ಕದನವಿರಾಮ ಪ್ರಸಂಗ: ಬೇರೆಯೇ ಕಥೆ ಹೇಳುತ್ತವೆ ಭಾರತ ಮತ್ತು ಪಾಕಿಸ್ತಾನ ನಾಯಕರ ಹೇಳಿಕೆಗಳು

India and Pakistan leaders' statement on ceasefire: ಭಾರತ ಮತ್ತು ಪಾಕಿಸ್ತಾನದ ನಾಯಕರು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲು ಘೋಷಣೆ ಮಾಡಿದರು. ಪಾಕಿಸ್ತಾನದ ನಾಯಕರು ಟ್ರಂಪ್ ಅವರನ್ನು ಹೊಗಳುತ್ತಾ, ಕದನ ವಿರಾಮ ಘೋಷಣೆ ಸ್ವಾಗತಿಸಿದರು. ಆದರೆ, ಭಾರತದ ನಾಯಕರು ನೀಡಿದ ಹೇಳಿಕೆಯಲ್ಲಿ ಟ್ರಂಪ್ ಇರಲಿ, ಅಮೆರಿಕದ ಹೆಸರನ್ನೂ ಎತ್ತದೇ ಇದ್ದದ್ದು ಗಮನಾರ್ಹ.

ಕದನವಿರಾಮ ಪ್ರಸಂಗ: ಬೇರೆಯೇ ಕಥೆ ಹೇಳುತ್ತವೆ ಭಾರತ ಮತ್ತು ಪಾಕಿಸ್ತಾನ ನಾಯಕರ ಹೇಳಿಕೆಗಳು
ಡೊನಾಲ್ಡ್ ಟ್ರಂಪ್

Updated on: May 11, 2025 | 1:57 PM

ನವದೆಹಲಿ, ಮೇ 11: ಭಾರತ ಮತ್ತು ಪಾಕಿಸ್ತಾನ ನಡುವೆ ಮಿಸೈಲ್, ಡ್ರೋನ್, ಬಾಂಬುಗಳ ಚಕಮಕಿಯ ನಡುವೆ ನಿನ್ನೆ ಸಂಜೆ ಡೊನಾಲ್ಡ್ ಟ್ರಂಪ್ ದಿಢೀರ್ ತಮ್ಮ ಎಕ್ಸ್​​ನಲ್ಲಿ ಸೀಸ್ ಫೈರ್ (Ceasefire) ಘೋಷಣೆ ಮಾಡಿದರು. ಭಾರತ ಮತ್ತು ಪಾಕಿಸ್ತಾನ ದೇಶಗಳು (India-Pakistan) ತತ್​ಕ್ಷಣದ ಮತ್ತು ಪೂರ್ಣ ಕದನ ವಿರಾಮಕ್ಕೆ ಒಪ್ಪಿವೆ ಎಂದು ಆ ಪೋಸ್ಟ್​​​ನಲ್ಲಿ ಟ್ರಂಪ್ ಬರೆದರು. ಅಷ್ಟೇ ಅಲ್ಲ, ಸಾಮಾನ್ಯ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಬಳಸಿದ ಎರಡೂ ದೇಶಗಳಿಗೆ ಧನ್ಯವಾದ ಎಂದು ಹೇಳಿದರು. ಅವರ ಭಾಷೆಯ ಬಳಕೆಯಲ್ಲಿ ವ್ಯಂಗ್ಯವೂ ಕಂಡಿದ್ದರೆ ಅಚ್ಚರಿ ಇಲ್ಲ. ಈ ಹಿಂದೆಯೂ ಅವರು ಆಪರೇಷನ್ ಸಿಂದೂರದ ಬಳಿಕ ಉದ್ಧಟತನ ಎಂದನಿಸುವ ಹೇಳಿಕೆ ನೀಡಿದ್ದರು. ಭಾರತ ಮತ್ತು ಪಾಕಿಸ್ತಾನದ ವರ್ತನೆಯನ್ನು ನಾಚಿಕೆಗೇಡಿತನ ಎಂದು ಮಾತಿನಿಂದ ತಿವಿದಿದ್ದರು. ಈ ಎರಡೂ ದೇಶಗಳು ದಶಕಗಳು, ಶತಮಾನಗಳಿಂದಲೂ ಕಿತ್ತಾಡುತ್ತಿವೆ ಎಂದು ಲೇವಡಿ ಮಾಡಿದ್ದರು.

ನಿನ್ನೆ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮಕ್ಕೆ ಒಪ್ಪಿವೆ ಎಂದು ಮೊದಲು ಘೋಷಣೆ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಮೆರಿಕಕ್ಕೆ ಧನ್ಯವಾದ ಹೇಳಿ ಪೋಸ್ಟ್ ಹಾಕಿದ್ದರು. ಪಾಕಿಸ್ತಾನದ ಇತರ ಮುಖಂಡರೂ ಕೂಡ ಕದನ ವಿರಾಮದಿಂದ ಖುಷಿಪಟ್ಟು ಪೋಸ್ಟ್ ಹಾಕಿದ್ದುಂಟು.

ಇದನ್ನೂ ಓದಿ
ಭಾರತದ ಈ ಮಿಸೈಲ್ ದಾಳಿಗೆ ಪಾಕ್ ಮಾತ್ರವಲ್ಲ, ಅಮೆರಿಕಕ್ಕೂ ಆಗಿತ್ತು ನಡುಕ
ಶಾಂತಿ ಕಾಪಾಡಿ ಎಂದ ಚೀನಾ ವಿದೇಶಾಂಗ ಸಚಿವಗೆ ಅಜಿತ್ ದೋವಲ್ ಹೇಳಿದ್ದೇನು?
ಭಾರತ ಯುದ್ಧದಲ್ಲಿ ಮೇಲುಗೈ ಸಾಧಿಸಿದಾಗಲೆಲ್ಲಾ ಅಮೆರಿಕದ ಮೊರೆ ಹೋಗುವ ಪಾಕ್
ಆಪರೇಷನ್​ ಸಿಂಧೂರ್​ನಿಂದ ಕದನ ವಿರಾಮದವರೆಗೆ, 86 ಗಂಟೆಗಳಲ್ಲಿ ಏನೇನು ನಡೀತು?

ಸಂಜೆ 6ಗಂಟೆಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿರುವ ಸಂಗತಿ ಘೋಷಿಸಿದರು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಒಪ್ಪಿರುವುದನ್ನು ತಿಳಿಸಿದರು. ಆದರೆ, ಇಬ್ಬರೂ ಕೂಡ ಅಮೆರಿಕದ ಮಧ್ಯಪ್ರವೇಶದ ವಿಚಾರ ಇರಲಿ, ಅದರ ಹೆಸರನ್ನೇ ಎತ್ತಲಿಲ್ಲ ಎಂಬುದು ಕುತೂಹಲ. ವಿಕ್ರಮ್ ಮಿಸ್ರಿ ಅವರಂತೂ ಪತ್ರಿಕಾಗೋಷ್ಠಿಯಲ್ಲಿ ಬಹಳ ಚಿಕ್ಕದಾಗಿ ಕದನ ವಿರಾಮ ನಿರ್ಧಾರ ಪ್ರಕಟಿಸಿ ಹಾಗೇ ಎದ್ದುಹೋಗಿಬಿಟ್ಟರು. ಅವರ ಮಾತಿನಲ್ಲಿ ಉತ್ಸಾಹ ಇರಲಿಲ್ಲ. ಮಾಧ್ಯಮದವರ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ಹೇಳುವ ಉತ್ಸಾಹವೂ ಇರಲಿಲ್ಲ.

ಇದನ್ನೂ ಓದಿ: ಹೇಗಾದ್ರೂ ಕಿತ್ತಾಡಿಕೊಳ್ಳಿ ಎನ್ತಿದ್ದ ಅಮೆರಿಕ ದಿಢೀರ್ ಮಧ್ಯಪ್ರವೇಶಿಸಲು ಕಾರಣವಾಗಿತ್ತು ಭಾರತದ ಈ ಒಂದು ಅಟ್ಯಾಕ್

ಪಾಕಿಸ್ತಾನದ ವಿಚಾರದಲ್ಲಿ ಅಮೆರಿಕವಾಗಲೀ, ಮೂರನೇ ದೇಶವಾಗಲಿ ಮೂಗು ತೋರಿಸುವುದು ಭಾರತಕ್ಕೆ ಮೊದಲಿಂದಲೂ ಇಷ್ಟ ಇರಲಿಲ್ಲ. ಈಗಲೂ ಅದು ಇದ್ದಂತಿಲ್ಲ ಎಂದೆನ್ನುತ್ತಾರೆ ಅಮೆರಿಕದ ಥಿಂಕ್ ಟ್ಯಾಂಕ್ ಎನಿಸಿದ ಹಡ್ಸನ್ ಇನ್ಸ್​​ಟಿಟ್ಯೂಟ್​ನಲ್ಲಿ ರಿಸರ್ಚ್ ಫೆಲೋ ಆಗಿರುವ ಡಾ. ಅಪರ್ಣಾ ಪಾಂಡೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:53 pm, Sun, 11 May 25