ಸ್ವಿಸ್​ಬ್ಯಾಂಕ್​ಗಳಲ್ಲಿ ಹೊಸದಾಗಿ ಖಾತೆ ತೆರೆದಿರುವ ಭಾರತೀಯರೆಷ್ಟು?, ಬ್ಯಾಂಕ್ ನೀಡಿರುವ ವಿವರ ಇಲ್ಲಿದೆ

|

Updated on: Oct 10, 2023 | 12:13 PM

ಸ್ವಿಸ್​ ಬ್ಯಾಂಕ್(Swiss Bank)​ಗಳಲ್ಲಿರುವ ಭಾರತೀಯರ ಹೊಸ ಖಾತೆಗಳ ಬಗ್ಗೆ ಸ್ವಿಸ್ಜರ್​ಲೆಂಡ್ ಮಾಹಿತಿ ನೀಡಿದೆ. ಇದು ದ್ವಿಟ್ಜರ್​ಲೆಂಡ್ ಹಾಗೂ ಭಾರತದ ನಡುವಿನ ಐದನೇ ವಾರ್ಷಿಕ ಮಾಹಿತಿ ವಿನಿಮಯವಾಗಿದೆ. ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾದ ಹೊಸ ವಿವರಗಳು ನೂರಾರು ಖಾತೆಗಳಿಗೆ ಸಂಬಂಧಿಸಿದೆ, ಹಾಗೂ ಕೆಲವು ವ್ಯಕ್ತಿಗಳು, ಕಾರ್ಪೊರೇಟ್​ ಕಂಪನಿಗಳು, ಟ್ರಸ್ಟ್​ಗಳಿಗೆ ಸಂಬಂಧಿಸಿದ್ದಾಗಿದೆ. ಸ್ವಿಟ್ಜರ್​ಲೆಂಡ್ 104 ದೇಶಗಳೊಂದಿಗೆ ಸುಮಾರು 36 ಲಕ್ಷ ಖಾತೆಗಳ ವಿವರಗಳನ್ನು ಹಂಚಿಕೊಂಡಿದೆ. ವಿವರಗಳೇನು? ಭಾರತೀಯ ಅಧಿಕಾರಿಗಳೊಂದಿಗೆ ವ್ಯಕ್ತಿಗಳು, ಕಾರ್ಪೊರೇಟ್ ಕಂಪನಿಗಳು, ಟ್ರಸ್ಟ್​ಗಳ ಹೆಸರು, ವಿಳಾಸ, ವಾಸಿಸುವ ದೇಶ ಹಾಗೂ […]

ಸ್ವಿಸ್​ಬ್ಯಾಂಕ್​ಗಳಲ್ಲಿ ಹೊಸದಾಗಿ ಖಾತೆ ತೆರೆದಿರುವ ಭಾರತೀಯರೆಷ್ಟು?, ಬ್ಯಾಂಕ್ ನೀಡಿರುವ ವಿವರ ಇಲ್ಲಿದೆ
ಸ್ವಿಸ್ ಬ್ಯಾಂಕ್
Image Credit source: Millenium Post
Follow us on

ಸ್ವಿಸ್​ ಬ್ಯಾಂಕ್(Swiss Bank)​ಗಳಲ್ಲಿರುವ ಭಾರತೀಯರ ಹೊಸ ಖಾತೆಗಳ ಬಗ್ಗೆ ಸ್ವಿಸ್ಜರ್​ಲೆಂಡ್ ಮಾಹಿತಿ ನೀಡಿದೆ. ಇದು ದ್ವಿಟ್ಜರ್​ಲೆಂಡ್ ಹಾಗೂ ಭಾರತದ ನಡುವಿನ ಐದನೇ ವಾರ್ಷಿಕ ಮಾಹಿತಿ ವಿನಿಮಯವಾಗಿದೆ. ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾದ ಹೊಸ ವಿವರಗಳು ನೂರಾರು ಖಾತೆಗಳಿಗೆ ಸಂಬಂಧಿಸಿದೆ, ಹಾಗೂ ಕೆಲವು ವ್ಯಕ್ತಿಗಳು, ಕಾರ್ಪೊರೇಟ್​ ಕಂಪನಿಗಳು, ಟ್ರಸ್ಟ್​ಗಳಿಗೆ ಸಂಬಂಧಿಸಿದ್ದಾಗಿದೆ. ಸ್ವಿಟ್ಜರ್​ಲೆಂಡ್ 104 ದೇಶಗಳೊಂದಿಗೆ ಸುಮಾರು 36 ಲಕ್ಷ ಖಾತೆಗಳ ವಿವರಗಳನ್ನು ಹಂಚಿಕೊಂಡಿದೆ.

ವಿವರಗಳೇನು?
ಭಾರತೀಯ ಅಧಿಕಾರಿಗಳೊಂದಿಗೆ ವ್ಯಕ್ತಿಗಳು, ಕಾರ್ಪೊರೇಟ್ ಕಂಪನಿಗಳು, ಟ್ರಸ್ಟ್​ಗಳ ಹೆಸರು, ವಿಳಾಸ, ವಾಸಿಸುವ ದೇಶ ಹಾಗೂ ತೆರಿಗೆ, ಖಾತೆ ಹಾಗೂ ಹಣಕಾಸಿನ ವಿವರಗಳನ್ನು ಹಂಚಿಕೊಂಡಿದ್ದಾರೆ.
ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಸೇರಿದಂತೆ ಎಲ್ಲಾದರೂ ಈ ಹಣ ಬಳಕೆಯಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಅಧಿಕಾರಿಗಳು ಹೇಳಿದ್ದೇನು?
ಕಳೆದ ತಿಂಗಳು ವಿನಿಮಯ ನಡೆದಿದೆ, ಸ್ವಿಟ್ಜರ್​ಲೆಂಡ್​ 2024ರಲ್ಲಿ ಮತ್ತೆ ಮಾಹಿತಿಯನ್ನು ಹಂಚಿಕೊಳ್ಳಲಿದೆ ಈ ಮಾಹಿತಿಯ ಆಧಾರದ ಮೇಲೆ ತೆರಿಗೆದಾರರು ಮತ್ತು ಆದಾಯ ತೆರಿಗೆ ರಿಟರ್ನ್ಸ್​ನಲ್ಲಿ ತಮ್ಮ ಹಣಕಾಸು ಖಾತೆಗಳನ್ನು ಸರಿಯಾಗಿ ಘೋಷಿಸಿದ್ದಾರೆಯೇ ಎಂದು ಪರಿಶೀಲಿಸುವುದು ಅಧಿಕಾರಿಗಳಿಗೆ ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ: ಸ್ವಿಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯೋದು ಹೇಗೆ? ಎಷ್ಟು ಗೌಪ್ಯತೆ ಕಾಯ್ದುಕೊಳ್ಳಲಾಗುತ್ತದೆ? ಇಲ್ಲಿದೆ ಡೀಟೇಲ್ಸ್

ಸಿಟ್ಜರ್​ಲೆಂಡ್ಮ ರಾಜಧಾನಿ ಬರ್ನ್​ನಲ್ಲಿ ಫೆಡರಲ್ ಟ್ಯಾಕ್ಸ್​ ಅಡ್ಮಿನಿಸ್ಟ್ರೇಷನ್ ಹೊರಡಿಸಿರುವ ಹೇಳಿಕೆಯಲ್ಲಿ ಹಣಕಾಸು ಖಾತೆ ವಿವರಗಳನ್ನು ಜಾಗತಿಕ ಮಾನದಂಡದ ಚೌಕಟ್ಟಿನೊಳಗೆ 104 ದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ವರ್ಷ ಕಜಕಿಸ್ತಾನ, ಮಾಲ್ಡೀವ್ಸ್​ ಮತ್ತು ಓಮನ್ ಅನ್ನು ಹಿಂದಿನ 101 ದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಹಣಕಾಸು ಖಾತೆಗಳ ಸಂಖ್ಯೆ ಸುಮಾರು 2 ಲಕ್ಷದಷ್ಟು ಹೆಚ್ಚಾಗಿದೆ.

ಸ್ವಿಟ್ಜರ್ಲೆಂಡ್ ಸುಮಾರು 36 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು ಹಂಚಿಕೊಂಡಿದೆ. ಗಮನಾರ್ಹವಾಗಿ, ಇದು ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ಐದನೇ ಬಾರಿ ಮಾಹಿತಿ ವಿನಿಮಯವನ್ನು ನಡೆಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:13 pm, Tue, 10 October 23