ಚುನಾವಣಾ ಪ್ರಚಾರದ ವೇಳೆ ಬಿಆರ್‌ಎಸ್ ಸಂಸದ ಕೋತಾ ಪ್ರಭಾಕರ್ ರೆಡ್ಡಿಗೆ ಚಾಕು ಇರಿತ
Telangana Assembly Elections 2023: ಮುಂಬರಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಪ್ರಚಾರದಲ್ಲಿ ತೊಡಗಿದ್ದ ಮೇದಕ್ನ ಸಂಸದ ಕೋತಾ ಪ್ರಭಾಕರ್ ರೆಡ್ಡಿ (Kotha Prabhakar Reddy)ಅವರ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ದುಬ್ಬಾಕದಿಂದ ಬಿಆರ್‌ಎಸ್ ಅಭ್ಯರ್ಥಿಯಾಗಿದ್ದ ಕೋತಾ ಪ್ರಭಾಕರ್ ರೆಡ್ಡಿ ಸೋಮವಾರ (ಅಕ್ಟೋಬರ್ 30) ಪ್ರಚಾರ ಮಾಡುವಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಮುಂಬರಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಪ್ರಚಾರದಲ್ಲಿ ತೊಡಗಿದ್ದ ಮೇದಕ್ನ ಸಂಸದ ಕೋತಾ ಪ್ರಭಾಕರ್ ರೆಡ್ಡಿ (Kotha Prabhakar Reddy)ಅವರ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ದುಬ್ಬಾಕದಿಂದ ಬಿಆರ್‌ಎಸ್ ಅಭ್ಯರ್ಥಿಯಾಗಿದ್ದ ಕೋತಾ ಪ್ರಭಾಕರ್ ರೆಡ್ಡಿ ಸೋಮವಾರ (ಅಕ್ಟೋಬರ್ 30) ಪ್ರಚಾರ ಮಾಡುವಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ದಾಳಿಯಲ್ಲಿ ಕೋತಾ ಪ್ರಭಾಕರ ರೆಡ್ಡಿ ಅವರ ಹೊಟ್ಟೆಗೆ ಗಂಭೀರ ಗಾಯಗಳಾಗಿವೆ. ಭದ್ರತಾ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಸಿದ್ದಿಪೇಟ್ ಜಿಲ್ಲೆಯ ದೌಲ್ತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಳೆದ ಚುನಾವಣೆಯಲ್ಲಿ ಮೇದಕ್‌ನಿಂದ ಸಂಸದರಾಗಿ ಗೆದ್ದಿದ್ದ ರೆಡ್ಡಿ, ಪ್ರಸ್ತುತ ದುಬ್ಬಾಕದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಬಿಫಾರ್ಮ್ ಪಡೆದಿರುವ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ, ಇಂದು ಬೆಳಗ್ಗೆ ಪಾದ್ರಿಯೊಬ್ಬರ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ದ ವೇಳೆ ರೆಡ್ಡಿ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿದ್ದಾನೆ.
Knife attack on BRS MP Kotha Prabhakar Reddy#TelanganaElections2023 pic.twitter.com/gCSmV0cwkD
— 🅺🅳🆁 (@KDRtweets) October 30, 2023
ಕಾರ್ಯಕರ್ತನ ವೇಷಧಾರಿ ವ್ಯಕ್ತಿಯೊಬ್ಬ ಪ್ರಭಾಕರ ರೆಡ್ಡಿ ಅವರ ಹತ್ತಿರ ಬಂದು ಕೈ ಕುಲುಕುವಂತೆ ನಟಿಸಿದ್ದಾನೆ. ಕೂಡಲೇ ಜೇಬಿನಿಂದ ಚಾಕು ಹೊರತೆಗೆದು ಸಂಸದರ ಹೊಟ್ಟೆಗೆ ಇರಿದಿದ್ದಾನೆ. ದಾಳಿಕೋರನನ್ನು ಬಿಆರ್‌ಎಸ್ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ. ಘಟನೆ ನಡೆದ ತಕ್ಷಣ ರೆಡ್ಡಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಅವರನ್ನು ಸಿಕಂದರಾಬಾದ್‌ನ ಯಶೋದಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಮತ್ತಷ್ಟು ಓದಿ: Chikkamagaluru News: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಅನ್ಯಕೋಮಿನ ಗುಂಪಿನಿಂದ ಚಾಕು ಇರಿತ
ಆರೋಪಿಯನ್ನು ದುಬ್ಬಾಕ ಕ್ಷೇತ್ರದ ಚೆಪ್ಯಾಳಕು ಗ್ರಾಮದ ರಾಜು ಎಂದು ಪೊಲೀಸರು ಗುರುತಿಸಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಕುಡಿತದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ.ಆತನಿಗೆ ಕೌಟುಂಬಿಕ ಸಮಸ್ಯೆಗಳಿದ್ದವು ಎಂದು ಸಿದ್ದಿಪೇಟೆ ಸಿಪಿ ಶ್ವೇತಾ ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ನಡೆದ ಈ ದಾಳಿಯು ಅಭ್ಯರ್ಥಿಗಳ ಭದ್ರತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Mon, 30 October 23