ಲಸಿಕೆ ವಿತರಣೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಭಾರತ, ಈವರೆಗೆ ವಿತರಣೆ ಮಾಡಿದ್ದು 32 ಕೋಟಿ ಡೋಸ್

| Updated By: ರಶ್ಮಿ ಕಲ್ಲಕಟ್ಟ

Updated on: Jun 28, 2021 | 12:45 PM

Covid vaccine: ಭಾರತವು ಕೊವಿಡ್ 19 ವ್ಯಾಕ್ಸಿನೇಷನ್‌ನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಒಟ್ಟು ಕೊವಿಡ ಲಸಿಕೆ ಡೋಸ್‌ಗಳಲ್ಲಿ ಅಮೆರಿಕವನ್ನು ಹಿಂದಿಕ್ಕಿದೆ" ಎಂದು ಆರೋಗ್ಯ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.

ಲಸಿಕೆ ವಿತರಣೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಭಾರತ, ಈವರೆಗೆ ವಿತರಣೆ ಮಾಡಿದ್ದು 32 ಕೋಟಿ ಡೋಸ್
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಇಲ್ಲಿಯವರೆಗೆ ನೀಡಿರುವ ಒಟ್ಟು ಕೊವಿಡ್ ಲಸಿಕೆ ಡೋಸ್ ಸಂಖ್ಯೆಯಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಭಾರತವು ಇಲ್ಲಿಯವರೆಗೆ ಒಟ್ಟು 32,36,63,297 ಡೋಸ್‌ಗಳನ್ನು ನೀಡಿದ್ದರೆ, ಅಮೆರಿಕ 32,33,27,328 ಡೋಸ್‌ಗಳನ್ನು ವಿತರಿಸಿದೆ.

“ಭಾರತವು ಕೊವಿಡ್ 19 ವ್ಯಾಕ್ಸಿನೇಷನ್‌ನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಒಟ್ಟು ಕೊವಿಡ್ ಲಸಿಕೆ ಡೋಸ್‌ಗಳಲ್ಲಿ ಅಮೆರಿಕವನ್ನು ಹಿಂದಿಕ್ಕಿದೆ” ಎಂದು ಆರೋಗ್ಯ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.
ಅಮೆರಿಕದಲ್ಲಿ ಶೇ 46.5 ರಷ್ಟು ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ, ಅವರ್ ವರ್ಲ್ಡ್ ಇನ್ ಡಾಟಾ ಪ್ರಕಾರ, ಭಾರತವು ಈವರೆಗೆ ತನ್ನ ಜನಸಂಖ್ಯೆಯ ಶೇಕಡಾ 4 ರಷ್ಟು ಮಾತ್ರ ಲಸಿಕೆ ನೀಡಿದೆ. ಆದರೆ ಅಮೆರಿಕ ತನ್ನ ನಾಗರಿಕರಿಗೆ ಚುಚ್ಚುಮದ್ದು ನೀಡಲು ಪ್ರಾರಂಭಿಸಿದ ಸುಮಾರು ಒಂದು ತಿಂಗಳ ನಂತರ ಜನವರಿ 16 ರಂದು ಭಾರತ ತನ್ನ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಾರಂಭಿಸಿತು.


ಭಾರತದಲ್ಲಿ ಭಾನುವಾರ 17,21,268 ಲಸಿಕೆ ಡೋಸ್ ನೀಡಲಾಯಿತು.

ಏಪ್ರಿಲ್ 12 ರಿಂದ ಮೊದಲ ಬಾರಿಗೆ ದೈನಂದಿನ ಸಾವಿನ ಸಂಖ್ಯೆ 1,000 ಕ್ಕಿಂತ ಕಡಿಮೆ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 46,148 ಹೊಸ ಕೊವಿಡ್ -19 ಪ್ರಕರಣಗಳನ್ನು ವರದಿ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 979 ಸಾವುಗಳು ಸಂಭವಿಸಿದ್ದು, ಏಪ್ರಿಲ್ 12 ರಿಂದ ಮೊದಲ ಬಾರಿಗೆ ದೈನಂದಿನ ಸಾವಿನ ಸಂಖ್ಯೆ 1,000 ಕ್ಕಿಂತ ಕಡಿಮೆಯಾಗಿದೆ. 100 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದ ಏಕೈಕ ರಾಜ್ಯವಾದ ಮಹಾರಾಷ್ಟ್ರದಲ್ಲಿ 411 ಸಾವು ದಾಖಲಿಸಿದೆ. ಒಟ್ಟಾರೆ ಸಾವಿನ ಸಂಖ್ಯೆ 3,96,730 ಕ್ಕೆ ತಲುಪಿದೆ.

ದೈನಂದಿನ ಚೇತರಿಕೆ ಈಗ ಸತತ 46 ನೇ ದಿನಕ್ಕೆ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ, ರಾಷ್ಟ್ರವ್ಯಾಪಿ ಚೇತರಿಕೆ ಪ್ರಮಾಣವು ಪ್ರಸ್ತುತ ಶೇ 96.75ರಷ್ಟಿದೆ.

ದೇಶದ 20 ಜಿಲ್ಲೆಗಳಲ್ಲಿ ಒಟ್ಟು ಸಕ್ರಿಯ ಕೊವಿಡ್ ಪ್ರಕರಣ ಶೇ 40
75 ಜಿಲ್ಲೆಗಳು ಇನ್ನೂ 10% ಕ್ಕಿಂತ ಹೆಚ್ಚು ಸಕಾರಾತ್ಮಕತೆಯನ್ನು ಹೊಂದಿವೆ, ಆದರೆ 92 ಜಿಲ್ಲೆಗಳು 5-10% ನಡುವೆ ಸಕಾರಾತ್ಮಕತೆಯನ್ನು ಹೊಂದಿವೆ.
ಕೊವಿಡ್ -19 ರ ಒಟ್ಟು 5.95 ಲಕ್ಷ ಸಕ್ರಿಯ ಪ್ರಕರಣಗಳಲ್ಲಿ ಸುಮಾರು ಶೇ  40 ಪ್ರಕರಣಗಳು  20 ಜಿಲ್ಲೆಗಳಲ್ಲಿ ವರದಿ ಆಗಿದೆ.  ಮಹಾರಾಷ್ಟ್ರದ 12 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳು ಮತ್ತು ಕೇರಳದ ಐದು ಜಿಲ್ಲೆಗಳಲ್ಲಿಸೋಂಕು ಹೆಚ್ಚಿನ ಪ್ರಮಾಣದಲ್ಲಿದೆ.

ಖಾಸಗಿ ಲಸಿಕೆ ಡೋಸ್ ಶೇ 75 ನಷ್ಟಿದೆ
ಭಾರತದ ವಯಸ್ಕ ಜನಸಂಖ್ಯೆಯ ಕಾಲು ಭಾಗದಷ್ಟು (27%)  ಐದು ರಾಜ್ಯಗಳಲ್ಲಿ ಮುಕ್ಕಾಲು ಭಾಗದಷ್ಟು ಖಾಸಗಿ ಲಸಿಕೆ ಡೋಸ್  ಹೊಂದಿವೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ.
ಖಾಸಗಿ ಲಸಿಕೆ ಡೋಸ್ ಅತೀ ಹೆಚ್ಚು  ಪಡೆದಿರುವ ರಾಜ್ಯಗಳು, ಕರ್ನಾಟಕ, ಬಂಗಾಳ, ದೆಹಲಿ ಮತ್ತು ತೆಲಂಗಾಣ ಆಗಿದೆ.

ದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳು ಈಗ 3,02,79,331 ರಷ್ಟಿದೆ. ಪ್ರಸ್ತುತ 5,72,994 ಸಕ್ರಿಯ ಪ್ರಕರಣಗಳಿದ್ದು, 2,93,09,607 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯಗಳಲ್ಲಿ, ಕೇರಳ 10,905 ಹೊಸ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 9,974 ಪ್ರಕರಣಗಳಿವೆ.

ಇದನ್ನೂ ಓದಿ:  ಸಾಲು ಸಾಲು ಹೆಣ ಬಿದ್ರು ಬುದ್ಧಿ ಕಲಿಯದ ಚಾಮರಾಜನಗರ ಜಿಲ್ಲಾಡಳಿತ; ಕೊರೊನಾ ವಿಚಾರದಲ್ಲಿ ಕೇರ್ ಲೆಸ್

ಇದನ್ನೂ ಓದಿ:  Coronavirus cases in India: ದೇಶದಲ್ಲಿ 46,148 ಹೊಸ ಕೊವಿಡ್ ಪ್ರಕರಣ ಪತ್ತೆ, 979 ಮಂದಿ ಸಾವು

(India has overtaken the United States in the total number of Covid vaccine doses administered)