ಚೀನಾ ಸೇರಿದಂತೆ 6 ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಆರ್​ಟಿಪಿಸಿಆರ್​​ ಪರೀಕ್ಷೆ ಕಡ್ಡಾಯ

ನಿನ್ನೆಯಿಂದಲೇ ಈ ಆದೇಶ ಜಾರಿಯಾಗಿದ್ದು, ಪ್ರಯಾಣಿಕರು ಪ್ರಯಾಣದ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ ತಮ್ಮ ಕೊವಿಡ್ ಪರೀಕ್ಷೆಯ ನೆಗೆಟಿವ್ ರಿಪೋರ್ಟ್​ ಅನ್ನು ಅಪ್‌ಲೋಡ್ ಮಾಡಬೇಕು.

ಚೀನಾ ಸೇರಿದಂತೆ 6 ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಆರ್​ಟಿಪಿಸಿಆರ್​​ ಪರೀಕ್ಷೆ ಕಡ್ಡಾಯ
ಚೀನಾದಲ್ಲಿ ಕೊವಿಡ್
Follow us
| Updated By: ಸುಷ್ಮಾ ಚಕ್ರೆ

Updated on: Jan 02, 2023 | 10:51 AM

ನವದೆಹಲಿ: ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್‌ನಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಜನವರಿ 1ರಿಂದ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು (RT-PCR Test) ಕಡ್ಡಾಯಗೊಳಿಸಲಾಗಿದೆ. ನಿನ್ನೆಯಿಂದಲೇ ಈ ಆದೇಶ ಜಾರಿಯಾಗಿದ್ದು, ಪ್ರಯಾಣಿಕರು ಪ್ರಯಾಣದ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ (Air Suvidha Portal) ತಮ್ಮ ಕೊವಿಡ್ ಪರೀಕ್ಷೆಯ ನೆಗೆಟಿವ್ ರಿಪೋರ್ಟ್​ ಅನ್ನು ಅಪ್‌ಲೋಡ್ ಮಾಡಬೇಕು. ಭಾರತಕ್ಕೆ ಪ್ರಯಾಣ ಬೆಳೆಸುವ 72 ಗಂಟೆಗಳಿಗೂ ಮುನ್ನ ಅವರು ಕೊವಿಡ್ ಪರೀಕ್ಷೆ (COVID Test) ನಡೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಪ್ರಪಂಚದಾದ್ಯಂತ ಹೆಚ್ಚುತ್ತಿರುವ COVID-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ವಿಶ್ವದಾದ್ಯಂತ ಅದರಲ್ಲೂ ಮುಖ್ಯವಾಗಿ ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್‌ ದೇಶಗಳಲ್ಲಿ ಹೆಚ್ಚುತ್ತಿರುವ ಕೊವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: Covid-19 4th Wave: ಚೀನಾದ ಹೊಸ ಕೊವಿಡ್ ರೂಪಾಂತರಿ ಮನುಷ್ಯನ ಮೆದುಳಿನ ಮೇಲೆ ದಾಳಿ ಮಾಡುತ್ತದಾ?; ತಜ್ಞರು ಹೇಳೋದಿಷ್ಟು

ಭಾರತದಲ್ಲಿ ಗುರುವಾರ 268 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿತ್ತು. ಇದು ಡಿಸೆಂಬರ್ 2ರಿಂದ ಅತಿ ಹೆಚ್ಚು ದಾಖಲಾಗಿರುವ ಕೊವಿಡ್ ಪ್ರಕರಣಗಳು ಎಂದು ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ