AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake death certificate: ಆಸ್ತಿಗಾಗಿ ಪತ್ನಿ ಮೃತಪಟ್ಟಿದ್ದಾಳೆ ಎಂದು ಕತೆ ಕಟ್ಟಿದ ಕಾನ್ಸ್‌ಟೆಬಲ್, ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದ, ಆ ಮೇಲೆ?

Property: ಮಕ್ಕಳು ಬೆಳೆದಂತೆ, ಪತ್ನಿ ಮಾಧವಿ ತನ್ನ ಇಬ್ಬರು ಪುತ್ರರೊಂದಿಗೆ ಗುಂಟೂರಿನಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ಪತ್ನಿ ಮತ್ತು ಪತಿ ಒಟ್ಟಿಗೆ ಇದ್ದಾಗ ಪತ್ನಿ ಮಾಧವಿ ನಂದ್ಯಾಲ ಜಿಲ್ಲೆಯ ರೈತನಗರದಲ್ಲಿ ನಾಲ್ಕು ಸೆಂಟ್ಸ್ ಜಮೀನು ಹೊಂದಿದ್ದರು.

Fake death certificate: ಆಸ್ತಿಗಾಗಿ ಪತ್ನಿ ಮೃತಪಟ್ಟಿದ್ದಾಳೆ ಎಂದು ಕತೆ ಕಟ್ಟಿದ ಕಾನ್ಸ್‌ಟೆಬಲ್, ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದ, ಆ ಮೇಲೆ?
ಆಸ್ತಿಗಾಗಿ ಪತ್ನಿ ಮೃತಪಟ್ಟಿದ್ದಾಳೆ ಎಂದು ಕತೆ ಕಟ್ಟಿದ ಕಾನ್ಸ್‌ಟೆಬಲ್
TV9 Web
| Edited By: |

Updated on: Oct 30, 2023 | 1:37 PM

Share

ಮಂಗಳಗಿರಿ, ಅಕ್ಟೋಬರ್ 30: ಕಾನೂನು ಪ್ರಕಾರ ನಡೆದುಕೊಳ್ಳಬೇಕಾದ ಕಾನ್ಸ್‌ಟೆಬಲ್ ಒಬ್ಬರು ಪತ್ನಿಯ ಹೆಸರಲ್ಲಿದ್ದ ಜಮೀನನ್ನು, ಪತ್ನಿಯ ನಕಲಿ ಮರಣ ಪ್ರಮಾಣ ಪತ್ರ (fake death certificate) ಹಾಗೂ ಪತ್ನಿಯ (wife) ಕುಟುಂಬ ಸಂಖ್ಯೆ ಪ್ರಮಾಣ ಪತ್ರವನ್ನು ನಕಲಿ ಮಾಡಿ ಬೇರೆಯವರಿಗೆ ಮಾರಾಟ ಮಾಡಿರುವ ಘಟನೆ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ. ಮಂಗಳಗಿರಿ ಎಪಿಎಸ್‌ಪಿ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ (Constable) ಆಗಿ ಕಾರ್ಯನಿರ್ವಹಿಸುತ್ತಿರುವ ಶಿವಶಂಕರ್ 16 ವರ್ಷಗಳ ಹಿಂದೆ ಮಾಧವಿ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ಶಿವಶಂಕರ್ (husband) ಹಾಗೂ ಮಾಧವಿ ನಡುವೆ ಮನಸ್ತಾಪ ಉಂಟಾಗಿತ್ತು. ಹಾಗಾಗಿ ಪತಿ-ಪತ್ನಿ ಬೇರೆಯಾಗಿದ್ದರು.

ಮಕ್ಕಳು ಬೆಳೆದಂತೆ, ಪತ್ನಿ ಮಾಧವಿ ತನ್ನ ಇಬ್ಬರು ಪುತ್ರರೊಂದಿಗೆ ಗುಂಟೂರಿನಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ಪತ್ನಿ ಮತ್ತು ಪತಿ ಒಟ್ಟಿಗೆ ಇದ್ದಾಗ ಪತ್ನಿ ಮಾಧವಿ ನಂದ್ಯಾಲ ಜಿಲ್ಲೆಯ ರೈತನಗರದಲ್ಲಿ ನಾಲ್ಕು ಸೆಂಟ್ಸ್ ಜಮೀನು ಹೊಂದಿದ್ದರು. ಈಗ ಜಮೀನಿನ ಮೌಲ್ಯ ಲಕ್ಷಗಟ್ಟಲೆ ಇದ್ದು, ಪತ್ನಿಗೆ ಸಿಗಬಾರದು ಎಂಬ ಕಾರಣಕ್ಕೆ ಗಿಡ್ಡಲೂರಿನ ಕೆಲ ಮಧ್ಯವರ್ತಿಗಳನ್ನು ಸಂಪರ್ಕಿಸಿದ ಶಿವಶಂಕರ್, ನಕಲಿ ಪ್ರಮಾಣ ಪತ್ರ ಸಿದ್ಧಪಡಿಸಿದ್ದಾರೆ.

Also Read: ಆಸ್ತಿ ಕಬಳಿಸಲು ಬದುಕಿದ ವೃದ್ಧೆ ಮರಣ ಪ್ರಮಾಣ ಪತ್ರ ಮಾಡಿಸಿದ ಸಂಬಂಧಿಕರು, ದೂರು ದಾಖಲಿಸಿದ ಮಗ

ಮಾಧವಿ ಗಿದ್ದಲೂರಿನಲ್ಲಿ ವಾಸ ಇಲ್ಲ. ಮಾಧವಿ 2019 ರಲ್ಲಿ ಮೃತಪಟ್ಟಿದ್ದಾರೆ ಎಂದು ಕೇಳಿದ ತಕ್ಷಣ ಗಿಡ್ಡಲೂರು ನಗರ ಪಂಚಾಯತ್ ಅಧಿಕಾರಿಗಳು ಯಾವುದೇ ತನಿಖೆ ನಡೆಸದೆ ಮರಣ ಪ್ರಮಾಣ ಪತ್ರ ಮತ್ತು ಕುಟುಂಬ ಪ್ರಮಾಣಪತ್ರವನ್ನು ನೀಡಿದ್ದಾರೆ. ಈ ಎರಡು ಪ್ರಮಾಣ ಪತ್ರಗಳ ಆಧಾರದ ಮೇಲೆ ಕಾನ್‌ಸ್ಟೆಬಲ್ ಶಿವಶಂಕರ್ ಅವರು ತಾನೇ ವಾರಸುದಾರ ಎಂದು ಹೇಳಿಕೊಂಡು ಆಸ್ತಿಯನ್ನು ಇತರರಿಗೆ ಮಾರಾಟ ಮಾಡಿದ್ದಾರೆ.

Also Read: ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ, ಒಬ್ಬೊಬ್ಬರೇ ಓಡಾಡದಂತೆ K.R.ಪುರಂ ಅರಣ್ಯಾಧಿಕಾರಿಗಳಿಂದ ಅನೌನ್ಸ್​

ಈ ವಿಷಯ ತಿಳಿದ ಪತ್ನಿ ಮಾಧವಿ ನ್ಯಾಯಕ್ಕಾಗಿ ನಂದ್ಯಾಲ ತಾಲೂಕು ನಗರ ಪೊಲೀಸರ ಮೊರೆ ಹೋಗಿದ್ದಾರೆ. ಮಾಧವಿ ಅವರ ದೂರಿನ ಮೇರೆಗೆ ಪೊಲೀಸರು ಕಾನ್‌ಸ್ಟೆಬಲ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಾನ್‌ಸ್ಟೆಬಲ್ ಶಿವಶಂಕರ್ ತಲೆಮರೆಸಿಕೊಂಡಿದ್ದಾರೆ. ಇದು ಜಿಲ್ಲಾ ಪೊಲೀಸ್‌ ಅಧಿಕಾರಿಗಳು ಆಕ್ರೋಶಕ್ಕೆ ಗುರಿಯಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ