ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿ 22 ಜನರ ಸಾವಿಗೆ ಕಾರಣನಾದ ರಾಬರ್ಟ್ ಕಾರ್ಡ್ ಯಾರು?
ಅಮೆರಿಕದಲ್ಲಿ ಬುಧವಾರ ರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 22 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕನಿಷ್ಠ 60 ಮಂದಿ ಗಾಯಗೊಂಡಿದ್ದಾರೆ. ಘಟನೆಯ ನಂತರ ಪೊಲೀಸರು ಬಂದೂಕು ಹಿಡಿದಿದ್ದ ಹಂತಕನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ದಾಳಿಕೋರನನ್ನು ರಾಬರ್ಟ್ ಕಾರ್ಡ್ ಎಂದು ಗುರುತಿಸಲಾಗಿದೆ, ಅಕ್ಕಪಕ್ಕದ ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಪೊಲೀಸರು ಸೂಚಿಸಿದ್ದಾರೆ.

ಶಂಕಿತ ದಾಳಿಕೋರನಿಗಾಗಿ ಪೊಲೀಸರು ಹಲವೆಡೆ ಶೋಧ ನಡೆಸುತ್ತಿದ್ದಾರೆ, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ 911ಗೆ ಮಾಹಿತಿ ನೀಡುವಂತೆ ಪೊಲೀಸರು ಸ್ಥಳೀಯರಿಗೆ ತಿಳಿಸಿದ್ದಾರೆ.
ರಾಬರ್ಟ್ ನಿವೃತ್ತ ಸೈನಿಕ
ಆರೋಪಿ ರಾಬರ್ಟ್ ಕಾರ್ಡ್ ಓರ್ವ ಮಾನಸಿಕ ಅಸ್ವಸ್ಥ, ಸೇನೆಯಲ್ಲಿ ತರಬೇತಿ ಪಡೆದಿದ್ದಷ್ಟೇ ಅಲ್ಲದೆ ಸೇವೆಯನ್ನು ಕೂಡ ಸಲ್ಲಿಸಿದ್ದಾರೆ, ಇದೀಗ ಕಳೆದ ಒಂದು ವರ್ಷದಿಂದ ಮಾನಸಿಕ ಅಸ್ವಸ್ಥತೆ ಕಾಡುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಿಕಿತ್ಸೆ ಅಥವಾ ಪ್ರಸ್ತುತ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಈ ಗುಂಡಿನ ದಾಳಿ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ನಡೆದಿದೆ. ಪೊಲೀಸರು ರಾಬರ್ಟ್ ಕಾರ್ಡ್ ಫೋಟೊವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು.
40 ವರ್ಷದ ಕಾರ್ಡ್ ಸೇನೆಯಿಂದ ನಿವೃತ್ತಿಯಾಗಿದ್ದು, ಕೌಟುಂಬಿಕ ಕಲಹ, ದೌರ್ಜನ್ಯ ಪ್ರಕರಣದಲ್ಲಿ ಅವರನ್ನು ಒಮ್ಮೆ ಬಂಧಿಸಲಾಗಿತ್ತು. ಈ ಅವರ ಮಾನಸಿಕ ಸ್ಥಿತಿ ಸರಿ ಇರಲಿಲ್ಲ, ಸೇನಾ ತರಬೇತಿ ನೆಲೆಯ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು, ನಂತರ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದರು.
ಮತ್ತಷ್ಟು ಓದಿ: ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ, 22 ಮಂದಿ ಸಾವು
ಅದಾದ ನಂತರಈಗ ಗುಂಡಿನ ದಾಳಿ ನಡೆಸಿದ್ದಾರೆ, ಬಳಿಕ ಬಿಳಿ ಬಣ್ಣದ ಕಾರನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ, ಆ ಚಿತ್ರವನ್ನು ಕೂಡ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಅಪಾಯಕಾರಿ ದಾಳಿಕೋರನನ್ನು ಶೀಘ್ರ ಹಿಡಿಯಲು ಇಲ್ಲಿನ ಜನರು ಪೊಲೀಸರ ಸೂಚನೆಗಳನ್ನು ಪಾಲಿಸಬೇಕು ಎಂದು ಪೊಲೀಸರು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೂ ಘಟನೆ ಕುರಿತು ಮಾಹಿತಿ ನೀಡಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Thu, 26 October 23