AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19 4th Wave: ಚೀನಾದ ಹೊಸ ಕೊವಿಡ್ ರೂಪಾಂತರಿ ಮನುಷ್ಯನ ಮೆದುಳಿನ ಮೇಲೆ ದಾಳಿ ಮಾಡುತ್ತದಾ?; ತಜ್ಞರು ಹೇಳೋದಿಷ್ಟು

ವಿಜ್ಞಾನಿಗಳ ಹೊಸ ಅಧ್ಯಯನವು ಕೊವಿಡ್ ವೈರಸ್‌ಗಳು ವಿಕಸನಗೊಂಡಂತೆ ಕಡಿಮೆ ಅಪಾಯಕಾರಿಯಾಗುತ್ತವೆ ಎಂಬ ಊಹೆಗಳಿಗೆ ಸವಾಲು ಹಾಕಿದೆ.

Covid-19 4th Wave: ಚೀನಾದ ಹೊಸ ಕೊವಿಡ್ ರೂಪಾಂತರಿ ಮನುಷ್ಯನ ಮೆದುಳಿನ ಮೇಲೆ ದಾಳಿ ಮಾಡುತ್ತದಾ?; ತಜ್ಞರು ಹೇಳೋದಿಷ್ಟು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 29, 2022 | 8:57 AM

Share

ಬೀಜಿಂಗ್: ಚೀನಾದಲ್ಲಿ ಮತ್ತೆ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳು (Covid Cases) ಇದೀಗ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಚೀನಾದಲ್ಲಿ (China Coronavirus Variant) ಕಾಣಿಸಿಕೊಂಡಿರುವ ಕೊವಿಡ್​ನ ಬಿಎಫ್​.7 ಉಪರೂಪಾಂತರಿ ಕೊವಿಡ್​ ಪ್ರಕರಣಗಳ ಭಾರೀ ಏರಿಕೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಸಂಶೋಧಕರ ಪ್ರಕಾರ, ಕೊರೊನಾವೈರಸ್‌ನ ಬಿಎ.5 ಉಪರೂಪಾಂತರಿ ಕೂಡ ಮನುಷ್ಯನ ಮೆದುಳಿನ ಮೇಲೆ ದಾಳಿ ಮಾಡಲು ವಿಕಸನಗೊಳ್ಳುತ್ತಿರಬಹುದು.

ವಿಜ್ಞಾನಿಗಳ ಹೊಸ ಅಧ್ಯಯನವು ಕೊವಿಡ್ ವೈರಸ್‌ಗಳು ವಿಕಸನಗೊಂಡಂತೆ ಕಡಿಮೆ ಅಪಾಯಕಾರಿಯಾಗುತ್ತವೆ ಎಂಬ ಊಹೆಗಳಿಗೆ ಸವಾಲು ಹಾಕಿದೆ. ಕೊವಿಡ್ -19 ಮಾನವನ ದೇಹದ ಮೇಲೆ ದಾಳಿ ಮಾಡುವ ಮಾರ್ಗವನ್ನು ಬದಲಾಯಿಸುತ್ತಿರಬಹುದು ಮತ್ತು ಮನುಷ್ಯನ ಉಸಿರಾಟದ ವ್ಯವಸ್ಥೆಯ ಬದಲಿಗೆ ಮೆದುಳನ್ನು ಹೆಚ್ಚು ಗುರಿಯಾಗಿಸಿಕೊಳ್ಳುತ್ತಿರಬಹುದು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ಇಬ್ಬರಿಗೆ ಕೊವಿಡ್ ಸೋಂಕು ದೃಢ

ಹಿಂದಿನ BA.1 ಸಬ್‌ವೇರಿಯಂಟ್‌ಗೆ ಹೋಲಿಸಿದರೆ ಚೀನಾದಲ್ಲಿ ಇದೀಗ ಕಾಣಿಸಿಕೊಂಡಿರುವ BF.7 ಉಪರೂಪಾಂತರಿ ಹೆಚ್ಚು ಆತಂಕಕಾರಿಯಾಗಿದೆ. ಇದಕ್ಕೂ ಹಿಂದೆ ಇದ್ದ BA.5 ಎಂಬ ಸಬ್‌ವೇರಿಯಂಟ್ ಇಲಿಗಳ ಮಿದುಳುಗಳು ಮತ್ತು ಮಾನವ ಮೆದುಳಿನ ಅಂಗಾಂಶಗಳಿಗೆ ತೀವ್ರ ಹಾನಿಯನ್ನುಂಟುಮಾಡಿದೆ ಎಂದು ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನ ಸಂಶೋಧಕರು ಹೇಳಿದ್ದಾರೆ. ಮೆದುಳಿನ ಮೇಲಿನ ದಾಳಿಯು ಮೆದುಳಿನ ಉರಿಯೂತ, ತೂಕ ಕಡಿಮೆಯಾಗುವುದು ಮತ್ತು ಸಾವಿಗೂ ಕಾರಣವಾಗಿದೆ ಎಂದು ಚೀನಾ ಮೂಲದ ದಿನಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: Covid Alert: ಚೀನಾದಿಂದ ಬರುವ ಪ್ರಯಾಣಿಕರಿಗೆ ಅಮೆರಿಕದಲ್ಲಿ ಕೊವಿಡ್ ಪರೀಕ್ಷೆ ಕಡ್ಡಾಯ

ಆದರೆ, ಸದ್ಯಕ್ಕೆ ಇಲಿಗಳ ಮೇಲೆ ಈ ಪ್ರಯೋಗ ಮಾಡಲಾಗಿರುವುದರಿಂದ ಇದು ಇಲಿಗಳ ಮೆದುಳಿಗೆ ಮಾತ್ರ ಅನ್ವಯವಾಗಬಹುದು. ಮನುಷ್ಯರ ಮೆದುಳಿನ ಮೇಲೆ ಅಷ್ಟು ಗಾಢವಾದ ಪರಿಣಾಮ ಉಂಟಾಗಲಾರದು ಎಂದು ಕೂಡ ಕೆಲವು ತಜ್ಞರು ಹೇಳಿದ್ದಾರೆ.

ಕೊವಿಡ್​ನಿಂದ ಚೀನಾ 2 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಜನರನ್ನು ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಆದರೆ ಕೆಲವು ಜಾಗತಿಕ ಆರೋಗ್ಯ ತಜ್ಞರು ಕೊರೊನಾವೈರಸ್ ಪ್ರತಿದಿನ 1 ಮಿಲಿಯನ್ ಜನರಿಗೆ ಸೋಂಕು ತಗುಲಿಸಬಹುದು ಎಂದು ಅಂದಾಜಿಸಿದ್ದಾರೆ. ಚೀನಾದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಚೀನಾ ಪ್ರತಿದಿನ ಕೊವಿಡ್ ಸೋಂಕಿತರ ಪಟ್ಟಿಯನ್ನು ಬಿಡುಗಡೆ ಮಾಡುವುದನ್ನೇ ನಿಲ್ಲಿಸಿದೆ. ಇದು ಬೇರೆ ದೇಶಗಳಲ್ಲಿ ಕಳವಳ ಉಂಟುಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು