ಅಮೆರಿಕದಿಂದ ಶೀಘ್ರದಲ್ಲೇ ಸ್ವದೇಶಕ್ಕೆ ಬರಲಿದೆ 1,440 ಕಲಾಕೃತಿ

|

Updated on: Oct 30, 2023 | 4:42 PM

ಅಮೆರಿಕ ತನ್ನ ಪ್ರಾಂತೀಯ ವಸ್ತುಸಂಗ್ರಹಾಲಯಗಳೊಂದಿಗೆ 1,440 ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಲು ಉತ್ಸುಕವಾಗಿದೆ. ಎಎಸ್‌ಐ ತಂಡ ಈಗಾಗಲೇ ನ್ಯೂಯಾರ್ಕ್‌ನಲ್ಲಿದೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ಅದು ನಮಗೆ ಸೇರಿದೆಯೇ ಮತ್ತು ಹಿಂಪಡೆಯಲು ಯೋಗ್ಯವಾಗಿದೆಯೇ ಎಂದು ನಾವು ಪರಿಶೀಲಿಸುತ್ತೇವೆ ಎಂದು ಅಧಿಕಾರಿ ಹೇಳಿದ್ದಾರೆ.

ಅಮೆರಿಕದಿಂದ ಶೀಘ್ರದಲ್ಲೇ ಸ್ವದೇಶಕ್ಕೆ ಬರಲಿದೆ 1,440 ಕಲಾಕೃತಿ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ ಅಕ್ಟೋಬರ್  30: ತನ್ನ ವಸ್ತುಸಂಗ್ರಹಾಲಯಗಳು ಅಥವಾ ಅಧಿಕಾರಿಗಳ ವಶದಲ್ಲಿರುವ 1,440 ಕಲಾಕೃತಿಗಳನ್ನು (artefacts) ಅಮೆರಿಕ (US) ಮರಳಿ ನೀಡಲಿದ್ದು ಭಾರತವು ವಿದೇಶದಿಂದ ತನ್ನ ಪ್ರಾಚೀನ ವಸ್ತುಗಳ ದೊಡ್ಡ ಸಂಗ್ರಹವನ್ನು ನಿರೀಕ್ಷಿಸುತ್ತಿದೆ. ಅವುಗಳ ಪುರಾತನ ಮೌಲ್ಯವನ್ನು ಪರಿಶೀಲಿಸಲು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ಯ ತಜ್ಞರ ತಂಡವನ್ನು ಈಗಾಗಲೇ ನ್ಯೂಯಾರ್ಕ್‌ಗೆ ಕಳುಹಿಸಲಾಗಿದೆ. ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಮಾತನಾಡಿ, ಇದು ದಶಕಗಳಿಂದ ರಾಜ್ಯಗಳ ವಿವಿಧ ಸ್ಥಳಗಳಿಂದ ಕದ್ದು ದೇಶದಿಂದ ಕಳ್ಳಸಾಗಣೆಯಾದ ಸಾಂಸ್ಕೃತಿಕ ಪರಂಪರೆಯ ವಸ್ತುಗಳನ್ನು ಹಿಂದಿರುಗಿಸುವಿಕೆಯಾಗಿದೆ ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ,

ಇದಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದ ಚಟುವಟಿಕೆಗಳು ನಡೆಯುತ್ತಿವೆ. ಅಮೆರಿಕ ತನ್ನ ಪ್ರಾಂತೀಯ ವಸ್ತುಸಂಗ್ರಹಾಲಯಗಳೊಂದಿಗೆ 1,440 ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಲು ಉತ್ಸುಕವಾಗಿದೆ. ಎಎಸ್‌ಐ ತಂಡ ಈಗಾಗಲೇ ನ್ಯೂಯಾರ್ಕ್‌ನಲ್ಲಿದೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ಅದು ನಮಗೆ ಸೇರಿದೆಯೇ ಮತ್ತು ಹಿಂಪಡೆಯಲು ಯೋಗ್ಯವಾಗಿದೆಯೇ ಎಂದು ನಾವು ಪರಿಶೀಲಿಸುತ್ತೇವೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ, ನಾವು ಅತ್ಯಂತ ವೇಗವಾಗಿ ಸಾಗುತ್ತಿದ್ದೇವೆ ಎಂದು ಮೋಹನ್ ಮಾಹಿತಿ ನೀಡಿದ್ದಾರೆ.

ಸ್ವಾತಂತ್ರ್ಯದ ನಂತರ, ಸುಮಾರು 350 ಪಾರಂಪರಿಕ ವಸ್ತುಗಳನ್ನು ಫ್ರಾನ್ಸ್, ಜರ್ಮನಿ, ಸಿಂಗಾಪುರ್, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ವಿವಿಧ ದೇಶಗಳಿಂದ ಮರಳಿ ತರಲಾಗಿದೆ. ಸಚಿವಾಲಯದ ಪ್ರಕಾರ, ಅಮೆರಿಕದಿಂದನಿಂದ ಸುಮಾರು 190 ಕಲಾಕೃತಿಗಳನ್ನು ಹಿಂಪಡೆಯಲಾಗಿದೆ. 2014 ರಿಂದ 1947 ರಿಂದ ಕೇವಲ 13 ವಸ್ತುಗಳನ್ನು ತರಲು ಸಾಧ್ಯವಾಗಿತ್ತು. ಈ ಹೆಚ್ಚಿನ ಕಲಾಕೃತಿಗಳನ್ನು ತಮಿಳುನಾಡಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕುಖ್ಯಾತ ಕಲಾ ವ್ಯಾಪಾರಿ ಸುಭಾಷ್ ಕಪೂರ್ ಕಳ್ಳಸಾಗಣೆ ಮಾಡಿದ್ದಾರೆ.

ಭಾರತೀಯ ಪುರಾತನ ವಸ್ತುಗಳನ್ನು ದೃಢೀಕರಿಸುವ ಮತ್ತೊಂದು ತಂಡ ಪ್ರಸ್ತುತ ಸಿಂಗಾಪುರದಲ್ಲಿದೆ ಎಂದು ಮೋಹನ್ ಮಾಹಿತಿ ನೀಡಿದ್ದಾರೆ. ಎಎಸ್ಐಯ ಪ್ರತ್ಯೇಕ ತಂಡಗಳು ಇತ್ತೀಚೆಗೆ ಲಂಡನ್, ಗ್ಲಾಸ್ಗೋ ಮತ್ತು ಬರ್ಮಿಂಗ್ಹ್ಯಾಮ್‌ನಲ್ಲಿರುವ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಿವೆ. “ಬ್ರಿಟಿಷ್ ಲೈಬ್ರರಿಯು ಭಾರತೀಯ ಹಸ್ತಪ್ರತಿಗಳ ಡಿಜಿಟೈಸ್ಡ್ ಆವೃತ್ತಿಗಳನ್ನು ತೆಗೆದುಕೊಳ್ಳಲು ನಮಗೆ ಅವಕಾಶ ನೀಡಿದೆ. ನಾವು ಶೀಘ್ರದಲ್ಲೇ ಅವರೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುತ್ತೇವೆ ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ: ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿ 22 ಜನರ ಸಾವಿಗೆ ಕಾರಣನಾದ ರಾಬರ್ಟ್​ ಕಾರ್ಡ್​ ಯಾರು?

ಲಂಡನ್‌ನಲ್ಲಿರುವ ರಾಷ್ಟ್ರೀಯ ಗ್ರಂಥಾಲಯವು ಆಧುನಿಕ ಪೂರ್ವ ಮತ್ತು ಆಧುನಿಕ ಕಾಲದ 10,000 ಕ್ಕೂ ಹೆಚ್ಚು ಸಂಸ್ಕೃತ ಮತ್ತು ಪಾಲಿ ಹಸ್ತಪ್ರತಿಗಳ ವ್ಯಾಪಕ ಸಂಗ್ರಹಗಳನ್ನು ಹೊಂದಿದೆ. ಎಎಸ್‌ಐಗೆ ಸೇರಿದ ಮಧ್ಯ ಏಷ್ಯಾದ ಪ್ರಾಚೀನ ವಸ್ತುಗಳ ಆರಲ್ ಸ್ಟೈನ್ ಸಂಗ್ರಹಕ್ಕೆ ಸೇರಿದ ಸುಮಾರು 700 ಕಲಾಕೃತಿ ಮರುಪಡೆಯಲು ಸಚಿವಾಲಯವು ಕೆಲಸ ಮಾಡುತ್ತಿದೆ ಎಂದು ಕಾರ್ಯದರ್ಶಿ ಹೇಳಿದರು. ಈ ಸಂಗ್ರಹವನ್ನು ಸುಮಾರು 100 ವರ್ಷಗಳ ಹಿಂದೆ ಲಂಡನ್‌ನಲ್ಲಿರುವ ವಿಕ್ಟೋರಿಯಾ ಮತ್ತು ಆಲ್ಬರ್ಟ್ (ಎಲ್ & ಎ) ಮ್ಯೂಸಿಯಂಗೆ ನೀಡಲಾಯಿತು.

ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ 31 ಸದಸ್ಯರ ಸಂಸದೀಯ ಸ್ಥಾಯಿ ಸಮಿತಿಯು ಇತ್ತೀಚೆಗೆ ಲಂಡನ್ ಮ್ಯೂಸಿಯಂನೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಮತ್ತು ಸಂಗ್ರಹವನ್ನು ಸ್ವದೇಶಕ್ಕೆ ಹಿಂದಿರುಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಭಾರತೀಯ ಪುರಾತತ್ವ ಸಮೀಕ್ಷೆಯನ್ನು ಕೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 4:37 pm, Mon, 30 October 23