ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 18,454 ಹೊಸ ಪ್ರಕರಣಗಳು ದಾಖಲಾದ ನಂತರ ಭಾರತವು ತನ್ನ ದೈನಂದಿನ ಕೊರೊನಾವೈರಸ್ ಪ್ರಕರಣಗಳಲ್ಲಿ ಏರಿಕೆಯನ್ನು ಕಂಡಿದೆ. ಇದು ನಿನ್ನೆಗಿಂತ ಶೇ 26 ರಷ್ಟು ಅಧಿಕವಾಗಿದೆ. ಈವರೆಗೆ 34,127,450 ಕೊವಿಡ್ ಪ್ರಕರಣಗಳು ದೇಶದಲ್ಲಿವೆ. 160 ಸಾವು ಪ್ರಕರಣಗಳೊಂದಿಗೆ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 4,52,811 ಕ್ಕೆ ಏರಿದೆ. ಹೊಸ ಕೊರೊನಾವೈರಸ್ ಸೋಂಕಿನ ದೈನಂದಿನ ಏರಿಕೆ 27 ದಿನಗಳವರೆಗೆ 30,000 ಕ್ಕಿಂತ ಕಡಿಮೆಯಿದೆ ಮತ್ತು 50,000 ಕ್ಕಿಂತ ಕಡಿಮೆ ದೈನಂದಿನ ಪ್ರಕರಣಗಳು ಸತತ 116 ದಿನಗಳವರೆಗೆ ವರದಿಯಾಗಿವೆ.24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ 733 ಪ್ರಕರಣಗಳ ಹೆಚ್ಚಳ ದಾಖಲಾಗಿದೆ. ಭಾರತದಲ್ಲಿ 100 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಇದು ಕೊವಿಡ್ -19 ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲುಗಲ್ಲು ಆಗಿದೆ. ಚೇತರಿಕೆಯ ದರವು ಪ್ರಸ್ತುತ ಶೇಕಡಾ 98.15 ರಷ್ಟಿದ್ದು, ಇದು ಕಳೆದ ವರ್ಷದ ಮಾರ್ಚ್‌ನಿಂದ ಗರಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 17,561 ಜನರು ಚೇತರಿಸಿಕೊಂಡಿದ್ದಾರೆ. ಚೇತರಿಸಿಕೊಂಡ ಒಟ್ಟು ಜನರ ಸಂಖ್ಯೆ 3,34,95,808. ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ, ಪ್ರಸ್ತುತ ಶೇಕಡಾ 0.52 ರಷ್ಟಿದೆ.
India reports 18,454 new cases in the last 24 hours; Active caseload stands at 1,78,831. Recovery Rate currently at 98.15%; highest since March 2020: Ministry of Health and Family Welfare pic.twitter.com/TyBaP7EZW1
— ANI (@ANI) October 21, 2021
ಸಕ್ರಿಯ ಪ್ರಕರಣಗಳ ಸಂಖ್ಯೆ 1,78,831 ಆಗಿದೆ. 1.34 ಶೇಕಡಾ ಸಾಪ್ತಾಹಿಕ ಧನಾತ್ಮಕ ದರವು ಕಳೆದ 118 ದಿನಗಳಲ್ಲಿ ಮೂರು ಶೇಕಡಾಕ್ಕಿಂತ ಕಡಿಮೆಯಿದೆ. 1.48 ಶೇಕಡಾ ದೈನಂದಿನ ಧನಾತ್ಮಕ ದರವು ಕಳೆದ 52 ದಿನಗಳಲ್ಲಿ ಮೂರು ಶೇಕಡಾಕ್ಕಿಂತ ಕಡಿಮೆಯಿದೆ.
ಬುಧವಾರ 12,47,506 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೊವಿಡ್ -19 ಪತ್ತೆಗಾಗಿ ನಡೆಸಿದ ಒಟ್ಟು ಪರೀಕ್ಷೆಗಳ ಸಂಖ್ಯೆ 59,57,42,218 ಆಗಿದೆ.
ಆಗಸ್ಟ್ 7, 2020 ರಂದು ಭಾರತದ ಕೊವಿಡ್ -19 ಸಂಖ್ಯೆ 20 ಲಕ್ಷ ದಾಟಿದೆ. ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ. ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿತು; ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ ದಾಟಿದೆ. ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿಯನ್ನು ದಾಟಿತ್ತು. ಭಾರತವು ಮೇ 4 ರಂದು ಎರಡು ಕೋಟಿ ಕೊರೊನಾವೈರಸ್ ಪ್ರಕರಣಗಳ ಭೀಕರ ಮೈಲುಗಲ್ಲನ್ನು ಮತ್ತು ಜೂನ್ 23 ರಂದು ಮೂರು ಕೋಟಿಯನ್ನು ದಾಟಿದೆ.
160 ಹೊಸ ಸಾವುಗಳಲ್ಲಿ ಕೇರಳದಿಂದ 82, ಮಹಾರಾಷ್ಟ್ರದಿಂದ 21 ಮತ್ತು ತಮಿಳುನಾಡಿನಿಂದ 20 ಮಂದಿ ಸೇರಿದ್ದಾರೆ. ಮಹಾರಾಷ್ಟ್ರದಿಂದ 1,39,886, ಕರ್ನಾಟಕದಿಂದ 37,976, ತಮಿಳುನಾಡಿನಿಂದ 35,948, ಕೇರಳದಿಂದ 27,084, ದೆಹಲಿಯಿಂದ 25,090, ಉತ್ತರ ಪ್ರದೇಶದಿಂದ 22,898 ಮತ್ತು ಪಶ್ಚಿಮಬಂಗಾಳದಿಂದ 19,007 ಸೇರಿದಂತೆ ಒಟ್ಟು 4,52,811 ಕೊರೊನಾವೈರಸ್-ಸಂಬಂಧಿತ ಸಾವುಗಳು ದೇಶದಲ್ಲಿ ಈವರೆಗೆ ವರದಿಯಾಗಿದೆ.
ಇದನ್ನೂ ಓದಿ:Coronavirus ಭಾರತದಲ್ಲಿ ಕೊವಿಡ್ ಸ್ಥಳೀಯ ಹಂತವನ್ನು ಪ್ರವೇಶಿಸಿದೆ ಎಂದ ತಜ್ಞರು
Published On - 10:36 am, Thu, 21 October 21