ಹಾಸನ: ಆಸ್ತಿ ಕಬಳಿಸಲು ಬದುಕಿದ ವೃದ್ಧೆ ಮರಣ ಪ್ರಮಾಣ ಪತ್ರ ಮಾಡಿಸಿದ ಸಂಬಂಧಿಕರು, ದೂರು ದಾಖಲಿಸಿದ ಮಗ

ಆಸ್ತಿ ಕಬಳಿಸುವ ಉದ್ದೇಶದಿಂದ ಆರೋಪಿಗಳು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ಬೇಲೂರು ತಹಶೀಲ್ದಾರ್ ಕಚೇರಿಯಿಂದಲೇ ಬದುಕಿರುವ ವೃದ್ಧೆಯ ಮರಣ ಪತ್ರ ಪಡೆದಿದ್ದಾರೆ.

ಹಾಸನ: ಆಸ್ತಿ ಕಬಳಿಸಲು ಬದುಕಿದ ವೃದ್ಧೆ ಮರಣ ಪ್ರಮಾಣ ಪತ್ರ ಮಾಡಿಸಿದ ಸಂಬಂಧಿಕರು, ದೂರು ದಾಖಲಿಸಿದ ಮಗ
ವೃದ್ಧೆ ಪಾರ್ವತಮ್ಮ
Follow us
ಆಯೇಷಾ ಬಾನು
| Updated By: ಪೃಥ್ವಿಶಂಕರ

Updated on:May 25, 2023 | 6:38 PM

ಹಾಸನ: ಆಸ್ತಿ(Property) ಕಬಳಿಸುವ ಉದ್ದೇಶದಿಂದ ಬದುಕಿರುವ ವೃದ್ದೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ(Death Certificate) ಮಾಡಿಸಿರುವ ಆರೋಪ ಕೇಳಿಬಂದಿದೆ. ಆಸ್ತಿ ಕಬಳಿಸುವ ಉದ್ದೇಶದಿಂದ ಆರೋಪಿಗಳು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ಬೇಲೂರು ತಹಶೀಲ್ದಾರ್ ಕಚೇರಿಯಿಂದಲೇ ಬದುಕಿರುವ ವೃದ್ಧೆಯ ಮರಣ ಪತ್ರ ಪಡೆದಿದ್ದಾರೆ.

ಮುದಿಗೆರೆ ಗ್ರಾಮದ ದಿವಂಗತ ಹುಲೀಗೌಡ ಎಂಬುವವರ ಪತ್ನಿ ಪಾರ್ವತಮ್ಮಗೆ ಸೇರಿದ 32 ಗುಂಟೆ ಜಮೀನು ಪಡೆದುಕೊಳ್ಳಲೆಂದು ಸುಳ್ಳು ದಾಖಲೆಯನ್ನು ಸೃಷ್ಟಿಮಾಡಿ ವೃದ್ಧೆಯ ಸಂಬಂಧಿಕರ ಪುತ್ರರಾದ ಸೋಮಶೇಖರ್ ಮತ್ತು ದಿನೇಶ್ ವೃದ್ದೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 2020 ಏಪ್ರಿಲ್ 10 ಪಾರ್ವತಮ್ಮ ಮೃತಪಟ್ಟಿದ್ದಾರೆ ಎಂದು ಏಪ್ರಿಲ್ 20 ರಂದು ನೋಂದಣಿ ಮಾಡಿಸಿದ್ದಾರೆ. ನಂತರ ಅಕ್ಟೋಬರ್ 14 ರಂದು ಪಾರ್ವತಮ್ಮ ಹೆಸರಿಲ್ಲಿ ಬೇಲೂರು ತಹಸಿಲ್ದಾರ್ ಕಚೇರಿಯಿಂದಲೇ ಮರಣ ದೃಢೀಕರಣ ಪತ್ರವನ್ನು ಪಡೆದು ಜೀವನಾಂಶಕ್ಕೆಂದು ಇಟ್ಟುಕೊಂಡಿದ್ದ 32 ಗುಂಟೆ ಜಮೀನನ್ನು ತನ್ನದಾಗಿಸಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ದಯಾಮರಣ ಕೋರಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಆಟೋ ಚಾಲಕ ಪತ್ರ, ಕಾರಣ ಏನು?

ಇನ್ನು ಮಕ್ಕಳಿಗೆ ಆಸ್ತಿ ಹಂಚಿ ತಮ್ಮ ಜೀವನಾಂಶಕ್ಕೆ 32 ಗುಂಟೆ ಜಮೀನನ್ನ ಇಟ್ಕೊಂಡಿದ್ದ ಪಾರ್ವತಮ್ಮ ಬೇರೆ ಗ್ರಾಮದಲ್ಲಿ ಬೇಕರಿ ವ್ಯಾಪಾರ ಮಾಡಿಕೊಂಡಿದ್ದರು, ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಫೇಕ್ ಸರ್ಟಿಫಿಕೇಟ್ ಮಾಡಿಕೊಂಡಿರುವ ಬಗ್ಗೆ ಪಾರ್ವತಮ್ಮ ಕುಟುಂಬದವರಿಗೆ ತಿಳಿದು ಬಂದಿದ್ದು, ನಂತರ ಬೇಲೂರು ತಹಸಿಲ್ದಾರ್ ಕಚೇರಿಗೆ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ವತಮ್ಮ ಅವರ ಪುತ್ರ ಮಲ್ಲೇಶ್ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ನಾವು ಕುಟುಂಬ ಸಮೇತ ವ್ಯವಹಾರದ ಸಲುವಾಗಿ ಹೊರ ಜಿಲ್ಲೆಯಲ್ಲಿ ನೆಲೆಸಿದ್ದೇವೆ, ವಾರದ ಹಿಂದೆ ಊರಿಗೆ ಬಂದಾಗ ನಮ್ಮ ತಾಯಿ ಹೆಸರಿನ ಭೂಮಿಯ ಖಾತೆ ಬದಲಾವಣೆಗೆ ಅರ್ಜಿ ಬಂದಿರೊ ಬಗ್ಗೆ ಮಾಹಿತಿ ತಿಳಿದು ತಾಲ್ಲೂಕು ಕಛೇರಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ, ನಮ್ಮ ಭೂಮಿಯನ್ನ ಲಪಟಾಯಿಸಲು ನಮ್ಮ ತಾಯಿಯನ್ನು ಅವರ ತಾಯಿ ಎಂದು ದೃಡೀಕರಿಸಿ ಮರಣ ಪ್ರಮಾಣಪತ್ರ ಮಾಡಿಸಿದ್ದಾರೆ ಈ ಬಗ್ಗೆ ಸೂಕ್ತ ಕ್ರಮ ಆಗಲಿ ಎಂದು ದೂರುದಾರ ಪಾರ್ವತಮ್ಮ ಪುತ್ರ ಮಲ್ಲೇಶ ಮನವಿ ಮಾಡಿದ್ದಾರೆ.

ಹಾಸನ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:56 pm, Thu, 25 May 23

‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್