AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaccination Drive: ಭಾರತದ ಲಸಿಕಾ ಅಭಿಯಾನಕ್ಕೆ ಒಂದು ವರ್ಷ ಪೂರ್ಣ; ಯೋಜನೆ ಸಾಗಿ ಬಂದ ಹಾದಿ ಹೇಗಿತ್ತು?

PM Modi | Dr Mansukh Mandaviya: ಭಾರತದಲ್ಲಿ ಲಸಿಕಾ ಅಭಿಯಾನ ಆರಂಭವಾಗಿ ಒಂದು ವರ್ಷ ಪೂರ್ಣಗೊಂಡಿದೆ. ಈ ಅಭಿಯಾನದಲ್ಲಿ ಇಲ್ಲಿಯವರೆಗೆ ಒಟ್ಟು 156 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಇದಕ್ಕೆ ಕಾರಣರಾದ ಎಲ್ಲರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Vaccination Drive: ಭಾರತದ ಲಸಿಕಾ ಅಭಿಯಾನಕ್ಕೆ ಒಂದು ವರ್ಷ ಪೂರ್ಣ; ಯೋಜನೆ ಸಾಗಿ ಬಂದ ಹಾದಿ ಹೇಗಿತ್ತು?
ಪ್ರಾತಿನಿಧಿಕ ಚಿತ್ರ (Credits: Dr Mansukh Mandaviya/ Twitter)
TV9 Web
| Updated By: shivaprasad.hs|

Updated on:Jan 16, 2022 | 12:25 PM

Share

ಭಾರತವು ಲಸಿಕಾ ಅಭಿಯಾನದಲ್ಲಿ ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿದೆ. ಈ ಕುರಿತು ಸಂಭ್ರಮ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಡಾ.ಮನ್​ಸುಖ್ ಮಾಂಡವೀಯ, ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಭಾರತದ ಲಸಿಕಾ ಅಭಿಯಾನವನ್ನು ಅತ್ಯಂತ ಯಶಸ್ವಿ ಲಸಿಕಾ ಅಭಿಯಾನ ಎಂದು ವ್ಯಾಖ್ಯಾನಿಸಿರುವ ಮಾಂಡವೀಯ, ‘‘ಇಂದು ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವು ಒಂದು ವರ್ಷವನ್ನು ಪೂರೈಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಎಲ್ಲರ ಪ್ರಯತ್ನದಿಂದ ಪ್ರಾರಂಭವಾಯಿತು. ಪ್ರಸ್ತುತ ಇದು ವಿಶ್ವದ ಅತ್ಯಂತ ಯಶಸ್ವಿ ಲಸಿಕೆ ಅಭಿಯಾನವಾಗಿದೆ. ಈ ಯಶಸ್ಸಿಗೆ ಕಾರಣರಾದ ಎಲ್ಲಾ ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗಳು ಹಾಗೂ ದೇಶದ ಪ್ರಜೆಗಳಿಗೆ ಅಭಿನಂದನೆಗಳು’’ ಎಂದು ನುಡಿದಿದ್ದಾರೆ. ಭಾರತದಲ್ಲಿ ಇದುವರೆಗೆ 156.76 ಕೋಟಿ ಡೋಸ್ ಲಸಿಕೆಗಳನ್ನು ವಿತರಿಸಲಾಗಿದೆ. 

ಭಾರತದಲ್ಲಿ ಲಸಿಕಾ ಅಭಿಯಾನ ಸಾಗಿ ಬಂದ ಹಾದಿ ಇಲ್ಲಿದೆ:

ಜನವರಿ 2: ಭಾರತದಲ್ಲೇ ತಯಾರಾದ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ನೀಡಲಾಯಿತು.

ಜನವರಿ 16: ಭಾರತದಲ್ಲಿ ಕೊವಿಡ್ ವಿರುದ್ಧ ಹೋರಾಡಲು ಪ್ರಬಲ ಅಸ್ತ್ರವಾದ ಲಸಿಕಾ ಅಭಿಯಾನವನ್ನು ಆರಂಭಿಸಲಾಯಿತು.

ಫೆಬ್ರವರಿ 19: ಒಂದು ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣ

ಮಾರ್ಚ್ 1: ಕೊವಿನ್, ಆರೋಗ್ಯ ಸೇತು ಹಾಗೂ UMANG ಆಪ್​ಗಳಲ್ಲಿ ಲಸಿಕೆಗೆ ನೋಂದಾಯಿಸುವ ಪದ್ಧತಿ ಆರಂಭ

ಏಪ್ರಿಲ್ 1: 10 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣ

ಆಗಸ್ಟ್ 6: ದೇಶದಲ್ಲಿ 50 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಳಿಸಲಾಯಿತು.

ಸೆಪ್ಟೆಂಬರ್ 13: 75 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣ.

ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ದೇಶದಲ್ಲಿ ಒಂದೇ ದಿನ 2.5 ಕೋಟಿ ಡೋಸ್ ಲಸಿಕೆ ನೀಡಿ ದಾಖಲೆ ನಿರ್ಮಾಣ.

ಅಕ್ಟೋಬರ್ 4: ಲಸಿಕೆ ತಲುಪಿಸಲು ‘ಐ-ಡ್ರೋನ್’ ವ್ಯವಸ್ಥೆ ಆರಂಭಿಸಿದ ಐಸಿಎಂಆರ್

ಅಕ್ಟೋಬರ್ 21: ದೇಶದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣ

ನವೆಂಬರ್ 3: ಲಸಿಕೆ ನೀಡಿಕೆಯನ್ನು ಎಲ್ಲರಿಗೂ ತಲುಪಿಸಲು ‘ಹರ್ ಘರ್ ದಸ್ತಕ್ ಯೋಜನೆ’ ಆರಂಭ

2022ರ ಜನವರಿ 3: 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭ

ಜನವರಿ 7: 150 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣ

ಜನವರಿ 10: ಕೊವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರಿಗೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ ಆರಂಭ

ಜನವರಿ 13: 3 ಕೋಟಿಗೂ ಅಧಿಕ ಮಕ್ಕಳಿಗೆ ಲಸಿಕೆ ನೀಡಿಕೆ ಪೂರ್ಣ

ಭಾರತದಲ್ಲಿ ಇದುವರೆಗೆ 40 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಬೂಸ್ಟರ್ ಡೋಸ್ ಪಡೆದಿದ್ದಾರೆ ಎಂದು ಸರ್ಕಾರದ ದಾಖಲೆಗಳಲ್ಲಿ ತಿಳಿಸಲಾಗಿದೆ. ಸಚಿವ ಮನ್​ಸುಖ್ ಮಾಂಡವೀಯ ದೇಶದ ಲಸಿಕಾ ಅಭಿಯಾನವನ್ನು ವಿಶ್ವದ ಅತ್ಯಂತ ವೇಗದ ಹಾಗೂ ಅತ್ಯಂತ ಯಶಸ್ವಿ ಅಭಿಯಾನ ಎಂದು ವ್ಯಾಖ್ಯಾನಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾನುವಾರ ಬೆಳಗ್ಗೆ 7 ಗಂಟೆಯವರೆಗೆ ಒಟ್ಟು 1,56,76,15,454 (156 ಕೋಟಿ) ಡೋಸ್ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 66 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ.

ಇದನ್ನೂ ಓದಿ:

Covid 19: ದೇಶದಲ್ಲಿ ಒಂದೇ ದಿನ 2,71,202 ಕೊರೊನಾ ಪ್ರಕರಣಗಳು ದಾಖಲು; ಸೋಂಕಿನಿಂದ 314 ಜನರ ಸಾವು

ಗದಗ ರಾಜೀವ್ ಗಾಂಧಿ ಆಯುರ್ವೇದ ಕಾಲೇಜಿನಲ್ಲಿ 30 ವಿದ್ಯಾರ್ಥಿಗಳಿಗೆ ಕೊರೊನಾ! ಹರಿಯಾಣದಿಂದ ಬಳ್ಳಾರಿಗೆ ಬಂದ ನೂರಾರು ವಿದ್ಯಾರ್ಥಿಗಳ

Published On - 12:23 pm, Sun, 16 January 22