Ghaziabad: ಮನೆಯಲ್ಲಿ LCD ಟಿವಿ ಸ್ಫೋಟ, 16 ವರ್ಷದ ಬಾಲಕ ಸಾವು, ಕುಸಿದ ಗೋಡೆ
ಗೋಡೆಗೆ ಅಳವಡಿಸಿದ್ದ ಎಲ್‌ಸಿಡಿ ಟಿವಿ ಸ್ಫೋಟಗೊಂಡ ಪರಿಣಾಮ 16 ವರ್ಷದ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಗಾಜಿಯಾಬಾದ್: ಗೋಡೆಗೆ ಅಳವಡಿಸಿದ್ದ ಎಲ್‌ಸಿಡಿ ಟಿವಿ ಸ್ಫೋಟಗೊಂಡ ಪರಿಣಾಮ 16 ವರ್ಷದ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಬಾಲಕ ಓಮೇಂದ್ರ, ಹರ್ಷ ವಿಹಾರ್ ಕಾಲೋನಿಯಲ್ಲಿರುವ ತನ್ನ ಸ್ನೇಹಿತ ಕರಣ್ ಮನೆಯಲ್ಲಿ ಟಿವಿಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾಗ, ಒಂದು ದೊಡ್ಡ ಸದ್ದಿನಿಂದ ಸ್ಫೋಟಗೊಂಡಿತು ಎಂದು ಎಸ್‌ಪಿ ಸಿಟಿ (ದ್ವಿತೀಯ) ಜ್ಞಾನೇಂದ್ರ ಸಿಂಗ್ ಹೇಳಿದ್ದಾರೆ.
ಮೂವರನ್ನು ಚಿಕಿತ್ಸೆಗಾಗಿ ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಯ ವೈದ್ಯರು ಓಮೇಂದ್ರ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಕರಣ್ ಮತ್ತು ಓಂವತಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಈ ಘಟನೆಯ ಬಗ್ಗೆ ಎಲ್ಲಾ ಕಡೆಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಸಿಂಗ್ ಹೇಳಿದರು.
ಇದನ್ನು ಓದಿ: ಆಸ್ತಿಗಾಗಿ 88 ವರ್ಷದ ವಯಸ್ಸಾದ ತಾಯಿಯನ್ನು ಕೊಲ್ಲಲು ಯತ್ನಿಸಿದ ಮಗ ಅರೆಸ್ಟ್
ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಶವಪರೀಕ್ಷೆ ನಡೆಸಲಾಗಿದೆ ಎಂದು ಅವರು ಹೇಳಿದರು. ಅದೇ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಕರಣ್ ಅವರ ತಾಯಿ ಓಂವತಿ ಕೂಡ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ.
Published On - 11:43 am, Wed, 5 October 22




