ಉತ್ತರ ಪ್ರದೇಶ: 21 ವರ್ಷಗಳ ಹಿಂದೆ ಬಾಲಕಿ ಮೇಲೆ ನಡೆದಿತ್ತು ಆ್ಯಸಿಡ್ ದಾಳಿ, ಈಗ ಆರೋಪಿಯ ಬಂಧನ
ಉತ್ತರ ಪ್ರದೇಶದ ಅಲಿಗಢದಲ್ಲಿ 14 ವರ್ಷದ ಬಾಲಕಿಯ ಮೇಲೆ ಆ್ಯಸಿಡ್ ದಾಳಿ(Acid Attack) ನಡೆಸಿದ ಆರೋಪದ ಮೇಲೆ 21 ವರ್ಷಗಳ ಬಳಿಕ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 2023ರ ಜನವರಿಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಾದ ಅಂದಿನ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ರಾಜೀವ್ ಕೃಷ್ಣ ಅವರ ಮಧ್ಯಸ್ಥಿಕೆಯಿಂದಾಗಿ ಬಂಧನ ಸಾಧ್ಯವಾಗಿದೆ.

ಸಂತ್ರಸ್ತೆಗೆ ಈಗ 35 ವರ್ಷ, ಸೆಪ್ಟೆಂಬರ್ 2002 ರಲ್ಲಿ ಆಸಿಡ್ ದಾಳಿಗೆ ಒಳಗಾದಾಗ ಆಕೆಗೆ ಕೇವಲ 14 ವರ್ಷ. ಆರೋಪಿ ಆರಿಫ್ ಆಕೆಯ ಸೋದರ ಮಾವ. ಆರೀಫ್ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು, ಆಕೆಯ ಮುಖ ಮತ್ತು ದೇಹಕ್ಕೆ ತೀವ್ರ ಸುಟ್ಟ ಗಾಯಗಳಾಗಿತ್ತು. ಇದು ದೊಡ್ಡ ಅಪರಾಧವಾಗಿದ್ದರೂ, ಆಕೆಯ ಕುಟುಂಬವು ಮೌನವಾಗಿಯೇ ಇತ್ತು, ಆ ಸಮಯದಲ್ಲಿ ಆರಿಫ್ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ.
ಆಕೆ ಆ್ಯಸಿಡ್ ದಾಳಿಯಿಂದ ಬದುಕುಳಿದವರೇ ಇರುವ ಕೆಫೆಯೊಂದರಲ್ಲಿ ಕೆಲಸ ಕೆಲಸ ಮಾಡಲು ಆರಂಭಿಸಿದಳು. 2022ರ ಡಿಸೆಂಬರ್‌ನಲ್ಲಿ ಎಡಿಜಿ ರಾಜೀವ್ ಕೃಷ್ಣ ಅವರು ಕೆಫೆಗೆ ಭೇಟಿ ನೀಡಿದಾಗ ರುಕೈಯಾ ಅವರು ತಮ್ಮ ಕಷ್ಟವನ್ನು ಹಂಚಿಕೊಳ್ಳಲು ಧೈರ್ಯ ಮಾಡಿದ್ದರು. ಆಕೆಯ ಕಥೆಯಿಂದ ಪ್ರೇರಣೆ ಪಡೆದ ಕೃಷ್ಣ, ಅವರಿಗೆ ಭರವಸೆ ನೀಡಿ, ಆರಿಫ್ ವಿರುದ್ಧ ಪ್ರಕರಣವನ್ನು ದಾಖಲಿಸಲು ಆದೇಶಿಸಿದರು.
ಮತ್ತಷ್ಟು ಓದಿ: Viral Video: ಎಸಿಡ್ ದಾಳಿ; ‘ಅವರು ಕಣ್ಣಿಟ್ಟಿದ್ದು ನನ್ನ ಸ್ನೇಹಿತೆಯ ಮೇಲೆ, ಗುರಿಯಾಗಿದ್ದು ನಾನು’
ಕೃಷ್ಣ ಅವರ ಮಧ್ಯಸ್ಥಿಕೆಯಿಂದ, ಜನವರಿ 2023 ರಲ್ಲಿ IPC ಸೆಕ್ಷನ್ 326A ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಯಿತು. ನಂತರ ಪ್ರಕರಣವನ್ನು ಅಲಿಘಢದ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಆರೋಪಿಯನ್ನು ಅಕ್ಟೋಬರ್ 27 ರಂದು ಬಂಧಿಸಲಾಯಿತು ಮತ್ತು ಮರುದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Mon, 30 October 23