ನವದೆಹಲಿ, ಮೇ 27: ಪ್ರಾಚೀನ ವಸ್ತುಗಳಿಗೆ (antiquities) ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಅಂತೆಯೇ ದಿನನಿತ್ಯವೂ ಭಾರತದ ಎಲ್ಲೋ ಒಂದು ಕಡೆಯಾದರೂ ದೇವಸ್ಥಾನ ಮತ್ತಿತರೆಡೆ ವಿಗ್ರಹ ಹಾಗೂ ಇನ್ನೇನಾದರೂ ಪುರಾತನ ವಸ್ತುಗಳ ಕಳ್ಳತನ ಆಗುತ್ತಲೇ ಇರುತ್ತವೆ. ಇವುಗಳನ್ನು ವಿದೇಶಗಳಿಗೆ ಸ್ಮಗ್ಲಿಂಗ್ ಮಾಡಲಾಗುತ್ತದೆ. ಅಮೆರಿಕದಲ್ಲಿ ಈ ರೀತಿ ಸ್ಮಗಲ್ ಆದ ವಸ್ತುಗಳನ್ನು ಆಯಾಯ ದೇಶಗಳಿಗೆ ಮರಳಿಸುವ ಪ್ರಯತ್ನಗಳಾಗುತ್ತಿರುತ್ತವೆ. ಕಳೆದ ವಾರ ನ್ಯೂಯಾರ್ಕ್ನ ಮನ್ಹಟನ್ ಜಿಲ್ಲೆಯ ಅಟಾರ್ನಿ ಕಚೇರಿಯಿಂದ ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ಕಳ್ಳತನಗೊಂಡ ಪ್ರಾಚೀನ ವಸ್ತುಗಳನ್ನು ಮರಳಿಸಲಾಯಿತು. ಪಾಕಿಸ್ತಾನ ದೇಶವೊಂದಕ್ಕೇ 133 ವಸ್ತುಗಳನ್ನು ಮರಳಿಸಲಾಗಿದೆ. ಇದೇ ಅಟಾರ್ನಿ ಕಚೇರಿಯಿಂದ ಕಳೆದ 10 ವರ್ಷದಲ್ಲಿ ಭಾರತಕ್ಕೆ 2,020 ಪ್ರಾಚೀನ ವಸ್ತುಗಳನ್ನು ಮರಳಿಸಲಾಗಿದೆ. ಬೇರೆಲ್ಲಾ ದೇಶಗಳಿಗೆ ಸಿಕ್ಕಿರುವುದಕ್ಕಿಂತ ಇದು ಹೆಚ್ಚು.
ಭಾರತ ಸರ್ಕಾರ ಹಾಗೂ ಕೆಲ ಭಾರತೀಯರು ತಮ್ಮ ದೇಶದಿಂದ ಕದ್ದು ಹೋದ ಪ್ರಾಚೀನ ವಸ್ತುಗಳನ್ನು ಮರಳಿ ತರಲು ನಿರಂತರ ಪ್ರಯತ್ನ ಮಾಡಿದ ಫಲಶ್ರುತಿ ಇದು. ನ್ಯೂಯಾರ್ಕ್ನ ಮನ್ಹಟನ್ ಡಿಸ್ಟ್ರಿಕ್ ಅಟಾರ್ನಿ ಕಚೇರಿಯಿಂದ ಕಳೆದ 10 ವರ್ಷದಲ್ಲಿ ಯಾವುದೇ ದೇಶಕ್ಕೆ ಮರಳಿಸಲಾದ ಅತಿಹೆಚ್ಚು ಪ್ರಾಚೀನ ವಸ್ತುಗಳು. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಇಟಲಿ ದೇಶಕ್ಕೆ 621 ವಸ್ತುಗಳು ಮರಳಿವೆ. ಆದರೆ, ಇಟಲಿಯ ಪ್ರಾಚೀನ ವಸ್ತುಗಳು ಅತಿ ಹೆಚ್ಚು ಮೌಲ್ಯದವಾಗಿವೆ. 80 ಮಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯದ 621 ಪ್ರಾಚೀನ ವಸ್ತುಗಳನ್ನು ಇಟಲಿ ಪಡೆದಿದೆ.
ಇದನ್ನೂ ಓದಿ: ಮಧ್ಯಂತರ ಜಾಮೀನು ಅವಧಿ ವಿಸ್ತರಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಅರವಿಂದ್ ಕೇಜ್ರಿವಾಲ್
ಆರ್ಥಿಕ ತಜ್ಞ ಹಾಗು ಬರಹಗಾರ ಸಂಜೀವ್ ಸಾನ್ಯಾಲ್ ಈ ವಿಚಾರವನ್ನು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಹಂಚಿಕೊಂಡಿದ್ದಾರೆ. ಭಾರತ 2,020 ಪ್ರಾಚೀನ ವಸ್ತುಗಳನ್ನು ಮರಳಿ ಪಡೆದಿದೆಯಾದರೂ ಅದರ ಒಟ್ಟು ಮೌಲ್ಯ ಸುಮಾರು 30 ಮಿಲಿಯನ್ ಡಾಲರ್ ಎನ್ನಲಾಗಿದೆ. ಲೆಬನಾನ್ ದೇಶ 16 ಪ್ರಾಚೀನ ವಸ್ತುಗಳನ್ನು ಮಾತ್ರವೇ ಪಡೆದಿದೆಯಾದರೂ ಅದರ ಮೌಲ್ಯ ಬರೋಬ್ಬರಿ 30 ಮಿಲಿಯನ್ ಡಾಲರ್ ಎನ್ನಲಾಗಿದೆ.
Look at how many stolen antiquities are now being retuned from NY alone over the last ten years. India leads in terms of the number of objects. It is also worth pointing out that very few antiquities were recovered prior to this from anywhere in the world. A big shoutout to… pic.twitter.com/DqBRAZUW7e
— Sanjeev Sanyal (@sanjeevsanyal) May 25, 2024
ಪಾಕಿಸ್ತಾನಕ್ಕೆ ಸುಮಾರು 20ರಿಂದ 25 ಮಿಲಿಯನ್ ಮೌಲ್ಯದ 475 ವಸ್ತುಗಳು ಕಳೆದ 10 ವರ್ಷಗಳಿಂದ ಮರಳಿವೆ. ಗಾಂಧಾರ ಕಾಲಘಟ್ಟದ ವಸ್ತುಗಳೂ ಕೂಡ ಇದರಲ್ಲಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ