ಒಂದೊಮ್ಮೆ ರೈಲು ಅಪಘಾತವಾದ್ರೂ ಜೀವ ಉಳೀಬೇಕು ಅಂದ್ರೆ ಯಾವ ಬೋಗಿಯಲ್ಲಿ ನೀವು ಕುಳಿತುಕೊಳ್ಳುವುದು ಸುರಕ್ಷಿತ? ಇಲ್ಲಿದೆ ಮಾಹಿತಿ

ಬೇರೆಲ್ಲಾ ವಾಹನಗಳಿಗೆ ಹೋಲಿಸಿದರೆ ಪ್ರಯಾಣಕ್ಕೆ ರೈಲು ಉತ್ತಮ, ಟ್ರಾಫಿಕ್​ ಸಮಸ್ಯೆಗಳಿರುವುದಿಲ್ಲ, ಏರುತಗ್ಗುಗಳು ಇರುವುದಿಲ್ಲ, ಸಮಯ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸುರಕ್ಷಿತವಾಗಿ ತಲುಪುತ್ತೇವೆ ಎನ್ನುವ ನಂಬಿಕೆ. ಜತೆಗೆ ಹಣವೂ ಉಳಿಯುತ್ತೆ. ಆದರೆ ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭಾರಿ ರೈಲು ಅಪಘಾತದ ಬಳಿಕ ರೈಲು ಕೂಡ ಸುರಕ್ಷಿತವಲ್ಲವೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ.

ಒಂದೊಮ್ಮೆ ರೈಲು ಅಪಘಾತವಾದ್ರೂ ಜೀವ ಉಳೀಬೇಕು ಅಂದ್ರೆ ಯಾವ ಬೋಗಿಯಲ್ಲಿ ನೀವು ಕುಳಿತುಕೊಳ್ಳುವುದು ಸುರಕ್ಷಿತ? ಇಲ್ಲಿದೆ ಮಾಹಿತಿ
ರೈಲುImage Credit source: Metro Rail News
Follow us
ನಯನಾ ರಾಜೀವ್
|

Updated on: Oct 30, 2023 | 2:23 PM

ಬೇರೆಲ್ಲಾ ವಾಹನಗಳಿಗೆ ಹೋಲಿಸಿದರೆ ಪ್ರಯಾಣಕ್ಕೆ ರೈಲು ಉತ್ತಮ, ಟ್ರಾಫಿಕ್​ ಸಮಸ್ಯೆಗಳಿರುವುದಿಲ್ಲ, ಏರುತಗ್ಗುಗಳು ಇರುವುದಿಲ್ಲ, ಸಮಯ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸುರಕ್ಷಿತವಾಗಿ ತಲುಪುತ್ತೇವೆ ಎನ್ನುವ ನಂಬಿಕೆ. ಜತೆಗೆ ಹಣವೂ ಉಳಿಯುತ್ತೆ. ಆದರೆ ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭಾರಿ ರೈಲು ಅಪಘಾತದ ಬಳಿಕ ರೈಲು ಕೂಡ ಸುರಕ್ಷಿತವಲ್ಲವೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ.

ಆಂಧ್ರಪ್ರದೇಶದ ವಿಜಯನಗರಂನಲ್ಲಿ ಎರಡು ರೈಲುಗಳ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ಹಲವು ಬೋಗಿಗಳು ಹಳಿತಪ್ಪಿದವು. 14 ಪ್ರಯಾಣಿಕರು ಸಾವನ್ನಪ್ಪಿದರು ಮತ್ತು 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ, ಅಪಘಾತದ ನಂತರ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಸಿಲುಕಿದ್ದ ಜನರನ್ನು ಹೊರತೆಗೆದಿದೆ.

ವಿಶ್ವದ ಹಲವು ದೇಶಗಳ ಜೊತೆಗೆ ಭಾರತದಲ್ಲೂ ರೈಲುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಆದರೆ ರೈಲಿನ ಯಾವ ಭಾಗವು ಅಪಾಯದ ವಲಯದಲ್ಲಿ ಬರುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ? ಅಂದರೆ ರೈಲು ಅಪಘಾತಗಳ ಸಂದರ್ಭದಲ್ಲಿ ದೊಡ್ಡ ಅಪಾಯ ಎಲ್ಲಿದೆ?.

ಅಮೆರಿಕದ ಅನೇಕ ರಾಜ್ಯಗಳಲ್ಲಿ ರೈಲು ಅಪಘಾತಗಳು ಸಂಭವಿಸಿದ ನಂತರ, ರೈಲಿನ ಯಾವ ಭಾಗವು ಪ್ರಯಾಣಿಕರ ಗರಿಷ್ಠ ಸಾವುಗಳಿಗೆ ಕಾರಣವಾಯಿತು ಎಂದು ತನಿಖೆ ಮಾಡಲಾಯಿತು. ತನಿಖೆಯ ವೇಳೆ ಯಾವ ಭಾಗದಲ್ಲಿ ಹೆಚ್ಚಿನ ಅಪಾಯವಿದೆ, ಎಲ್ಲಿ ಅಪಾಯ ಕಡಿಮೆ ಮತ್ತು ಇದಕ್ಕೆ ಕಾರಣಗಳೇನು ಎಂಬುದು ತಿಳಿಯಿತು.

ಮತ್ತಷ್ಟು ಓದಿ: ಆಂಧ್ರಪ್ರದೇಶದಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಮಾನವ ಲೋಪ ಕಾರಣವೇ?

ರೈಲು ಬೋಗಿಯ ಈ ಭಾಗವು ಅತ್ಯಂತ ಸುರಕ್ಷಿತವಾಗಿದೆ

NBCnews ವರದಿಯಲ್ಲಿ, ವಕೀಲ ಲ್ಯಾರಿ ಮನ್ ಅಪಘಾತದ ಸಮಯದಲ್ಲಿ, ಸುರಕ್ಷಿತ ಭಾಗವು ರೈಲಿನ ಮಧ್ಯದಲ್ಲಿದೆ ಎಂದು ಹೇಳುತ್ತಾರೆ. ರೈಲಿನ ಮಧ್ಯದಲ್ಲಿರುವ ಬೋಗಿಗಳು ಅತ್ಯಂತ ಸುರಕ್ಷಿತ. ಇಲ್ಲಿ ಯಾರೊಬ್ಬರ ಸಾವು ಅಥವಾ ಗಾಯದ ಅಪಾಯವು ತುಂಬಾ ಕಡಿಮೆ.

ಫೆಡರಲ್ ರೈಲ್ವೇ ಸೇಫ್ಟಿ ಆಕ್ಟ್ ಪುಸ್ತಕದ ಲೇಖಕ ಲ್ಯಾರಿ, ರೈಲು ಅಪಘಾತ ಸಂಭವಿಸಿದಾಗ ರೈಲಿನ ಮುಂಭಾಗದ ಭಾಗವು ಹಾನಿಗೊಳಗಾಗುತ್ತದೆ ಅಥವಾ ರೈಲು ಹಿಂಬದಿಯಿಂದ ಬೇರೆ ರೈಲುಗಳು ಡಿಕ್ಕಿ ಹೊಡೆದರೂ ಕೂಡ ಒಣದೆರಡು ಬೋಗಿಗಳು ಹಳಿ ತಪ್ಪಿದರೂ ಮಧ್ಯದ ಭಾಗಕ್ಕೆ ಅಪಾಯ ಕಡಿಮೆ ಎಂದು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯದ ಬೋಗಿಯಲ್ಲಿ ಕುಳಿತ ಪ್ರಯಾಣಿಕರೇ ಸುರಕ್ಷಿತರು.

ಲ್ಯಾರಿ ಪ್ರಕಾರ, ತನಿಖೆಯಲ್ಲಿ ಸತ್ತ ಮತ್ತು ಗಾಯಗೊಂಡವರ ಸಂಖ್ಯೆ ಮತ್ತು ಕುಳಿತುಕೊಳ್ಳುವ ಸ್ಥಳವನ್ನು ನೋಡಿದಾಗ, ಅನೇಕ ವಿಷಯಗಳು ಬೆಳಕಿಗೆ ಬಂದವು. ಭೀಕರ ಅಪಘಾತದಲ್ಲೂ ರೈಲಿನ ಮಧ್ಯೆ ಕುಳಿತಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

ನೀವೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಮಧ್ಯದ ಬೋಗಿಗಳಲ್ಲಿ ಪ್ರಯಾಣಿಸುವುದು ಸುರಕ್ಷಿತ ಆಯ್ಕೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಹೌರಾ-ಚೆನ್ನೈ ಮಾರ್ಗದ ವಿಜಯನಗರಂದಲ್ಲಿ ಅಪಘಾತ ಸಂಭವಿಸಿದೆ. ವಿಶಾಖಪಟ್ಟಣಂ-ರಾಯಗಡ ಪ್ಯಾಸೆಂಜರ್ ವಿಶೇಷ ರೈಲು ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಾಗ ಈ ಅವಘಡ ಸಂಭವಿಸಿದೆ.

ಎರಡೂ ರೈಲುಗಳಿಗೆ ತೀವ್ರ ಹಾನಿಯಾಗಿದೆ. ಐದು ಬೋಗಿಗಳು ಹಳಿತಪ್ಪಿದವು. ಇದರಲ್ಲಿ 14 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ.

ಒಂದು ರೈಲಿನ ಹಿಂದಿನ ಭಾಗದಲ್ಲಿ ಮತ್ತು ಇನ್ನೊಂದು ರೈಲಿನ ಮುಂಭಾಗದಲ್ಲಿ ಗರಿಷ್ಠ ಹಾನಿಯಾಗಿರುವುದನ್ನು ಕಾಣಬಹುದು. ಮಧ್ಯದ ಬೋಗಿಗಳು ಸುರಕ್ಷಿತವಾಗಿವೆ. ಮಾನವ ಲೋಪದಿಂದ ಈ ಅವಘಡ ಸಂಭವಿಸಿದೆ ಎಂದು ವರದಿಗಳು ಹೇಳಿವೆ.

ಇದರಲ್ಲಿ ರೈಲು ಸಿಗ್ನಲ್ ಮೀರಿ ಹೋಗಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಹಿಂದಿನಿಂದ ಡಿಕ್ಕಿ ಹೊಡೆದ ರೈಲಿನ ಲೋಕೊಪೈಲಟ್ ಸಿಗ್ನಲ್ ಅನ್ನು ತಪ್ಪಿಸಿಕೊಂಡಿದ್ದರು, ಇದರಿಂದಾಗಿ ನಿಧಾನವಾಗಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ಚಿತ್ರಗಳನ್ನು ನೋಡಿದರೆ ಎರಡೂ ರೈಲುಗಳು ಡಿಕ್ಕಿಯಾಗಿ ಜಖಂಗೊಂಡಿರುವುದು ಸ್ಪಷ್ಟವಾಗಿದೆ. ಒಂದು ಕಂಪಾರ್ಟ್‌ಗೆ ತೀವ್ರ ಹಾನಿಯಾಗಿದೆ. ಅಪಘಾತದ ವೇಳೆ ರೈಲಿನಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು