಾಣ: ಇದು ಮಹರ್ಷಿ ಅರವಿಂದರ 150ನೇ ಜನ್ಮದಿನವೂ ಹೌದು. ಭಾರತದ ಸ್ವಾತಂತ್ರ್ಯ ದಿನದಂದು ಅರವಿಂದರು ಐದು ಕನಸುಗಳನ್ನು ಹಂಚಿಕೊಂಡಿದ್ದರು. ಭಾರತದ ಸ್ವಾತಂತ್ರ್ಯ ಮತ್ತು ಏಕೀಕರಣ, ಅಖಂಡ ಭಾರತದ ಮರು ನಿರ್ಮಾಣ, ಏಷ್ಯಾದ ದೇಶಗಳ ವಿಮೋಚನೆ, ವಿಶ್ವದ ಏಕತೆ, ಭಾರತದ ಅಧ್ಯಾತ್ಮ ಜ್ಞಾನವನ್ನು ವಿಶ್ವಕ್ಕೆ ಹರಡುವುದು ಮತ್ತು ಮನುಷ್ಯನು ಉನ್ನತ ಸ್ತರದ ಜೀವಿಯಾಗಿ ವಿಕಸನಗೊಳ್ಳುವ ಕನಸುಗಳು ಅವರದ್ದಾಗಿದ್ದವು.
  6. ಮುಸ್ಲಿಮರು ಖಂಡಿಸಬೇಕು: ಉದಯಪುರ ಘಟನೆಯ ನಂತರ ಕೆಲ ಪ್ರಮುಖ ಮುಸ್ಲಿಮರು ಖಂಡಿಸಿದ್ದರು. ಆದರೆ ಇಂಥ ಪ್ರತಿಭಟನೆಗಳು ಎಲ್ಲೋ ಕೆಲವು ಮಾತ್ರವೇ ಆಗಬಾರದು. ಮುಸ್ಲಿಮ್ ಸಮಾಜವು ಇಂಥ ಘಟನೆಗಳ ಬಗ್ಗೆ ಒಂದಾಗಿ ಧ್ವನಿ ಎತ್ತಬೇಕಿದೆ.
  7. ಆತಂಕ ಹುಟ್ಟಿಸುವುದು ನಮ್ಮ ಸ್ವಭಾವವಲ್ಲ: ಅಲ್ಪಸಂಖ್ಯಾತರು ಎನ್ನಲಾಗುವ ಸಮುದಾಯದ ಕೆಲ ಪ್ರತಿನಿಧಿಗಳು ಸಂಘ ಪರಿವಾರದ ನಾಯಕರನ್ನು ನಿಯಮಿತವಾಗಿ ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ. ಸಂಘಟಿತ ಹಿಂದೂಗಳ ಬಗ್ಗೆ ಅಥವಾ ನಮ್ಮ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಯಾರಲ್ಲಿಯೂ ಆತಂಕ ಹುಟ್ಟಿಸುವುದು ನಮ್ಮ ಸಂಘ ಅಥವಾ ಹಿಂದೂಗಳ ಸ್ವಭಾವವಲ್ಲ. ಸಂಘವು ಸೋದರತೆಯನ್ನು ಪ್ರತಿಪಾದಿಸುತ್ತದೆ.
  8. ಸಂಘದ ದೃಷ್ಟಿಕೋನ: ನಾವು ನಮ್ಮ ಸುಖ-ದುಃಖಗಳಲ್ಲಿ ಒಂದಾಗಿ ಇರಬೇಕು. ನಾವು ಭಾರತವನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು. ಇದಷ್ಟೇ ಸಂಘವು ಪ್ರತಿಪಾದಿಸುವ ರಾಷ್ಟ್ರೀಯತೆ ಮತ್ತು ಸೌಹಾರ್ದ ದೃಷ್ಟಿಕೋನದ ಸಾರಸರ್ವಸ್ವ. ಇದನ್ನು ಹೊರತುಪಡಿಸಿದರೆ ಸಂಘ ಪರಿವಾರಕ್ಕೆ ಬೇರೆ ಯಾವುದೇ ಹಿತಾಸಕ್ತಿ ಇಲ್ಲ.

ಇದನ್ನೂ ಓದಿ: ನಾಗಪುರದಲ್ಲಿ ಆರ್​ಎಸ್​ಎಸ್​ ವಿಜಯದಶಮಿ ಉತ್ಸವ ಆರಂಭ: ಮೋಹನ್ ಭಾಗವತ್ ಭಾಷಣದತ್ತ ಎಲ್ಲರ ಕಣ್ಣು

ಇದನ್ನೂ ಓದಿ: Mohan Bhagwat: ಅಸ್ಪೃಶ್ಯತೆ, ಜಾತಿ ತಾರತಮ್ಯ ಅಧರ್ಮ; ವಿಜಯದಶಮಿ ಭಾಷಣದಲ್ಲಿ ಮೋಹನ್ ಭಾಗವತ್

Published On - 11:13 am, Wed, 5 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ