ನಮ್ಮ ನೆರೆಹೊರೆಯ ರಾಷ್ಟ್ರಗಳಲ್ಲೇ ಭಾರತ (India) ಒಂದು ಪ್ರಮುಖ ದೇಶವಾಗಿದೆ ಮತ್ತು ಆ ರಾಷ್ಟ್ರಕ್ಕೆ ತಾಲಿಬಾನಿ (Taliban Terrorists)ಗಳಿಂದ ಯಾವುದೇ ಅಪಾಯವಾಗಲಿ, ಬೆದರಿಕೆಯಾಗಲಿ ಖಂಡಿತ ಇಲ್ಲ ಎಂದು ತಾಲಿಬಾನ್ ವಕ್ತಾರ (Taliban Spokesperson) ಜಬಿಜುಲ್ಲಾ ಮುಜಾಹಿದ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನದೊಂದಿಗೆ ಭಾರತಕ್ಕೆ ಉತ್ತಮ ಬಾಂಧವ್ಯ ಇತ್ತು. ಅದೇ ರೀತಿಯ ಉತ್ತಮ ಸಂಬಂಧವನ್ನು ಹೊಂದಲು ತಾಲಿಬಾನ್ ಕೂಡ ಬಯಸುತ್ತದೆ ಎಂದಿದ್ದಾರೆ.
ಆಗಸ್ಟ್ 15ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ಅಂದಿನಿಂದಲೂ ಭಾರತವೂ ಕೂಡ ತಾಲಿಬಾನ್ ಬಗ್ಗೆ ಹೆಚ್ಚೇನೂ ಹೇಳಿಲ್ಲ. ಪ್ರಧಾನಿ ಮೋದಿಯವರಂತೂ ಒಂದೇ ಒಂದೂ ಮಾತನ್ನೂ ಇನ್ನೂ ಆಡಿಲ್ಲ. ವಿದೇಶಾಂಗ ವ್ಯವಹಾರ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಮಾತನಾಡಿದ್ದರೂ ಅಂಥ ಯಾವುದೇ ನಿರ್ಣಯಸಹಿತ ಮಾತುಗಳಲ್ಲ ಅವು. ಇನ್ನು ತಾಲಿಬಾನ್ ಕೂಡ ಪ್ರಾರಂಭದಿಂದಲೂ ಭಾರತದ ಬಗ್ಗೆ ಒಳ್ಳೆಯ ಒಲವು ತೋರಿಸುತ್ತಲೇ ಬಂದಿದೆ. ಕಾಶ್ಮೀರದ ವಿಚಾರದಲ್ಲಿ ನಾವು ತಲೆ ಹಾಕುವುದಿಲ್ಲ, ಅದು ಪಾಕ್-ಭಾರತ ಆಂತರಿಕ ವಿಚಾರವೆಂದೂ ಹೇಳಿಕೊಂಡಿದೆ. ಇದೀಗ ಜಬಿಜುಲ್ಲಾ ಮುಜಾಹಿದ್ ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ.
ಭಾರತದ ವಿರುದ್ಧ ಪಿತೂರಿ ಮಾಡುತ್ತಿರುವ ಪಾಕಿಸ್ತಾನಕ್ಕೆ ತಾಲಿಬಾನ್ ಬೆಂಬಲ ನೀಡುತ್ತಿದೆ ಎಂಬ ವರದಿಯ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಜಬಿಜುಲ್ಲಾ ಮುಜಾಹಿದ್, ಅದೆಲ್ಲ ಆಧಾರ ರಹಿತ ವರದಿಗಳು. ನಮ್ಮಿಂದ ಯಾವುದೇ ದೇಶಕ್ಕೂ ಅಪಾಯವಿಲ್ಲ. ಹಾಗೇ, ಅದೇ ಭರವಸೆಯನ್ನೇ ಭಾರತಕ್ಕೆ ಕೊಡುತ್ತೇವೆ. ನಾವು ತೊಂದರೆ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಉಲ್ಟಾ ಹೊಡೆದ್ರಾ ಜಬಿಜುಲ್ಲಾ?
ಇದೇ ಜಬಿಜುಲ್ಲಾ ಮುಜಾಹಿದ್ ಮೊನ್ನೆ ಆಗಸ್ಟ್ 26ರಂದು ತಾಲಿಬಾನಿಗಳು ಪಾಕಿಸ್ತಾನವನ್ನು ತಮ್ಮ ಎರಡನೇ ಮನೆಯಂತೆ ನೋಡುತ್ತೇವೆ ಎಂದಿದ್ದರು. ಅಫ್ಘಾನಿಸ್ತಾನ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದೆ. ಇನ್ನು ಧರ್ಮ, ಸಂಪ್ರದಾಯದ ವಿಚಾರದಲ್ಲೂ ನಾವು ತುಂಬ ಸಮಾನಾಂತರವಾಗಿದ್ದೇವೆ. ಹಾಗಾಗಿ ಪಾಕಿಸ್ತಾನದೊಂದಿಗೆ ನಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದರು.
ಲಸಿಕಾ ಅಭಿಯಾನ ಸಾಗುತ್ತಿರುವ ವೇಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಶಂಸಿದ್ದಾರೆ